Headlines

ತಾನೊಂದು ಬಗೆದರೆ, ದೈವವೊಂದು ಬಗೆಯಿತು: ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ ಯುವಕ – Kannada News | Kumta Beach Tragedy: Youth Drowns at Kadle Beach While Filming Reel

ಕಾರವಾರ, ಜೂನ್​ 15: ರೀಲ್ಸ್ (Reels) ಮಾಡಲು ಹೋಗಿ ಓರ್ವ ಯುವಕ ಸಮುದ್ರಪಾಲಾಗಿರುವಂತಹ (death) ಘಟನೆ ಉತ್ತರ ಕನ್ನಡ ಜಿಲ್ಲೆಯ (uttara kannada) ಕುಮಟಾ ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ಮೂಲದ ಜೀವನ್ ಭಟ್ಟರಾಯಿ(26) ನೀರುಪಾಲಾದ ಯುವಕ. ಕರಾವಳಿ ಕಾವಲುಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ. ಸದ್ಯ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಕಡ್ಲೆ ಬೀಚ್‌ನಲ್ಲಿ ರೀಲ್ಸ್ ವಿಡಿಯೋ ಮಾಡುವಾಗ ಯುವಕ ಸಮುದ್ರಪಾಲು
  • ಕರಾವಳಿ ಕಾವಲುಪಡೆ, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ
  • ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ನಡೆದಿದ್ದೇನು?

ಜೀವನ್​ ಭಟ್ಟರಾಯಿ ತನ್ನ ಐದು ಜನ ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸ ಬಂದಿದ್ದ. ಖಾಸಗಿ ರೆಸಾರ್ಟ್​ನಲ್ಲಿ ಮೂರು ದಿನದಿಂದ ತಂಗಿದ್ದರು. ರೀಲ್ಸ್ ಮಾಡಲು ಸ್ನೇಹಿತರು ಸಮುದ್ರಕ್ಕಿಳಿದಿದ್ದಾರೆ. ರೀಲ್ಸ್ ಮಾಡಿ ಸ್ನೇಹಿತರು ಹಿಂತಿರುಗಿದ್ದಾರೆ. ಆದರೆ ಜೀವನ್ ಸಮುದ್ರದಲ್ಲಿ​​ ಆಟವಾಡುತ್ತಿದ್ದ. ಆತ ಬರುತ್ತಾನೆ ಅಂತ ಸ್ನೇಹಿತರು ಮುಂದೆ ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಜೀವನ್​​ ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾನೆ. ಸದ್ಯ ಸ್ಥಳಕ್ಕೆ ಪಿಎಸ್​ಐ ಖಾದರ್ ಬಾಷಾ ಭೇಟಿ ನೀಡಿ ಪರಿಶೀಲನೆ‌ ಮಾಡಿದ್ದಾರೆ.

ಶಾರ್ಟ್​ ಸರ್ಕ್ಯೂಟ್​ನಿಂದ ಗುಡಿಸಲಿಗೆ ಬೆಂಕಿ ತಗುಲಿ ವೃದ್ಧ ಸಾವು

ಶಾರ್ಟ್​ ಸರ್ಕ್ಯೂಟ್​ನಿಂದ ಗುಡಿಸಲಿಗೆ ಬೆಂಕಿ ತಗುಲಿ ವೃದ್ಧ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶೃಂಗಾರಬಾಗು ತಾಂಡಾದಲ್ಲಿ ನಡೆದಿದೆ. ರೆಕ್ಯಾನಾಯ್ಕ್ (65) ಮೃತ ವ್ಯಕ್ತಿ. ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರವಾಸ ಮುಗಿಸಿ ಬರುವಾಗ ದುರಂತ: ಹೇಮಾವತಿ ಹಿನ್ನೀರಿನಲ್ಲಿ ಮೂವರು ಯುವಕರು ಜಲಸಮಾಧಿ

ಇಂದು ಬೆಳಗ್ಗೆ ಶಾರ್ಟ್​ ಸರ್ಕ್ಯೂಟ್​ನಿಂದ ಗುಡಿಸಲಿಗೆ ಬೆಂಕಿ ತಗುಲಿದೆ. ಈ ವೇಳೆ ರೆಕ್ಯಾನಾಯ್ಕ್ ಗುಡಿಸಲಿನಲ್ಲೇ ಮಲಗಿದ್ದರು. ಸುಟ್ಟಗಾಯಗಳಿಂದ ನರಳಾಡುತ್ತಿದ್ದ ರೆಕ್ಯಾನಾಯ್ಕ್​​ನನ್ನು ಬಸವಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಜಿಬಿಎ ಕಸದ ವಾಹನ ಹರಿದು ವ್ಯಕ್ತಿ ಸಾವು

ಜಿಬಿಎ ಕಸದ ವಾಹನ ಹರಿದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ ಬಳಿ ನಡೆದಿದೆ. ಆಯತಪ್ಪಿ ಬೈಕ್​ನಿಂದ ಕೆಳಗೆ ಬಿದಿದ್ದ 35 ವರ್ಷದ ವ್ಯಕ್ತಿ ಮೇಲೆ ಜಿಬಿಎ ಕಸದ ಲಾರಿ ಹರಿದಿದ್ದು, ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸವಾರ ತಮಿಳುನಾಡು ನೋಂದಣಿ ಸಂಖ್ಯೆಯ ಬೈಕ್‌ ಚಲಾಯಿಸುತ್ತಿದ್ದರು. ಸ್ಥಳಕ್ಕೆ ಚಾಮರಾಜಪೇಟೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *