ಟಾಕ್ ಶೋ ಮೂಲಕ ಮರಳಿ ಬಂದ ‘ಓಜಿ’ ಕಮಿಡಿಯನ್ ಶೇಖರ್ ಸುಮನ್ – Kannada News | Shekhar Suman started talk show named Shekhar Tonite

ಶೇಖರ್ ಸುಮನ್ (Shekhar Suman), ಭಾರತದ ‘ಓಜಿ’ ಕಮಿಡಿಯನ್. ಇಂದು ಚಾಲ್ತಿಯಲ್ಲಿರುವ ಸ್ಟಾಂಡಪ್ ಕಾಮಿಡಿ, ಪೊಲಿಟಿಕಲ್ ಸಟೈರ್, ರಾಜಕಾರಣಿಗಳ ಮಿಮಿಕ್ರಿ, ಕ್ರಿಟಿಕಲ್ ಕಾಮಿಡಿ ಇನ್ನೂ ಹಲವು ವಿಭಾಗಗಳಲ್ಲಿ ಶೇಖರ್ ಸುಮನ್ ನೈಪುಣ್ಯತೆ ಹೊಂದಿದ್ದರು ಹಾಗೂ ಭಾರತದಲ್ಲಿ ಮೊದಲ ಬಾರಿಗೆ ಇದನ್ನೆಲ್ಲ ಪ್ರಯೋಗಿಸಿ ಯಶಸ್ವಿ ಆಗಿದ್ದಲ್ಲದೆ ಭಾರಿ ಜನಪ್ರಿಯತೆಯನ್ನೂ ಸಹ ಗಳಿಸಿದ್ದರು. ದಶಕಗಳಿಂದಲೂ ಭಾರತೀಯ ಟಿವಿ ಕ್ಷೇತ್ರದಲ್ಲಿ ಮೆರೆದ ಶೇಖರ್ ಸುಮನ್ ಕಮಿಡಿಯನ್​​ಗಳ ಹೊಸ ಅಲೆ ಬಂದ ಬಳಿಕ ತುಸು ಮಂಕಾಗಿದ್ದರು. ಇದೀಗ ಸುಮಾರು 14 ವರ್ಷಗಳ ನಂತರ ಮತ್ತೆ ತಮ್ಮದೇ ಆದ ವಿಶಿಷ್ಟ ಶೈಲಿಯ ಶೋ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ‘ಶೇಖರ್ ಟುನೈಟ್’ ಹೆಸರಿನ ಹೊಸ ಟಾಕ್ ಶೋ ಒಂದನ್ನು ಶೇಖರ್ ಸುಮನ್ ಯೂಟ್ಯೂಬ್​​ನಲ್ಲಿ ಪ್ರಾರಂಭಿಸಿದ್ದಾರೆ.

90ರ ದಶಕದಲ್ಲಿ ಸೂಪರ್ ಹಿಟ್ ಆಗಿದ್ದ ‘ಮೂವರ್ಸ್ ಅಂಡ್ ಶೇಕರ್ಸ್’ ಕಾರ್ಯಕ್ರಮದ ಮೂಲಕ ಭಾರತದಲ್ಲಿ ಲೇಟ್-ನೈಟ್ ಟಾಕ್ ಶೋ ಸಂಸ್ಕೃತಿಯನ್ನು ಪರಿಚಯಿಸಿದ ಶೇಖರ್ ಸುಮನ್, ಈಗ ಅದೇ ಮಾದರಿಯನ್ನು ಆಧುನಿಕ ಡಿಜಿಟಲ್ ಆಡಿಯನ್ಸ್‌ಗೆ ತಕ್ಕಂತೆ ತೆಗೆದುಕೊಂಡು ಬಂದಿದ್ದಾರೆ. ಶೋನ ಹೆಸರು ‘ಶೇಖರ್ ಟುನೈಟ್’. ಪ್ರತಿ ಶುಕ್ರವಾರ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಶೋದ ಹೊಸ ಸಂಚಿಕೆಗಳು ಬಿಡುಗಡೆಯಾಗುತ್ತಿವೆ. ವಿಶೇಷವೆಂದರೆ, ಶೇಖರ್ ಸುಮನ್ ಅವರ ಪುತ್ರ ಅಧ್ಯಯನ್ ಸುಮನ್ ಈ ಹೊಸ ಶೋ ಅನ್ನು ಕ್ರಿಯೇಟ್ ಮಾಡಿದ್ದಾರೆ.

ಇದನ್ನೂ ಓದಿ:ಜೈಲಿಗೆ ಹೋದ ಖ್ಯಾತ ಕಮಿಡಿಯನ್ ಸಹಾಯಕ್ಕೆ ಧಾವಿಸಿದ ಸೋನು ಸೂದ್

‘ಶೇಖರ್ ಟುನೈಟ್’ ಕೇವಲ ಸೆಲೆಬ್ರಿಟಿಗಳ ಸಾಂಪ್ರದಾಯಿಕ ಸಂದರ್ಶನವಲ್ಲ, ಬದಲಿಗೆ ಇದು ಯಾವುದೇ ಸ್ಕ್ರಿಪ್ಟ್ ಇಲ್ಲದ, ಸ್ವಾಭಾವಿಕವಾಗಿ ನಡೆಯುವ ಸಂಭಾಷಣೆಯಾಗಿದೆ. ಚಿತ್ರರಂಗ, ರಾಜಕೀಯ, ಕ್ರೀಡೆ, ಸಂಗೀತ ಮತ್ತು ಉದ್ಯಮ ರಂಗದ ಪ್ರಮುಖ ಗಣ್ಯರು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಹಾಸ್ಯ, ವಿಡಂಬನೆ, ರಾಜಕೀಯ ಚುಟುಕುಗಳು ಮತ್ತು ಭಾವುಕ ಕ್ಷಣಗಳ ಸಮ್ಮಿಶ್ರಣವಾಗಿ ಈ ಶೋ ಮೂಡಿಬರುತ್ತಿದೆ.

ಶೋನಲ್ಲಿ ಈಗಾಗಲೇ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ, ಸಿನಿಮಾ ನಟರುಗಳಾದ ಬಾಬಿ ಡಿಯೋಲ್, ಮನೋಜ್ ಬಾಜಪೇಯಿ, ಅಲಿ ಫಜಲ್, ಫರಾ ಖಾನ್ ಇನ್ನೂ ಹಲವರು ಭಾಗವಹಿಸಿದ್ದಾರೆ. ಈ ಸಂಚಿಕೆಯಲ್ಲಿ ಶೇಖರ್ ಸುಮನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಹಲವು ರಾಜಕೀಯ ನಾಯಕರ ಬಗ್ಗೆ ತಮ್ಮದೇ ಆದ ವಿಡಂಬನಾತ್ಮಕ ಶೈಲಿಯಲ್ಲಿ ಹಾಸ್ಯದ ಚಾಟಿ ಬೀಸಿದ್ದಾರೆ.

ಹಾಲಿವುಡ್​ನಲ್ಲಿ ಬಲು ಜನಪ್ರಿಯವಾಗಿರುವ ‘ಜಿಮ್ಮಿ ಕ್ಯಾಮೆಲ್ ಶೋ’ ಮಾದರಿಯಲ್ಲಿಯೇ ಇದೆ ಶೇಖರ್ ಸುಮನ್ ಅವರ ‘ಶೇಖರ್ ಟುನೈಟ್’. ಅಲ್ಲಿ ಲೇಟ್ ನೈಟ್ ಟಾಕ್ ಶೋಗಳು ಬಲು ಜನಪ್ರಿಯತೆ ಪಡೆದುಕೊಂಡಿವೆ. ಇದೀಗ ಶೇಖರ್ ಸುಮನ್ ಸಹ ಅದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *