ಬೆಂಗಳೂರು, ಜುಲೈ 19: ತಾಯಿ ಚೆನ್ನಮ್ಮ ಎಲ್ಲ ಮಕ್ಕಳನ್ನು ಸಮಾನವಾಗಿ ಬೆಳೆಸಿದ್ದಾರೆಯಾದರೂ ನಾನೆಂದರೆ ಅವರಿಗೆ ತುಸು ಜಾಸ್ತಿ ಪ್ರೀತಿ ಇತ್ತು. ಅದೆಷ್ಟೋ ಬಾರಿ ಹೇಗೆ ಬದುಕಬೇಕೆಂದು ಅವರು ನನಗೆ ಹಿತವಚನ ನೀಡಿದ್ದ ದಿನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭಾವುಕರಾದ ಪ್ರಸಂಗ ನಡೆದಿದೆ. ಹಲವು ಪಕ್ಷಗಳಲ್ಲಿ ಇರುವ ನಾಯಕರೆಲ್ಲ ನಮ್ಮಮನ ಹಾರೈಕೆಯಲ್ಲಿ ಬೆಳೆದವರೆ. ಹೀಗಾಗಿ ಅವರ ಬಗ್ಗೆ ಗೌರವ ಇಟ್ಟುಕೊಂಡು ಎಲ್ಲರೀ ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇವತ್ತಿನ ಸಮಾಜಕ್ಕೆ ನಮ್ಮ ತಂದೆ ತಾಯಿಯ ದಾಂಪತ್ಯ ಮಾದರಿಯಾಗಿದೆ. ಗಂಡ ಪ್ರಧಾನಿ, ಮುಖ್ಯಮಂತ್ರಿಯಾದಗಲೂ ಅವರು ಮನೆಯಿಂದ ಹೊರ ಬಂದವರಲ್ಲ. ಅವರಾಯಿತು ಅವರ ದೇವರ ಮನೆಯಾಯಿತು ಎಂದು ಇದ್ದಂತವರು ಎಂದು ಕುಮಾರಸ್ವಾಮಿ ಈ ವೇಳೆ ನೆನಪಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.