ಟೆಸ್ಟ್​ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ..! – Kannada News

ಟೆಸ್ಟ್ ಕ್ರಿಕೆಟ್‌ನಲ್ಲಿ ಮಂದಬೆಳಕಿನ ಕಾರಣದಿಂದ ಪಂದ್ಯಗಳು ಬೇಗನೆ ಸ್ಥಗಿತಗೊಳ್ಳುವುದು ಮತ್ತು ಪ್ರೇಕ್ಷಕರು ನಿರಾಶರಾಗುವುದು ಹಲವು ವರ್ಷಗಳ ಹಳೆಯ ಸಮಸ್ಯೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಐಸಿಸಿ ಇದೀಗ ಮಹತ್ವದ ಹೆಜ್ಜೆಯನ್ನಟ್ಟಿದೆ. ಅದರಂತೆ ಇನ್ಮುಂದೆ ಮಂದ ಬೆಳಕಿನ ವೇಳೆ ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಿಗೆ ಪಿಂಕ್ ಬಾಲ್ ಬಳಸಲು ಅನುಮತಿ ನೀಡಲಾಗಿದೆ.

ಡೇ ಟೆಸ್ಟ್ ಪಂದ್ಯದ ದಿನದಾಟದ ಅಂತ್ಯದ ವೇಳೆ ಮಂದ ಬೆಳಕಿನ ಸಮಸ್ಯೆ ಎದುರಾಗುವುದು ಸಾಮಾನ್ಯ. ಸಂಜೆ ವೇಳೆ ಕತ್ತಲಾರಂಭಿಸಿದರೆ ಇಲ್ಲಾ ಕಾರ್ಮೋಡ ಕವಿದಾಗ ಫ್ಲಡ್​ ಲೈಟ್​ಗಳ ಸಹಾಯದಿಂದ ಪಂದ್ಯ ನಡೆಸಲು ಅವಕಾಶ ಇದ್ದರೂ, ರೆಡ್ ಬಾಲ್​ನೊಂದಿಗೆ​ ಆಡುವುದು ಕಷ್ಟವಾಗುತ್ತಿತ್ತು. ಹೀಗಾಗಿ ಮಂದ ಬೆಳಕಿನ ಕಾರಣ ದಿನದಾಟವನ್ನು ಬೇಗನೆ ಸ್ಥಗಿತಗೊಳಿಸಲಾಗುತ್ತಿತ್ತು.

ಇದೀಗ ಈ ಸಮಸ್ಯೆಗೆ ಪರಿಹಾರವಾಗಿ ಪಿಂಕ್ ಬಳಸಲು ಐಸಿಸಿ ಅನುಮತಿ ನೀಡಿದೆ. ಅದರಂತೆ ಇನ್ಮುಂದೆ ಡೇ ಟೆಸ್ಟ್​ ಪಂದ್ಯದ ದಿನದಾಟದ ಅಂತ್ಯಕ್ಕೆ ಅಥವಾ ಕಾಮೋರ್ಡ ಕವಿದಾಗ ಫ್ಲಡ್​ ಲೈಟ್​ಗಳ ನೆರವಿನೊಂದಿಗೆ ಪಿಂಕ್ ಬಾಲ್​ಗಳಲ್ಲಿ ಪಂದ್ಯವನ್ನು ಮುಂದುವರೆಸಬಹುದು.

ಹೊಸ ನಿಯಮದ ವಿಶೇಷಗಳೆನು?

  •  ಪಂದ್ಯದ ಆರಂಭ: ಟೆಸ್ಟ್ ಪಂದ್ಯವು ಎಂದಿನಂತೆ ಸಾಂಪ್ರದಾಯಿಕ ರೆಡ್ ಬಾಲ್​​ನಲ್ಲೇ ಶುರುವಾಗಲಿದೆ.
  • ಬಾಲ್ ಬದಲಾವಣೆ: ಮಂದಬೆಳಕಿನ ಕಾರಣದಿಂದ ಪಂದ್ಯ ಮುಂದುವರೆಸಲು ಸಾಧ್ಯವಾಗದೇ ಇದ್ದಾಗ ಪಿಂಕ್ ಬಾಲ್​ ಬಳಸಲು ಅವಕಾಶ ನೀಡಲಾಗಿದೆ.
  • ಹೀಗೆ ಪಿಂಕ್ ಬಾಲ್ ಬಳಸಬೇಕಿದ್ದರೆ ಸ್ಟೇಡಿಯಂನಲ್ಲಿ ಫ್ಲಡ್​ಲೈಟ್​ಗಳನ್ನು ಆನ್​ ಮಾಡಬೇಕಾಗುತ್ತದೆ. ಅಂದರೆ ಡೇ ಟೆಸ್ಟ್​ ಅನ್ನು ಮುಂದುವರೆಸಲು ಕನಿಷ್ಠ ಬೆಳಕು ಇರಲೇಬೇಕು ಎಂದು ತಿಳಿಸಲಾಗಿದೆ.
  • ಮುಂಚಿತ ಒಪ್ಪಂದ ಕಡ್ಡಾಯ: ರೆಡ್ ಬಾಲ್ ಜೊತೆ ಪಿಂಕ್ ಬಾಲ್ ಬಳಸಬೇಕಿದ್ದರೆ ಸರಣಿ ಆರಂಭಕ್ಕೂ ಮುನ್ನವೇ ಕಣಕ್ಕಿಳಿಯುವ ಎರಡು ತಂಡಗಳ ಕ್ರಿಕೆಟ್​ ಮಂಡಳಿ ಲಿಖಿತ ಒಪ್ಪಿಗೆ ನೀಡಿರಬೇಕು.

ಬಾಲ್ ಬದಲಾವಣೆ ಯಾಕೆ ಮುಖ್ಯ?

ಕೆಂಪು ಚೆಂಡು ಫ್ಲಡ್‌ಲೈಟ್ ಬೆಳಕಿನಲ್ಲಿ ಬ್ಯಾಟರ್‌ಗಳಿಗೆ ಸರಿಯಾಗಿ ಕಾಣಿಸುವುದಿಲ್ಲ. ಇದು ಆಟಗಾರರ ಸುರಕ್ಷತೆಗೂ ಅಪಾಯಕಾರಿ. ಹೀಗಾಗಿಯೇ ಮಂದ ಬೆಳಕಿನ ವೇಳೆ ಪಂದ್ಯವನ್ನು ಸ್ಥಗಿತಗೊಳಿಸಲಾಗುತ್ತದೆ. ಅದೇ ಪಿಂಕ್ ಬಾಲ್​ ಕೃತಕ ಬೆಳಕಿನಲ್ಲಿ (ಫ್ಲಡ್ ಲೈಟ್​) ಸ್ಪಷ್ಟವಾಗಿ ಗೋಚರಿಸುತ್ತದೆ.

ಇಲ್ಲಿ ಪಿಂಕ್ ಬಾಲ್ ಸ್ಪಷ್ಟವಾಗಿ ಕಾಣಿಸುವುದರೊಂದಿಗೆ ಪಂದ್ಯವನ್ನು ನಿಲ್ಲಿಸದೇ ಫ್ಲಡ್​ಲೈಟ್​ನಲ್ಲಿ ದಿನದಾಟವನ್ನು ಪೂರ್ಣಗೊಳಿಸಬಹುದು. ಹೀಗೆ ಪ್ರತಿ ದಿನದಾಟ ಪೂರ್ಣಗೊಂಡರೆ ಫಲಿತಾಂಶ ಮೂಡಿ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಡೇ ಟೆಸ್ಟ್ ಪಂದ್ಯದಲ್ಲಿ ಇನ್ಮುಂದೆ ರೆಡ್ ಬಾಲ್ ಮತ್ತು ಪಿಂಕ್ ಬಾಲ್ ಬಳಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಭುವನೇಶ್ವರ್ ಕುಮಾರ್​ ಯಶಸ್ಸಿನ ಗುಟ್ಟು ರಟ್ಟು ಮಾಡಿದ ಸಚಿನ್!

ಹೊಸ ನಿಯಮ ಜಾರಿಗೆ ಬರುವುದು ಯಾವಾಗ?

ಮೇ 31 ರಂದು ನಡೆದ ಐಸಿಸಿ ಮಂಡಳಿಯ ಸಭೆಯಲ್ಲಿ ಹೊಸ ನಿಯಮಕ್ಕೆ ಅನುಮೋದನೆ ನೀಡಲಾಗಿದೆ. ಹೀಗಾಗಿ ಈ ನಿಯಮವು ಜೂನ್​ನಲ್ಲಿ ನಡೆಯಲಿರುವ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅಥವಾ ಮುಂಬರುವ ಟೆಸ್ಟ್​ ಪಂದ್ಯಗಳಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ.

Source link

Leave a Reply

Your email address will not be published. Required fields are marked *