ಟಿ20 ವಿಶ್ವಕಪ್ ಫೈನಲ್: ಹರಿಯಲಿದೆ ಮನರಂಜನೆ ಮಹಾಪೂರ, ಯಾರ್ಯಾರು ಬರಲಿದ್ದಾರೆ?

ಟಿ20 ವಿಶ್ವಕಪ್ ಫೈನಲ್: ಹರಿಯಲಿದೆ ಮನರಂಜನೆ ಮಹಾಪೂರ, ಯಾರ್ಯಾರು ಬರಲಿದ್ದಾರೆ?

ಕಳೆದ ಕೆಲ ವಾರಗಳಿಂದ ನಡೆಯುತ್ತಿರುವ 2026 ಟಿ20 ವಿಶ್ವಕಪ್ ಇಂದು (ಮಾರ್ಚ್ 08) ಮುಕ್ತಾಯವಾಗಲಿದೆ. ಇಂದು ಅಹಮದಾಬಾದ್​​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 2026 ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯಕ್ಕಾಗಿ ದೇಶದಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಪಂದ್ಯ ಜಿದ್ದಾಜಿದ್ದಿನದ್ದಾಗಿರಲಿದೆ ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಪಂದ್ಯ ಆರಂಭಕ್ಕೂ ಮುಂಚೆ ಭರಪೂರ ಮನೊರಂಜನೆ ಪ್ರೇಕ್ಷಕರಿಗೆ ದೊರಕಲಿದೆ. ಕೆಲ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗಾಯಕರುಗಳು ಫೈನಲ್ ಪಂದ್ಯದ ಮುಂಚೆ ಮನರಂಜನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಇಂದಿನ ಸಮಾರೋಪ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆ ಆಗಿರುವುದು ಅಂತರಾಷ್ಟ್ರೀಯ ಪಾಪ್ ಲೋಕದ ದಿಗ್ಗಜ, ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಮಾರ್ಟಿನ್. ಇವರ ಜನಪ್ರಿಯ ಹಾಡುಗಳಾದ ‘ಲೋಕಾ’ ಮತ್ತು ಫುಟ್‌ಬಾಲ್ ಹಾಡು ‘ದಿ ಕಪ್ ಆಫ್ ಲೈಫ್’ ಅಹಮದಾಬಾದ್ ಮೈದಾನದಲ್ಲಿ ಅನುರಣಿಸಲಿವೆ. ಮಾತ್ರವಲ್ಲದೆ ಇನ್ನೂ ಹಲವು ಹಾಡುಗಳನ್ನು ಈ ವಿಶ್ವ ಜನಪ್ರಿಯ ಗಾಯಕ ರಿಕ್ಕಿ ಪಾರ್ಟಿನ್ ಹಾಡಲಿದ್ದಾರೆ.

ಭಾರತದ ಖ್ಯಾತ ಗಾಯಕಿಯರಲ್ಲಿ ಒಬ್ಬರಾಗಿರುವ ಪಾಲ್ಗುಣಿ ಪಾಠಕ್ ಅವರು ಸಹ ಇಂದಿನ ಪಂದ್ಯಕ್ಕೂ ಮುಂಚೆ ಹಾಡುಗಳನ್ನು ಹಾಡಲಿದ್ದಾರೆ. ಫಾಲ್ಗುಣಿ ಪಾಠಕ್ ಸ್ಥಳೀಯ ಗಾಯಕಿ ಸಹ ಆಗಿದ್ದು, ಹಿಂದಿ ಹಾಡುಗಳ ಜೊತೆಗೆ ಗುಜರಾತಿ ಸೊಗಡಿನ ಹಾಡುಗಳನ್ನು ಸಹ ಹಾಡಲಿದ್ದಾರೆ. ‘ಮೈನೆ ಪಾಯಲ್ ಹೈ ಛಂಕಾಯಿ’ ಜೊತೆಗೆ ಹಲವಾರು ಜನಪ್ರಿಯ ಹಾಡುಗಳನ್ನು ಫಾಲ್ಗುಣಿ ಹಾಡಲಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ಫಾಲ್ಗುಣಿ ಪಾಠಕ್, ‘ನಾನು ಈ ಪ್ರದರ್ಶನಕ್ಕಾಗಿ ಉತ್ಸುಕಳಾಗಿದ್ದೇನೆ. ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ಜನರೆದುರು ನಾನು ಪ್ರದರ್ಶನ ನೀಡಲಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ:IND vs NZ: ಟಿ20 ವಿಶ್ವಕಪ್ ಫೈನಲ್​ಗೆ ಮೋದಿ ಮೈದಾನದಲ್ಲಿ ಏನೆಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಗೊತ್ತಾ?

‘ಪ್ರಿನ್ಸ್ ಆಫ್ ಭಾಂಗ್ಡಾ’ ಎಂದೇ ಹೆಸರಾದ ಸುಖ್ಬೀರ್ ಸಿಂಗ್ ತಮ್ಮ ಹಿಟ್ ಹಾಡುಗಳಾದ ‘ಇಷ್ಕ್ ತೇರಾ ತಡ್ಪಾವೆ’ ಸೇರಿದಂತೆ ಇನ್ನೂ ಕೆಲವು ಬಲು ಜನಪ್ರಿಯ ಹಾಡುಗಳನ್ನು ಹಾಡಲಿದ್ದಾರೆ. ಇವರೂ ಸಹ ಗುಜರಾತಿ ಜನರ ಮೆಚ್ಚಿನ ಗಾಯಕರುಗಳಲ್ಲಿ ಒಬ್ಬರಾಗಿದ್ದಾರೆ. ಸಂಜೆ 5:30ಕ್ಕೆ ಲೈವ್ ಪ್ರದರ್ಶನ ಪ್ರಾರಂಭ ಆಗಲಿದೆ. ರಾತ್ರಿ 7 ಗಂಟೆಗೆ ಪಂದ್ಯ ಪ್ರಾರಂಭ ಆಗಲಿದೆ.

ಟೀಮ್ ಇಂಡಿಯಾವನ್ನು ಬೆಂಬಲಿಸಲು ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್, ಆಲಿಯಾ ಭಟ್, ಅನಿಲ್ ಕಪೂರ್ ಮತ್ತು ವರುಣ್ ಧವನ್ ಅವರುಗಳು ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಮಿಫೈನಲ್‌ನಲ್ಲೂ ಮಿಂಚಿದ್ದ ಈ ತಾರೆಯರು ಫೈನಲ್ ಪಂದ್ಯಕ್ಕೂ ಸಾಕ್ಷಿಯಾಗಲಿದ್ದಾರೆ. ಇವರ ಜೊತೆಗೆ ಮಾಜಿ ನಾಯಕ ಎಂಎಸ್ ಧೋನಿ ಕೂಡ ಅಹಮದಾಬಾದ್‌ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಸಹ ಆಗಮಿಸುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *