ಮಂಡ್ಯ, ಜುಲೈ 28: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕೆಂಬ CWRC ಆದೇಶದ ನಡುವೆ ಮಂಡ್ಯ ಶಾಸಕ ಗಣಿಗ ರವಿಕುಮಾರ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ತಮಿಳುನಾಡಿನ ಚಿದಂಬರಂನಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಕಾವೇರಿ ನೀರು ಹರಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ತಮಿಳುನಾಡಿಗೆ ಹೋಗಿದ್ದಾಗ ಗಣಿಗ ರವಿ ಈ ವಿಡಿಯೋ ಮಾಡಿದ್ದರು ಎನ್ನಲಾಗಿದ್ದು, ಮೇಕೆದಾಟು ಯೋಜನೆಗೆ ಸುಮ್ಮನೆ ಕ್ಯಾತೆ ತೆಗೆಯುತ್ತಿದ್ದಾರೆ. ನಾವು ಮೇಕೆದಾಟು ಅಣೆಕಟ್ಟೆ ಕಟ್ಟುತ್ತೇವೆ. ಮೆಟ್ಟೂರಿನ ಜಲಾಶಯದ ನಂತರ ನೀವು ಅಣೆಕಟ್ಟು ಕಟ್ಟಿ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುವ ನೀರನ್ನ ಉಳಿಸಬಹುದು ಎಂದು ಶಾಸಕರು ಆಡಿರುವ ಮಾತುಗಳು ವಿಡಿಯೋದಲ್ಲಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.