ನವದೆಹಲಿ, ಏಪ್ರಿಲ್ 30: ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಇಡೀ ಜಮ್ಮು ಮತ್ತು ಕಾಶ್ಮೀರವನ್ನು ತನ್ನ ನೆಟ್ವರ್ಕ್ ನಕ್ಷೆಯಲ್ಲಿ ಪಾಕಿಸ್ತಾನದ (Pakistan) ಭಾಗವೆಂದು ತೋರಿಸಿದ ನಂತರ ನೇಪಾಳ ಏರ್ಲೈನ್ಸ್ ಟೀಕೆಗೆ ಗುರಿಯಾಗಿದೆ. ಬುಧವಾರ ಏರ್ಲೈನ್ಸ್ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳನ್ನು ಪಾಕಿಸ್ತಾನದ ಪ್ರದೇಶದ ಭಾಗವಾಗಿ ತೋರಿಸಿರುವ ನಕ್ಷೆಯನ್ನು ಹಂಚಿಕೊಂಡ ನಂತರ ವಿವಾದ ಭುಗಿಲೆದ್ದಿತು.
ಈ ಫೋಟೋ ಎಕ್ಸ್ ಮತ್ತು ಫೇಸ್ಬುಕ್ನಲ್ಲಿ ವೈರಲ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಇದು ಭಾರತೀಯ ಬಳಕೆದಾರರಿಂದ ಟೀಕೆಗೆ ಗುರಿಯಾಯಿತು. ಈ ವಿಷಯ ವೈರಲ್ ಆದ ಕೂಡಲೆ ಸೋಷಿಯಲ್ ಮೀಡಿಯಾದಲ್ಲಿ #BoycottNepalAirlines ಎಂಬ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ಗೆ ಬರಲು ಪ್ರಾರಂಭಿಸಿತು.
We sincerely apologize for error in the network map recently shared on our social media channels. The map contained significant cartographic inaccuracies regarding international boundaries that do not reflect the official stance of Nepal or Nepal Airlines. pic.twitter.com/E5MZSS8CjQ
— Nepal Airlines🇳🇵 (@NepalAirlinesRA) April 30, 2026
ಸೋಷಿಯಲ್ ಮೀಡಿಯಾ ಬಳಕೆದಾರರು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ವಿಮಾನಯಾನ ಸಚಿವಾಲಯವನ್ನು ನೇಪಾಳದೊಂದಿಗೆ ರಾಜತಾಂತ್ರಿಕ ಪ್ರತಿಭಟನೆ ಸಲ್ಲಿಸುವಂತೆ ಒತ್ತಾಯಿಸಿದರು. ಭಾರತ ಹಲವು ದಶಕಗಳಿಂದ ಲಕ್ಷಾಂತರ ನೇಪಾಳಿಗಳಿಗೆ ಉದ್ಯೋಗ ನೀಡುವ ಮೂಲಕ, ವ್ಯಾಪಾರ ಪ್ರವೇಶವನ್ನು ನೀಡುವ ಮೂಲಕ, ಇಂಧನ ನೀಡುವ ಮೂಲಕ, ವಿದ್ಯುತ್ ಯೋಜನೆಗಳಿಗೆ ಹಣಕಾಸು ಒದಗಿಸುವ ಮೂಲಕ ಮತ್ತು ವಿಪತ್ತು ಪರಿಹಾರವನ್ನು ಒದಗಿಸುವ ಮೂಲಕ ನೇಪಾಳದ ಆರ್ಥಿಕತೆಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಹಲವಾರು ಬಳಕೆದಾರರು ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್ಪಿಎಫ್ ಯೋಧರು! ವಿಡಿಯೋ ನೋಡಿ
ವಿಮಾನಯಾನ ಸಂಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ ಹಲವಾರು ಭಾರತೀಯ ಬಳಕೆದಾರರಲ್ಲಿ ಭೋಜ್ಪುರಿ ನಟ-ಗಾಯಕ ಖೇಸರಿಲಾಲ್ ಯಾದವ್ ಕೂಡ ಇದ್ದರು. ಅವರು ಇದು ಉದ್ದೇಶಪೂರ್ವಕವಾಗಿ ಪ್ರಚೋದಿಸಲು ಉದ್ದೇಶಿಸಲಾದ ಕೃತ್ಯವಾಗಿರಬಹುದು ಎಂದು ಆರೋಪ ಮಾಡಿದ್ದರು. ಈ ವಿಚಾರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ನೇಪಾಳ ಏರ್ಲೈನ್ಸ್ ಪೋಸ್ಟ್ ಅನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿತು. ಅದು ನೇಪಾಳ ಅಥವಾ ಏರ್ಲೈನ್ಸ್ನ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:35 pm, Thu, 30 April 26