Headlines

 ಡೆಲ್ಲಿ ಕ್ಯಾಪಿಟಲ್ಸ್​ ನಾಯಕನಿಗೆ ಎಷ್ಟು ಮ್ಯಾಚ್ ಆಡಿದ್ದೇವೆ ಎಂಬುದೇ ಗೊತ್ತಿಲ್ಲ..! – Kannada News | Delhi Capitals Captain Forgets How Many Matches Are Left

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಈಗಾಗಲೇ ಬಹಿತೇಕ ತಂಡಗಳು 10 ಪಂದ್ಯಗಳನ್ನು ಆಡಿದೆ. ಈ ತಂಡಗಳಿಗೆ ಇನ್ನುಳಿದಿರುವುದು ಕೇವಲ 4 ಮ್ಯಾಚ್​​ಗಳು ಮಾತ್ರ. ಈ ತಂಡಗಳು ಕೊನೆಯ ನಾಲ್ಕು ಪಂದ್ಯಗಳ ಮೂಲಕ ಪ್ಲೇಆಫ್​ಗೇರುವ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿವೆ. ಇದರ ನಡುವೆ ಸಿಎಸ್​ಕೆ ವಿರುದ್ಧ ಸೋತು ಅಕ್ಷರ್ ಪಟೇಲ್ ನೀಡಿದ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಕ್ಷರ್ ಪಟೇಲ್ ಹೇಳಿದ್ದೇನು?

ಸಿಎಸ್‌ಕೆ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಅಕ್ಷರ್ ಪಟೇಲ್, “ನಮಗೆ ಇನ್ನು 5 ಪಂದ್ಯಗಳು ಬಾಕಿ ಇವೆ, ನಾವು ಪ್ಲೇಆಫ್ ತಲುಪಲು ಪ್ರತಿಯೊಂದು ಪಂದ್ಯವನ್ನೂ ಗೆಲ್ಲಲೇಬೇಕಿದೆ. ಅದರಂತೆ ಅಂತಿಮ 5 ಮ್ಯಾಚ್​ಗಳ ಮೂಲಕ ಪ್ಲೇಆಫ್​​ಗೇರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಆದರೆ, ವಾಸ್ತವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಈಗಾಗಲೇ 10 ಪಂದ್ಯಗಳನ್ನು ಆಡಿದ್ದು, ಲೀಗ್ ಹಂತದಲ್ಲಿ ಇನ್ನು ಕೇವಲ 4 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಆದರೆ ಈ ವಿಷಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್​ಗೆ ತಿಳಿದಿಲ್ಲ.

ಅಕ್ಷರ್ ಪಟೇಲ್ ಈಗಲೂ 5 ಪಂದ್ಯಗಳ ಲೆಕ್ಕಾಚಾರದಲ್ಲೇ ಉಳಿದಿದ್ದಾರೆ. ಡಿಸಿ ತಂಡದ ನಾಯಕನ ಈ ‘ಲೆಕ್ಕಾಚಾರದ ಎಡವಟ್ಟು’ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಒಟ್ಟು 14 ಪಂದ್ಯಗಳಲ್ಲಿ 10 ಪಂದ್ಯಗಳು ಮುಗಿದಿರುವುದರಿಂದ, ಅಕ್ಷರ್ ಪಟೇಲ್ ತಂಡದ ಸ್ಥಿತಿಯ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಒಟ್ಟಿನಲ್ಲಿ ಗೆದ್ದ ಹಾಗೂ ಸೋತ ಪಂದ್ಯಗಳ ಲೆಕ್ಕವೇ ಗೊತ್ತಿಲ್ಲದ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ಲೇಆಫ್​ಗೆ ಹೇಗೆ ಮುನ್ನಡೆಸಲಿದ್ದಾರೆ ಎಂದು ಡಿಸಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.

ಪ್ಲೇಆಫ್ ಹಾದಿ ಹೇಗಿದೆ?

ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 10 ಪಂದ್ಯಗಳಲ್ಲಿ 4 ಗೆಲುವು ಮತ್ತು 6 ಸೋಲುಗಳೊಂದಿಗೆ 8 ಅಂಕಗಳನ್ನು ಹೊಂದಿದೆ. ತಂಡಕ್ಕೆ ಇನ್ನೂ 4 ಪಂದ್ಯಗಳಿದ್ದು, ಈ ಮ್ಯಾಚ್​ಗಳ ಮೂಲಕ ಪ್ಲೇಆಫ್​ಗೇರಬಹುದು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಹಾದಿ ಈ ಕೆಳಗಿನಂತಿದೆ…

  • ಉಳಿದಿರುವ 4 ಪಂದ್ಯಗಳಲ್ಲಿ ಗೆಲುವು: ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮುಂದಿನ ಎಲ್ಲಾ 4 ಪಂದ್ಯಗಳನ್ನು ಗೆದ್ದರೆ ಒಟ್ಟು 16 ಅಂಕಗಳನ್ನು ಪಡೆಯುತ್ತದೆ. ಇದು ಪ್ಲೇಆಫ್ ತಲುಪಲು ಭದ್ರವಾದ ತಳಹದಿಯಾಗಬಹುದು.
  • ನೆಟ್ ರನ್ ರೇಟ್ ಸಮಸ್ಯೆ: ಡೆಲ್ಲಿ ಕ್ಯಾಪಿಟಲ್ಸ್​ ತಂಡದ​ ಸದ್ಯದ ನೆಟ್ ರನ್ ರೇಟ್ (-0.949) ಮೈನಸ್​ನಲ್ಲಿ ಇ ದೆ. ಹೀಗಾಗಿ ಡಿಸಿ ಪಡೆಗೆ ಮುಂದಿನ ಪಂದ್ಯಗಳಲ್ಲಿ ಕೇವಲ ಗೆಲುವು ಮಾತ್ರವಲ್ಲದೆ, ಭಾರಿ ಅಂತರದ ಗೆಲುವುಗಳು ಅನಿವಾರ್ಯವಾಗಿವೆ.
  •  ಇತರ ತಂಡಗಳ ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ 4 ಪಂದ್ಯಗಳಲ್ಲಿ ಒಂದು ಮ್ಯಾಚ್ ಸೋತರೆ, 14 ಅಂಕಗಳೊಂದಿಗೆ ಪ್ಲೇಆಫ್​ಗೆ ಪ್ರವೇಶಿಸಬಹುದು,  ಹೀಗೆ ದ್ವಿತೀಯ ಸುತ್ತಿಗೆ ಪ್ರವೇಶಿಸಬೇಕಿದ್ದರೆ ಇತರ ತಂಡಗಳ ಸೋಲು-ಗೆಲುವನ್ನು ಅವಲಂಭಿಸಬೇಕಾಗುತ್ತದೆ.

ಇದನ್ನೂ ಓದಿ: TMC ವಿರುದ್ಧ ಗಂಭೀರ ಆರೋಪ ಮಾಡಿ ಪಕ್ಷ ತೊರೆದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ!

ಡೆಲ್ಲಿ ಕ್ಯಾಪಿಟಲ್ಸ್​ ಮುಂದಿನ ಪಂದ್ಯಗಳು:

  •  ಮೇ 08:ಡೆಲ್ಲಿ ಕ್ಯಾಪಿಟಲ್ಸ್​  vs ಕೋಲ್ಕತ್ತಾ ನೈಟ್ ರೈಡರ್ಸ್ (ದೆಹಲಿ)
  • ಮೇ 11: ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ (ಧರ್ಮಶಾಲಾ)
  • ಮೇ 17: ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್ (ದೆಹಲಿ)
  •  ಮೇ 24: ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಕೋಲ್ಕತ್ತಾ)

ಈ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್​ಗೇರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *