Headlines

ಡಾರ್ಕ್ ಸ್ಕಿನ್ ಮತ್ತು ಒಬೆಸಿಟಿ ಇರುವವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡು ಬರುವುದಕ್ಕೆ ಕಾರಣ ಏನ್ ಗೊತ್ತಾ? – Kannada News | Doctor Advice: Vitamin D Sun Exposure Tips for Dark Skin Types

ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ (Vitamin D) ಕೊರತೆ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇಷ್ಟಾದರೂ ಕೂಡ ಈ ಬಗ್ಗೆ ಜನ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಸ್ನಾಯು ಮತ್ತು ರೋಗನಿರೋಧಕ ಶಕ್ತಿಗೆ ಅಗತ್ಯವಾದ ಈ ಪೋಷಕಾಂಶ ದೇಹದಲ್ಲಿ ಸರಿಯಾಗಿ ಸಿಗದಿದ್ದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಮರೆಯಬಾರದು. ಅದರಲ್ಲಿಯೂ ಆರೋಗ್ಯ ತಜ್ಞರು ಹೇಳುವ ಪ್ರಕಾರ, ವಿಟಮಿನ್ ಡಿಯನ್ನು ಎಲ್ಲರೂ ಒಂದೇ ರೀತಿಯಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಯಾಕೆ ಈ ರೀತಿ ಆಗುತ್ತದೆ, ಇದಕ್ಕೆ ಕಾರಣವೇನು, ಸಾಮಾನ್ಯವಾಗಿ ವಿಟಮಿನ್ ಡಿ ಪಡೆಯಲು ಎಷ್ಟು ಹೊತ್ತು ಸೂರ್ಯನ ಕಿರಣಗಳನ್ನು ಪಡೆದುಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಟಮಿನ್ ಡಿ ಹೇಗೆ ಕೆಲಸ ಮಾಡುತ್ತದೆ?

ಹಲಿಯ ಏಮ್ಸ್‌ನ ಡಾ. ಭಾವುಕು ಗರ್ಗ್ ಅವರ ಪ್ರಕಾರ, ವಿಟಮಿನ್ ಡಿ ಕೇವಲ ವಿಟಮಿನ್ ಅಲ್ಲ, ಇದು ಹಾರ್ಮೋನ್‌ನಂತೆ ಕೆಲಸ ಮಾಡುತ್ತದೆ. ಸ್ನಾಯುಗಳ ಕಾರ್ಯಕ್ಷಮತೆ ಮತ್ತು ಇಮ್ಯೂನಿಟಿಗೆ ಮುಖ್ಯವಾಗಿದೆ. ಆದ್ದರಿಂದ ಇದರ ಕೊರತೆಯನ್ನು ನಿರ್ಲಕ್ಷಿಸಬಾರದು.

ಡಾರ್ಕ್ ಸ್ಕಿನ್ ಮತ್ತು ತೂಕ ಹೆಚ್ಚಿರುವವರಿಗೆ ತೊಂದರೆ!

ಸಾಮಾನ್ಯವಾಗಿ ಡಾರ್ಕ್ ಸ್ಕಿನ್ ಹೊಂದಿರುವವರಲ್ಲಿ ಮೆಲನಿನ್ ಪ್ರಮಾಣ ಹೆಚ್ಚು ಇರುತ್ತದೆ. ಇದು ಸೂರ್ಯನ ಯುವಿಬಿ ಕಿರಣಗಳನ್ನು ತಡೆದು ವಿಟಮಿನ್ ಡಿ ಪಡೆದುಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ಇವರು ಸಾಮಾನ್ಯರಿಗಿಂತ ಹೆಚ್ಚು ಸಮಯ ಸೂರ್ಯನ ಬೆಳಕಿನಲ್ಲಿ ಇರಬೇಕಾಗುತ್ತದೆ. ಅದೇ ರೀತಿ, ಹೆಚ್ಚು ತೂಕ (ಒಬೆಸಿಟಿ) ಇರುವವರಲ್ಲಿ ವಿಟಮಿನ್ ಡಿ ದೇಹದ ಕೊಬ್ಬಿನಲ್ಲಿ ಸಂಗ್ರಹವಾಗುತ್ತದೆ. ಇದರಿಂದ ದೇಹಕ್ಕೆ ಅದರ ಲಭ್ಯತೆ ಕಡಿಮೆಯಾಗಬಹುದು. ಈ ಕಾರಣದಿಂದ ಇವರಿಗೂ ಹೆಚ್ಚು ಸಮಯ ಸೂರ್ಯನ ಬೆಳಕು ಅಗತ್ಯವಿರುತ್ತದೆ.

ಇದನ್ನೂ ಓದಿ: ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಯಾದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತೆ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ!

ಎಷ್ಟು ಸಮಯ ಸೂರ್ಯನ ಬೆಳಕು ಬೇಕಾಗುತ್ತದೆ?

  • ಸಾಮಾನ್ಯ ವ್ಯಕ್ತಿಗೆ: 15– 20 ನಿಮಿಷ
  • ಡಾರ್ಕ್ ಸ್ಕಿನ್ ಹೊಂದಿರುವವರಿಗೆ: 30– 40 ನಿಮಿಷ
  • ಹೆಚ್ಚು ತೂಕ ಇರುವವರಿಗೆ: 35– 45 ನಿಮಿಷ

ಯಾವ ಸಮಯದ ಸೂರ್ಯನ ಬೆಳಕು ಉತ್ತಮ?

ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:30 ರವರೆಗೆ ಇರುವ ಸೂರ್ಯನ ಬೆಳಕು ವಿಟಮಿನ್ ಡಿ ನಿರ್ಮಾಣಕ್ಕೆ ಹೆಚ್ಚು ಉಪಯುಕ್ತ. ಈ ಸಮಯದಲ್ಲಿ ಕೈ, ಕಾಲು ಮತ್ತು ಬೆನ್ನಿನ ಭಾಗ ಸೂರ್ಯನ ಬೆಳಕಿಗೆ ತಾಗುವಂತೆ ನೋಡಿಕೊಳ್ಳಬೇಕು. ತಜ್ಞರ ಪ್ರಕಾರ, ವಿಟಮಿನ್ ಡಿ ಕೊರತೆ ಹೆಚ್ಚಿದ್ದರೆ ಕೇವಲ ಸೂರ್ಯನ ಬೆಳಕು ಸಾಕಾಗುವುದಿಲ್ಲ. ಸರಿಯಾದ ಆಹಾರ ಮತ್ತು ವೈದ್ಯರ ಸಲಹೆಯ ಮೇರೆಗೆ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಅಗತ್ಯ. ಜೊತೆಗೆ ಮ್ಯಾಗ್ನೀಷಿಯಮ್ ಕೂಡ ತೆಗೆದುಕೊಳ್ಳುವುದು ಸಹಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *