Headlines

ಟರ್ಮ್ ಲೋನ್ ಮಾತ್ರ ಕೊಡಿ, ರಿವಾಲ್ವಿಂಗ್ ಕ್ರೆಡಿಟ್ ಬೇಡ: NBFCಗಳಿಗೆ ಬರಲಿದೆ ಹೊಸ ಮಾರ್ಗಸೂಚಿ – Kannada News | Rbi drafts guidelines to nbfcs proposing ban on revolving credit

ನವದೆಹಲಿ, ಆಗಸ್ಟ್ 7: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ (NBFC) ಸಂಬಂಧಿಸಿದಂತೆ ಮಹತ್ವದ ಕರಡು ಮಾರ್ಗಸೂಚಿಯನ್ನು (Draft Guidelines) ಹೊರಡಿಸಿದ್ದು, NBFCಗಳು ತಮ್ಮ ಗ್ರಾಹಕರಿಗೆ ರಿವಾಲ್ವಿಂಗ್ ಕ್ರೆಡಿಟ್ (Revolving Credit) ಸೌಲಭ್ಯಗಳನ್ನು ನೀಡುವುದನ್ನು ನಿಷೇಧಿಸಲು ಮತ್ತು ಕೇವಲ ಟರ್ಮ್ ಲೋನ್ (Term Loans) ನೀಡಲು ಮಾತ್ರವೇ ಅನುಮತಿ ನೀಡಲು ಪ್ರಸ್ತಾವಿಸಿದೆ.

ರಿವಾಲ್ವಿಂಗ್ ಕ್ರೆಡಿಟ್‌ಗೆ ನಿಷೇಧ

ಫ್ಲೆಕ್ಸಿ ಲೋನ್, ಡಿಜಿಟಲ್ ಕ್ರೆಡಿಟ್ ಲೈನ್ ಅಥವಾ ಓವರ್‌ಡ್ರಾಫ್ಟ್ ಮಾದರಿಯ ಸಾಲಗಳಲ್ಲಿ ಗ್ರಾಹಕರು ಪಡೆದ ಸಾಲವನ್ನು ಮರುಪಾವತಿಸಿದ ನಂತರ ಮತ್ತೆ ಅಷ್ಟೇ ಹಣವನ್ನು ಮರು-ಬಳಕೆ ಮಾಡಿಕೊಳ್ಳುವ (reusable credit) ಸೌಲಭ್ಯಕ್ಕೆ ರಿವಾಲ್ವಿಂಗ್ ಕ್ರೆಡಿಟ್ ಎನ್ನುತ್ತಾರೆ. NBFCಗಳು ಇಂಥ ಸಾಲ ನೀಡುವಂತಿಲ್ಲ ಎಂದು ಆರ್​ಬಿಐನ ಪ್ರಸ್ತಾವಿತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲೂ ವಿದೇಶಿಗರ ನೆರವಿನ ಹಸ್ತಕ್ಕೆ ಕೈಚಾಚದ ಬೆಂಗಳೂರು ಸ್ಟಾರ್ಟಪ್; ಭಾರತದ ಮೊದಲ ಎಂಆರ್​ಐ ನಿರ್ಮಿಸಿದವನ ಕಥೆ

ಟರ್ಮ್ ಲೋನ್‌ಗಳಿಗೆ ಮಾತ್ರ ಅವಕಾಶ

NBFCಗಳು ನೀಡುವ ಸಾಲಗಳು ನಿರ್ದಿಷ್ಟ ಮೊತ್ತ (fixed principal) ಹಾಗೂ ಮುಂಚಿತವಾಗಿ ನಿಗದಿಯಾದ ಕಂತುಗಳ ಮರುಪಾವತಿ ವೇಳಾಪಟ್ಟಿಯನ್ನು (predetermined amortisation schedule) ಹೊಂದಿರಬೇಕು. ಒಮ್ಮೆ ಸಾಲದ ಕಂತು ಮರುಪಾವತಿಯಾದರೆ, ಆ ಸಾಲದ ಮಿತಿಯು ಮತ್ತೆ ಸಕ್ರಿಯಗೊಳ್ಳುವಂತಿಲ್ಲ ಎಂದು ಈ ಕರಡು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಕ್ರೆಡಿಟ್ ಕಾರ್ಡ್ ನೀಡುವ NBFCಗಳಿಗೆ ವಿನಾಯಿತಿ

ಆರ್‌ಬಿಐನಿಂದ ಕ್ರೆಡಿಟ್ ಕಾರ್ಡ್ ವಿತರಿಸಲು ಅಧಿಕೃತ ಅನುಮತಿ ಪಡೆದಿರುವ NBFCಗಳಿಗೆ (ಉದಾಹರಣೆಗೆ ಎಸ್‌ಬಿಐ ಕಾರ್ಡ್ಸ್) ಈ ನಿಯಮ ಅನ್ವಯಿಸುವುದಿಲ್ಲ, ಏಕೆಂದರೆ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯು ಸ್ವಾಭಾವಿಕವಾಗಿಯೇ ರಿವಾಲ್ವಿಂಗ್ ಕ್ರೆಡಿಟ್ ಸ್ವರೂಪದ್ದಾಗಿದೆ.

ಇದನ್ನೂ ಓದಿ: ಬಿಎಸ್ಸೆನ್ನೆಲ್ ವೈಫೈ ಯೋಜನೆ ನೀರಲ್ಲಿ ಹೋಮ; ಸಾವಿರಾರು ಕೋಟಿ ರೂ ವೆಚ್ಚಕ್ಕೆ ಬದಲಾಗಿ ಸಿಕ್ಕ ಆದಾಯ ಸೊನ್ನೆ?

ಗ್ರಾಹಕರು ಮತ್ತು ಹಣಕಾಸು ವಲಯದ ಮೇಲಾಗುವ ಪರಿಣಾಮ

  • ಗ್ರಾಹಕರ ಮೇಲಿನ ಪರಿಣಾಮ: ಫಿನ್‌ಟೆಕ್ ಆ್ಯಪ್‌ಗಳು ಹಾಗೂ NBFCಗಳ ಮೂಲಕ ಕ್ರೆಡಿಟ್ ಲೈನ್ ಬಳಸಿ ಅಗತ್ಯವಿದ್ದಾಗ ಹಣ ಪಡೆದು, ತೀರಿಸಿ ಮತ್ತೆ ಬಳಸುತ್ತಿದ್ದ ಗ್ರಾಹಕರು ಇನ್ಮುಂದೆ ಪ್ರತಿ ಬಾರಿ ಹೊಸ ಸಾಲಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
  • NBFC ಮತ್ತು ಫಿನ್‌ಟೆಕ್ ಸಂಸ್ಥೆಗಳ ಮೇಲೆ: ಬಜಾಜ್ ಫಿನ್‌ಸರ್ವ್ ಸೇರಿದಂತೆ ಹಲವು ರೀಟೇಲ್ ಲೋನ್ ನೀಡುವ NBFCಗಳು ಹಾಗೂ ಫಿನ್‌ಟೆಕ್ ಪಾರ್ಟ್ನರ್ ಸಂಸ್ಥೆಗಳು ತಮ್ಮ ‘ಫ್ಲೆಕ್ಸಿ ಲೋನ್’ ಮತ್ತು ‘ಕ್ರೆಡಿಟ್ ಲೈನ್’ ಉತ್ಪನ್ನಗಳ ಸ್ವರೂಪವನ್ನು ಮರುರೂಪಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *