Headlines

ಥಲಸ್ಸೆಮಿಯಾ ಅಪಾಯಕಾರಿಯೇ? ಮದುವೆ ಅಥವಾ ಗರ್ಭಧಾರಣೆಗೂ ಮುನ್ನ ತಪಾಸಣೆ ಮಾಡಿಸಿಕೊಳ್ಳುವುದು ಯಾಕೆ ಮುಖ್ಯ? – Kannada News | How Genetic Blood Disorder Thalassemia Affects Children’s Health

ಥಲಸ್ಸೆಮಿಯಾ (Thalassemia) ಒಂದು ಗಂಭೀರವಾದ ಜೆನೆಟಿಕ್ ರಕ್ತ ಸಂಬಂಧಿ ಕಾಯಿಲೆಯಾಗಿದೆ. ಇದು ಪೋಷಕರಿಂದ ಮಕ್ಕಳಿಗೆ ಜೀನ್ಸ್ ಮೂಲಕ ಬರಬಹುದು. ಭಾರತದಲ್ಲಿ ಪ್ರತಿವರ್ಷ ಸಾವಿರಾರು ಮಕ್ಕಳು ಥಲಸ್ಸೆಮಿಯಾ ಮೇಜರ್ ಸಮಸ್ಯೆಯೊಂದಿಗೆ ಜನಿಸುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳದ ಕಾರಣ, ಹಲವರು ಇದನ್ನು ಸಾಮಾನ್ಯ ರಕ್ತಹೀನತೆ ಅಥವಾ ದೌರ್ಬಲ್ಯ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಹಾಗಾದರೆ ಥಲಸ್ಸೆಮಿಯಾ ಎಂದರೇನು? ಇದರ ಲಕ್ಷಣಗಳು ಹೇಗಿರುತ್ತವೆ ಮತ್ತು ಇದು ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ತಿಳಿದುಕೊಳ್ಳಿ. ಈ ಬಗ್ಗೆ ಸ್ವಲ್ಪ ಮಟ್ಟಿನ ಅರಿವಿದ್ದಾಗ ಇಂತಹ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಥಲಸ್ಸೆಮಿಯಾ ಎಂದರೇನು?

ಥಲಸೆಮಿಯಾ ಎನ್ನುವುದು ದೇಹದಲ್ಲಿ ಸರಿಯಾದ ಪ್ರಮಾಣದ ಹಿಮೋಗ್ಲೋಬಿನ್ ಉತ್ಪಾದನೆ ಆಗದಿರುವ ಸ್ಥಿತಿ. ಹಿಮೋಗ್ಲೋಬಿನ್ ಕಡಿಮೆಯಾದಾಗ ದೇಹಕ್ಕೆ ಆಮ್ಲಜನಕ ಸರಿಯಾಗಿ ತಲುಪುವುದಿಲ್ಲ. ಇದರ ಪರಿಣಾಮವಾಗಿ ಮಕ್ಕಳಲ್ಲಿ ದೌರ್ಬಲ್ಯ, ಬೆಳವಣಿಗೆ ಸಮಸ್ಯೆಗಳು ಮತ್ತು ಹಲವು ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

  • ಸದಾ ದಣಿವು ಮತ್ತು ಶಕ್ತಿಹೀನತೆ
  • ಚರ್ಮ ಬಿಳಿಯಾಗುವುದು
  • ತೂಕ ಮತ್ತು ಎತ್ತರ ಸರಿಯಾಗಿ ಹೆಚ್ಚದಿರುವುದು
  • ಆಗಾಗ ಜ್ವರ ಅಥವಾ ಸೋಂಕು
  • ಆಹಾರ ಆಸಕ್ತಿ ಕಡಿಮೆಯಾಗುವುದು
  • ಮುಖದ ಎಲುಬುಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುವುದು

ಥಲಸ್ಸೆಮಿಯಾ ಅಪಾಯಕಾರಿಯೇ?

ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಥಲಸ್ಸೆಮಿಯಾ ಮೇಜರ್ ಸಮಸ್ಯೆಯಾಗಬಹುದು. ಇದರಿಂದ ಹೃದಯ, ಲಿವರ್ ಹಾಗೂ ಇತರ ಪ್ರಮುಖ ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಕೆಲವರಿಗೆ ಜೀವಪೂರ್ತಿ ರಕ್ತ ತುಂಬಿಸುವ (Blood Transfusion) ಅಗತ್ಯವೂ ಬರಬಹುದು. ತಜ್ಞರ ಪ್ರಕಾರ, ಮದುವೆಗೂ ಮೊದಲು ಅಥವಾ ಗರ್ಭಧಾರಣೆಗೆ ಮುನ್ನ ಸರಳ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ. ತಾಯಿ ಮತ್ತು ತಂದೆ ಇಬ್ಬರೂ ಥಲಸ್ಸೆಮಿಯಾ ಕ್ಯಾರಿಯರ್ ಆಗಿದ್ದರೆ, ಮಗುವಿಗೆ ಈ ಕಾಯಿಲೆ ಬರುವ ಸಾಧ್ಯತೆ 25% ಇರುತ್ತದೆ. ಆದ್ದರಿಂದ ಪ್ರೀ-ಮ್ಯಾರಿಟಲ್ ಸ್ಕ್ರೀನಿಂಗ್, ಜೆನೆಟಿಕ್ ಕೌನ್ಸೆಲಿಂಗ್, ಗರ್ಭಧಾರಣೆಗೆ ಮುನ್ನ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಒಳ್ಳೆಯದು ಇವು ಥಲಸ್ಸೆಮಿಯಾ ತಡೆಗಟ್ಟಲು ಸಹಾಯಕವಾಗುತ್ತವೆ.

ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಥಲಸೆಮಿಯಾ ಚಿಕಿತ್ಸೆಯಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. ನಿಯಮಿತ ರಕ್ತ ತುಂಬಿಸುವುದು, ಐರನ್ ನಿಯಂತ್ರಣ ಔಷಧಿಗಳು ಮತ್ತು ಕೆಲವು ಸಂದರ್ಭಗಳಲ್ಲಿ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಪರಿಣಾಮಕಾರಿ ಚಿಕಿತ್ಸೆ ಎಂದು ಪರಿಗಣಿಸಲಾಗುತ್ತಿದೆ. ಜೀನ್ ಥೆರಪಿ ಕುರಿತ ಸಂಶೋಧನೆಯೂ ಭವಿಷ್ಯದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *