Headlines

‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಯಾವಾಗ? ಬಿಡುಗಡೆ ದಿನಾಂಕ ನಿಗದಿ – Kannada News | Toxic movie trailer will release in March first week

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಟೀಸರ್ ಈಗಾಗಲೇ ಜಾಗತಿಕ ಮಟ್ಟದಲ್ಲಿ ಹವಾ ಸೃಷ್ಟಿಸಿದೆ. ಕೆಲ ವಾರಗಳ ಹಿಂದೆ ಬಿಡುಗಡೆ ಆಗಿದ್ದ ಟೀಸರ್ ಈಗಲೂ ಚರ್ಚೆಯಲ್ಲಿದೆ. ಈ ನಡುವೆ ಸಿನಿಮಾದ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಟ್ರೈಲರ್ ಇನ್ನೂ ದೊಡ್ಡ ಟ್ರೆಂಡ್ ಸೃಷ್ಟಿಸುವ ಸಾಧ್ಯತೆ ಇದೆ. ಸಿನಿಮಾದ ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮಾರ್ಚ್ 19ರಂದು ಆಗಲಿದೆ, ಸಿನಿಮಾದ ಬಿಡುಗಡೆಗೆ ಒಂದು ವಾರದ ಹಿಂದಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಮಾರ್ಚ್ ಮೊದಲ ವಾರದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಬಿಡುಗೆಡ ಆಗಿರುವ ಟೀಸರ್​​ಗಿಂತಲೂ ಸಖತ್ ಪವರ್​​ಫುಲ್ ಆಗಿರಲಿದೆಯಂತೆ ಸಿನಿಮಾದ ಟ್ರೈಲರ್.

‘ಟಾಕ್ಸಿಕ್’ ಸಿನಿಮಾದ ಹಕ್ಕುಗಳ ಮಾರಾಟ ಚಾಲ್ತಿಯಲ್ಲಿದ್ದು, ಆಂಧ್ರ-ತೆಲಂಗಾಣ, ಉತ್ತರ ಭಾರತ, ವಿದೇಶದ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಆಂಧ್ರ-ತೆಲಂಗಾಣದಲ್ಲಂತೂ ‘ಟಾಕ್ಸಿಕ್’ ಸಿನಿಮಾ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಸಿನಿಮಾದ ಹಕ್ಕುಗಳ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ಸೈಟ್ ವಿವಾದ; ಯಶ್ ತಾಯಿ ಪುಷ್ಪಾಗೆ ಮೊದಲ ಹಂತದ ಜಯ

‘ಟಾಕ್ಸಿಕ್’ ಸಿನಿಮಾದ ಪ್ರಚಾರವನ್ನು ಯಶ್ ಇನ್ನಷ್ಟೆ ಆರಂಭಿಸಬೇಕಿದೆ. ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದ ಪ್ರಚಾರಗಳಿಗೆ ದೇಶವೆಲ್ಲ ಸಂಚರಿಸಿ ಬಹಳ ಸಕ್ರಿಯಾಗಿ ಪರಚಾರ ಮಾಡಿದ್ದರು ಯಶ್. ಆದರೆ ‘ಟಾಕ್ಸಿಕ್’ ಸಿನಿಮಾಕ್ಕೆ ಬೇರೆಯದೇ ಮಾದರಿಯನ್ನು ಅನುಸರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಮುಖ ನಗರಗಳಲ್ಲಿ ದೊಡ್ಡ ಪ್ರೀ ರಿಲೀಸ್​​ಗಳನ್ನು ಆಯೋಜನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ಸಾಸ್ ನಿರ್ದೇಶನ ಮಾಡಿದ್ದು, ಸಿನಿಮಾದ ಕತೆಯನ್ನು ಯಶ್ ಅವರೂ ಸಹ ಬರೆದಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರುಗಳು ನಾಯಕಿಯರುಗಳಾಗಿ ನಟಿಸಿದ್ದಾರೆ. ಯಶ್ ಅವರು ಗ್ಯಾಂಗ್​​ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *