‘ಟಾಕ್ಸಿಕ್’ ಸೆಟ್‌ನಿಂದ ಬಿಗ್ ಅಪ್ಡೇಟ್: ಗೀತು ಮೋಹನ್‌ದಾಸ್ ಹುಟ್ಟುಹಬ್ಬಕ್ಕೆ ಮೇಕಿಂಗ್ ಝಲಕ್ ರಿಲೀಸ್

‘ಟಾಕ್ಸಿಕ್’ ಸೆಟ್‌ನಿಂದ ಬಿಗ್ ಅಪ್ಡೇಟ್: ಗೀತು ಮೋಹನ್‌ದಾಸ್ ಹುಟ್ಟುಹಬ್ಬಕ್ಕೆ ಮೇಕಿಂಗ್ ಝಲಕ್ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಪಂಚದಾದ್ಯಂತ ಭಾರಿ ಕುತೂಹಲ ಮೂಡಿಸಿದೆ. ಚಿತ್ರತಂಡದಿಂದ ಇಂದು ಪ್ರೇಕ್ಷಕರಿಗೆ ಬಿಗ್ ಸರ್ಪ್ರೈಸ್ ಸಿಕ್ಕಿದೆ. ಚಿತ್ರದ ನಿರ್ದೇಶಕಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಗೀತು ಮೋಹನ್‌ದಾಸ್ ಅವರ ಜನ್ಮದಿನದ ಅಂಗವಾಗಿ, ಚಿತ್ರದ ಮೇಕಿಂಗ್ ಝಲಕ್ ಒಳಗೊಂಡಿರುವ ವಿಶೇಷ ಬಿಟಿಎಸ್ ವಿಡಿಯೋ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ.

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾದ ಶೂಟಿಂಗ್ ಸೆಟ್‌ ಹಾಗೂ ಶೂಟಿಂಗ್ ಯಾವ ರೀತಿ ಇತ್ತು ಎಂಬುದನ್ನು ತೋರಿಸಲಾಗಿದೆ. ಈ ದೃಶ್ಯಾವಳಿಗಳು ಜನರಲ್ಲಿ ರೋಮಾಂಚನ ಉಂಟುಮಾಡಿದೆ.

ಸುಮಾರು ಒಂದು ನಿಮಿಷದ ಈ ಬಿಟಿಎಸ್ ವಿಡಿಯೋದಲ್ಲಿ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಇಡೀ ಚಿತ್ರತಂಡವನ್ನು ಮುನ್ನಡೆಸುತ್ತಿರುವುದು ಹೈಲೈಟ್ ಆಗಿದೆ. ಮೈಕ್ರೋಫೋನ್ ಹಿಡಿದು ಸೆಟ್‌ನಲ್ಲಿ ಕಲಾವಿದರಿಗೆ ಆ್ಯಕ್ಷನ್ ಕಟ್‌ ಹೇಳುತ್ತಾ, ಪ್ರತಿಯೊಂದು ದೃಶ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಸೂಪರ್‌ವೈಸ್ ಮಾಡುತ್ತಿರುವ ಅವರ ಶೈಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸೆಟ್‌ನಲ್ಲಿ ಅವರ ಅದ್ಭುತ ಮೇಕಿಂಗ್ ಕೌಶಲ್ಯ ಹಾಗೂ ವಿಷನ್ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ. ವಿಡಿಯೋದ ಕೊನೆಯಲ್ಲಿ ‘ಹ್ಯಾಪಿ ಬರ್ತ್‌ಡೇ ಗೀತು ಮೋಹನ್‌ದಾಸ್’ಎಂದು ಚಿತ್ರತಂಡ ಶುಭ ಕೋರಿದೆ.

ಬಿಟಿಎಸ್ ವಿಡಿಯೋದಲ್ಲಿ ಕಂಡುಬಂದಿರುವ ಬೃಹತ್ ಸೆಟ್‌ಗಳು, ಅದ್ದೂರಿ ಆ್ಯಕ್ಷನ್ ಸೀಕ್ವೆನ್ಸ್‌ಗಳು, ಸ್ಫೋಟದ ದೃಶ್ಯಗಳು ಹಾಗೂ ಚಿತ್ರೀಕರಣದ ಲೊಕೇಷನ್‌ಗಳು ‘ಟಾಕ್ಸಿಕ್’ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿದೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತಿವೆ. ಹಾಲಿವುಡ್ ಶೈಲಿಯ ಮೇಕಿಂಗ್ ಹೊಂದಿರುವ ಈ ಚಿತ್ರದ ಹಿಂದಿನ ಶ್ರಮ ಇಡೀ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ.

ಇದನ್ನೂ ಓದಿ: ‘ನಿಮ್ಮ ಲೈಫ್ ನೋಡಿಕೊಳ್ಳಿ’; ಕ್ಯಾನ್ಸರ್ ಪೀಡಿತ ಅಭಿಮಾನಿ ಜೊತೆ ಮಾತನಾಡಿದ ಯಶ್

ರಾಕಿಂಗ್ ಸ್ಟಾರ್ ಯಶ್ ಅವರ ಈ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಅಡಿಬರಹ ಹೊಂದಿದೆ. ಗೀತು ಮೋಹನ್‌ದಾಸ್ ಅವರ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ಆ್ಯಕ್ಷನ್ ಡ್ರಾಮಾ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ. ಸದ್ಯ ಈ ವಿಡಿಯೋ ಸಖತ್ ಟ್ರೆಂಡಿಂಗ್‌ನಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *