Headlines

‘ಜೆನ್-ಜಿ ದೇಶವಿರೋಧಿಗಳಲ್ಲ, ಅವರ ಬಗ್ಗೆ ಕುರುಡು ನಂಬಿಕೆಯಿದೆ’; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ – Kannada News | ‘Gen Z Is Not Anti National, I trust them blindly,; RSS Chief Mohan Bhagwat Says

ನವದೆಹಲಿ, ಆಗಸ್ಟ್ 6: ಸಿಜೆಪಿ ನೇತೃತ್ವದಲ್ಲಿ ದೇಶಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಇತ್ತೀಚೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜೆನ್​-ಜಿಗಳು ಈ ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಪೊಲೀಸರ ಲಾಠಿಚಾರ್ಜ್ ರುಚಿಯನ್ನೂ ನೋಡಿದ್ದರು. ಈ ಪ್ರತಿಭಟನೆ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿತ್ತು. ಇದರ ಬೆನ್ನಲ್ಲೇ ಇಂದು ಬೃಹತ್ ಯುವ ಸಮಾವೇಶವೊಂದರಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂವಾದದಲ್ಲಿ ಮಾತನಾಡಿದ ಅವರು ಜೆನ್​ ಜಿ ಕುರಿತಾಗಿ ಬಹಳ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಪ್ರತಿಭಟನೆ ನಡೆಸಿದವರನ್ನು ‘ದೇಶವಿರೋಧಿಗಳು’ ಎಂದು ಕರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಜೆನ್-ಜಿ ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಅವರು ದೇಶವಿರೋಧಿಗಳಲ್ಲ. ಅವರು ನಮ್ಮದೇ ಜನರು, ನಮ್ಮ ಮುಂದಿನ ಪೀಳಿಗೆ. ಹೊಸ ಪೀಳಿಗೆ ಅಂದರೆ ಜೆನ್ ಜಿ ಮತ್ತು ಜೆನ್ ಆಲ್ಫಾ ನಮ್ಮ ಪ್ರಸ್ತುತ ಪೀಳಿಗೆಗಿಂತ ಹೆಚ್ಚು ಪ್ರಾಮಾಣಿಕವಾಗಿದೆ ಎಂದು ನಾನು ಭಾವಿಸುತ್ತೇನೆ. ದೇಶಭಕ್ತಿ ಮತ್ತು ಸೇವೆಯ ಪ್ರಾಮಾಣಿಕ ಕರೆಗೆ ಅವರು ಸ್ಪಂದಿಸುತ್ತಾರೆ” ಎಂದಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಮಾತುಕತೆಯ ಕುರಿತು ಮಾತನಾಡಿದ ಮೋಹನ್ ಭಾಗವತ್, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಹ ಸರ್ವಸಮ್ಮತಿಯನ್ನು ತಲುಪುವ ಒಂದು ಮಾರ್ಗವಾಗಿದೆ. ಹಲವು ಅಭಿಪ್ರಾಯಗಳು ಒಂದೆಡೆ ಸೇರಿ ಚರ್ಚೆಯ ನಂತರ ಸರ್ವಸಮ್ಮತಿ ರೂಪುಗೊಳ್ಳುತ್ತದೆ. ಆ ಚರ್ಚೆಯು ಮಾತುಕತೆಯ ಮೂಲಕವೂ ನಡೆಯಬಹುದು. ಆದರೆ, ಪ್ರಜಾಪ್ರಭುತ್ವದಲ್ಲಿ ಎಲ್ಲದಕ್ಕೂ ಒಂದು ನಿಯಮಗಳಿರುತ್ತವೆ. ಆ ನಿಯಮಗಳನ್ನು ನಾವು ಮೀರಬಾರದು. ಯುವಜನರ ಸಂಕಷ್ಟಗಳು ನಿಜವಾದುದು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯವಿದೆ” ಎಂದು ಅವರು ಹೇಳಿದರು.

ಜುಲೈ 20ರಂದು ಸಂಸತ್ತಿಗೆ ಮೆರವಣಿಗೆ ನಡೆಸಲು ಯತ್ನಿಸಿದ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪ್ರತಿಭಟನೆಯ ಕೇಂದ್ರಸ್ಥಳವಾದ ಜಂತರ್ ಮಂತರ್‌ನಲ್ಲಿ ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಹಾಗೂ ಕೆಲವರ ಮೇಲೆ ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಿದ ದೃಶ್ಯಗಳು ಕಂಡುಬಂದಿದ್ದವು.

Source link

Leave a Reply

Your email address will not be published. Required fields are marked *