Headlines

ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಹೇಳಿದ್ದೇನು? | Minister Chaluvarayaswamy Assures Farmers Protection in Cauvery Water Management

ಬೆಂಗಳೂರು, ಆಗಸ್ಟ್​​ 19: ನೆರೆ ರಾಜ್ಯ ತಮಿಳುನಾಡಿಗೆ ಕೆಆರ್​​ಎಸ್​​ನಿಂದ ನೀರು ಬಿಟ್ಟಿದ್ದಾರೆಂದು ಬಿಜೆಪಿ ಆರೋಪ ವಿಚಾರ ಸಂಬಂಧ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, ಅವರು ಹೇಳಲಿ ತೊಂದರೆ ಇಲ್ಲ. ಮಂಡ್ಯ, ಕಾವೇರಿ ಅಚ್ಚುಕಟ್ಟು ನನ್ನದು. ಪರಿಸರ, ಪ್ರಕೃತಿ ಜೊತೆ ನಾವು ಆಟ ಆಡುವುದಕ್ಕೆ ಆಗುವುದಿಲ್ಲ. ಗೋರೂರು ಹಾಗೂ ಕಬಿನಿಯಿಂದ ಜಮೀನಿಗೆ ನೀರು ಬಿಟ್ಟಿದ್ದೇವೆ. ಹಾರಂಗಿ ಜಲಾಶಯದಿಂದಲೂ ನೀರು ಬಿಡಲು ಹೇಳಿದ್ದೇವೆ. ರೈತರ ರಕ್ಷಣೆ ಮಾಡೋದು ನಮ್ಮ ಜವಾಬ್ದಾರಿ. CWMA, CWRC ಸಭೆ ಬಗ್ಗೆ ಲೀಗಲ್ ಟೀಂ ಜತೆ ಮಾತನಾಡಿದ್ದೇನೆ. ಸಮಾಧಾನವಾಗಿ ಹೋಗಿ ರಾಜ್ಯದ ರೈತರಿಗೆ ಒಳ್ಳೆಯದು ಮಾಡಬೇಕು ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *