Headlines

ಥೈಲ್ಯಾಂಡ್​ ಫೋಟೋಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಪಾಯಲ್ ಚೆಂಗಪ್ಪ ಖಡಕ್ ಉತ್ತರ – Kannada News | Payal Chengappa Slams Trolls Over Thailand Backless Photo Controversy

ಪಾಯಲ್ ಚೆಂಗಪ್ಪ ಅವರು (Payal) ಇತ್ತೀಚೆಗೆ ಥೈಲ್ಯಾಂಡ್​​ಗೆ ತೆರಳಿದ್ದರು. ಅಲ್ಲಿ ಬ್ಯಾಕ್​​ಲೆಸ್ ಫೋಟೋ ಹಾಕಿ ಗಮನ ಸೆಳೆದಿದ್ದರು. ಈ ಫೋಟೋಗೆ ಸಾಕಷ್ಟು ಲೈಕ್ಸ್ ಸಿಕ್ಕಿವೆ. ಅವರನ್ನು ಬೋಲ್ಡ್ ಅವತಾರದಲ್ಲಿ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಇನ್ನೂ ಕೆಲವರು ನೆಗೆಟಿವ್ ಕಮೆಂಟ್ ಮಾಡುವ ಕೆಲಸ ಮಾಡಿದ್ದಾರೆ. ಇದಕ್ಕೆ ಪಾಯಲ್ ಖಡಕ್ ಆಗಿ ಉತ್ತರಿಸಿದ್ದಾರೆ. ಅವರು ಟೀಕೆ ಮಾಡುವವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಈ ರೀತಿಯ ಕಮೆಂಟ್​​ಗಳು ಅವರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲವಂತೆ.

ಹೀರೋಯಿನ್​​ಗಳು ಥೈಲ್ಯಾಂಡ್ ಮೊದಲಾದ ಕಡೆಗಳಲ್ಲಿ ತೆರಳಿ ಬೀಚ್​​ಗಳಲ್ಲಿ ನಿಂತು ಪೋಸ್ ಕೊಡುತ್ತಾರೆ. ಕೆಲವರು ಬೋಲ್ಡ್ ಆಗಿ ಕಾಣಿಸುತ್ತಾರೆ. ಈ ಫೋಟೋಗಳನ್ನು ಹಂಚಿಕೊಳ್ಳುವುದರಲ್ಲಿ ಅವರಿಗೆ ಯಾವುದೇ ಹಿಂಜರಿಕೆ ಇರುವುದಿಲ್ಲ. ಆದರೆ, ಕೆಲವೊಮ್ಮೆ ಈ ಫೋಟೋಗಳ ಕಾರಣಕ್ಕೆ ಅವರು ಟೀಕೆ ಎದುರಿಸಬೇಕಾಗುತ್ತದೆ. ಈ ಟೀಕೆಗಳನ್ನು ಎಲ್ಲರೂ ಒಂದೇ ರೀತಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇನೆ ಎಂದು ಪಾಯಲ್ ವಿವರಿಸಿದ್ದಾರೆ.

ಅದು ಬೀಚ್ ಡ್ರೆಸ್ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ ಪಾಯಲ್. ‘ಅದು ಬಿಕಿನಿ ಕೂಡ ಆಗಿರಲಿಲ್ಲ, ಬ್ಯಾಕ್​​ಲೆಸ್ ಟಾಪ್ ಆಗಿತ್ತು’ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ. ಸಾಕಷ್ಟು ಟ್ರೆಡಿಷನಲ್ ಫೋಟೋಗಳನ್ನು ಹಾಕಿದಾಗ ಯಾರೊಬ್ಬರೂ ಕಮೆಂಟ್ ಮಾಡದೆ, ಈ ರೀತಿಯ ಫೋಟೋ ಹಾಕಿದಾಗಷ್ಟೇ ಎಲ್ಲರೂ ಎದ್ದು ಬರೋದು ಏಕೆ ಎಂಬುದು ಪಾಯಲ್ ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ನಕಲಿ ಖಾತೆ ಸೃಷ್ಟಿ ಮಾಡಿಕೊಂಡು ಕಮೆಂಟ್ ಹಾಕುವವರ ಸಂಖ್ಯೆ ಹೆಚ್ಚಿದೆ. ಈಗಲೂ ಅದೇ ಆಗಿದೆ ಎಂದು ಪಾಯಲ್ ಹೇಳುತ್ತಾರೆ. ಕಾಲೆಳೆಯುವ ಉದ್ದೇಶದಿಂದ ಈ ರೀತಿಯ ಖಾತೆ ಮಾಡಿಕೊಂಡು ಕಮೆಂಟ್ ಹಾಕುತ್ತಾರೆ ಎಂದು ಅವರು ಬಲವಾಗಿ ನಂಬುತ್ತಾರೆ. ಈ ಕಾರಣಕ್ಕೆ ಅವರು ಈ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಳ್ಳುವುದಿಲ್ಲ.

ಕೆಲವು ಸೆಲೆಬ್ರಿಟಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಆದರೆ, ಪಾಯಲ್ ಆ ರೀತಿ ಅಲ್ಲ. ಈ ರೀತಿಯ ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದು ಅವರಿಗೆ ಗೊತ್ತಿದೆಯಂತೆ. ಈ ಕಾರಣದಿಂದ ಅವರಿಗೆ ಇದು ಒತ್ತಡ ತರುವುದಿಲ್ಲ.

ಇದನ್ನೂ ಓದಿ: ಥೈಲ್ಯಾಂಡ್​ ಬೀಚ್​​ನಲ್ಲಿ ಮಿಂಚಿದ ನಟಿ ಪಾಯಲ್ ಚೆಂಗಪ್ಪ; ಇಲ್ಲಿವೆ ಫೋಟೋಸ್

ಪಾಯಲ್ ಅವರು ‘ಜೆರಾಕ್ಸ್’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ನಾಗಭೂಷಣ್ ಮೊದಲಾದವರು ಇದರಲ್ಲಿ ನಟಿಸಿದ್ದು, ಜೀ5ನಲ್ಲಿ ಇದು ಪ್ರಸಾರ ಆರಂಭಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *