ತನ್ನ ಮಾಜಿ ಪ್ರೇಯಸಿ ಅಂದುಕೊಂಡು ಯಾವುದೋ ಯುವತಿ ಮೇಲೆ ಆ್ಯಸಿಡ್ ಎರಚಿದ ವ್ಯಕ್ತಿ

ತನ್ನ ಮಾಜಿ ಪ್ರೇಯಸಿ ಅಂದುಕೊಂಡು ಯಾವುದೋ ಯುವತಿ ಮೇಲೆ ಆ್ಯಸಿಡ್ ಎರಚಿದ ವ್ಯಕ್ತಿ

ಗುರುಗ್ರಾಮ, ಮಾರ್ಚ್​ 09: ತನ್ನ ಮಾಜಿ ಪ್ರೇಯಸಿ ಎಂದು ತಪ್ಪಾಗಿ ಭಾವಿಸಿ ವ್ಯಕ್ತಿಯೊಬ್ಬ ಯಾವುದೋ ಯುವತಿಗೆ ಆ್ಯಸಿಡ್(Acid) ಎರಚಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ ಸೆಕ್ಟರ್ 10 ರ ಗುರುಗ್ರಾಮ್ ಸಿವಿಲ್ ಆಸ್ಪತ್ರೆಯ ಆವರಣದಲ್ಲಿ ಈ ಭಯಾನಕ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕಳುಹಿಸಲಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ರಾತ್ರಿ 8.15 ರಿಂದ 8.30 ರ ನಡುವೆ ಈ ದಾಳಿ ನಡೆದಿದೆ. ಆರೋಪಿ ಹಿಂದಿನಿಂದ ಬಂದು ಯುವತಿಯ ಮೇಲೆ ಆ್ಯಸಿಡ್ ಎರಚಿದ ನಂತರ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

20 ವರ್ಷದ ಯುವತಿ ಹಲ್ಲೆ ನಡೆಸಿದ ವ್ಯಕ್ತಿ ತನ್ನ ಮಾಜಿ ಗೆಳೆಯನಾಗಿದ್ದು, ತನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸುವಾಗ ತಪ್ಪಾಗಿ ಇನ್ನೊಬ್ಬ ಯುವತಿಯ ಮೇಲೆ ದಾಳಿ ನಡೆಸಿರಬಹುದು ಎಂದು ಆರೋಪಿಸಿದ್ದಾರೆ.

ಆ ವ್ಯಕ್ತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಮತ್ತು ನಂತರ ಆಸ್ಪತ್ರೆಗೆ ತನ್ನನ್ನು ಹುಡುಕಿಕೊಂಡು ಬಂದಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ, ಅಲ್ಲಿ ಮತ್ತೊಬ್ಬ ಮಹಿಳೆ ಆ್ಯಸಿಡ್ ದಾಳಿಯಲ್ಲಿ ಗಾಯಗೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.ತಾಯಿಯ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋಗಿದ್ದ ನುಹ್ ನಿವಾಸಿ ಮೇಲೆ ಆ್ಯಸಿಡ್ ದಾಳಿ ನಡೆದಿದೆ.

ಮತ್ತಷ್ಟು ಓದಿ: ಬಿಹಾರದಲ್ಲಿ ಬಿಜೆಪಿ ನಾಯಕನ ಪುತ್ರಿ ಮೇಲೆ ಆ್ಯಸಿಡ್ ದಾಳಿ

ಆಕೆಯ ಕುಟುಂಬದವರು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ನಾವಿಬ್ಬರೂ ಒಂದೇ ರೀತಿಯ ಉಡುಪು ಹಾಕಿದ್ದರಿಂದ ಆ್ಯಸಿಡ್ ಎರಚಿರಬಹುದು ಎಂದು ಹೇಳಿದ್ದಾರೆ.ಭುಜ, ಕುತ್ತಿಗೆ, ಕೆನ್ನೆ ಮತ್ತು ತೋಳುಗಳಿಗೆ ಗಾಯಗಳಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕರೆದೊಯ್ಯಲಾಗಿದೆ.

ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದ್ದು, ತನಿಖೆಯ ಭಾಗವಾಗಿ ಮಹಿಳೆ ಮತ್ತು ಆಕೆಯ ಕುಟುಂಬದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *