Headlines

ದಕ್ಷಿಣದ ಈ ನಟಿಯರಿಗೆ ಇದೆ ಅಪರೂಪದ ಕಾಯಿಲೆ; ಇಲ್ಲಿದೆ ಮಾಹಿತಿ – Kannada News | South Indian Celebs’ Brave Health Battles: Samantha, Kajal and More Inspire

ದಕ್ಷಿಣದ ಈ ನಟಿಯರಿಗೆ ಇದೆ ಅಪರೂಪದ ಕಾಯಿಲೆ; ಇಲ್ಲಿದೆ ಮಾಹಿತಿ

ಬೆಳ್ಳಿತೆರೆಯ ಮೇಲೆ ಸದಾ ಹಸನ್ಮುಖಿಯಾಗಿ, ರಂಜಿಸುವ ಸಿನಿಮಾ ತಾರೆಯರ ವೈಯಕ್ತಿಕ ಜೀವನದ ಹಿಂದೆ ಕಠಿಣ ಹೋರಾಟದ ಕಥೆಗಳಿರುತ್ತವೆ. ದಕ್ಷಿಣ ಭಾರತದ ಚಿತ್ರರಂಗದ ಈ ಐದು ಜನಪ್ರೀಯ ನಟಿಯರು ತಮಗಿರುವ ಅಪರೂಪದ ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದು, ಸವಾಲುಗಳ ನಡುವೆಯೂ ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ.

ಸಮಂತಾ ರುತ್ ಪ್ರಭು

ಸಮಂತಾ ಅವರು ‘ಮಯೋಸಿಟಿಸ್’ ಎಂಬ ಅಪರೂಪದ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಮಾಂಸಖಂಡಗಳ ಉರಿಯೂತಕ್ಕೆ ಕಾರಣವಾಗುತ್ತದೆ. ತೀವ್ರ ಆರೋಗ್ಯ ಸಮಸ್ಯೆಯ ನಡುವೆಯೂ ಧೃತಿಗೆಡದ ಸಮಂತಾ, ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದುಕೊಂಡು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ.

ಕಾಜಲ್ ಅಗರ್ವಾಲ್

ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ತಮಗೆ ತಾತ್ಕಾಲಿಕ ಆಟೋಇಮ್ಯೂನ್ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ, ಐದನೇ ವಯಸ್ಸಿನಿಂದಲೇ ಬ್ರಾಂಕಿಯಲ್ ಆಸ್ತಮಾದಿಂದ ಬಳಲುತ್ತಿರುವ ಇವರು, ಸುದೀರ್ಘ ಕಾಲದಿಂದ ಕಟ್ಟುನಿಟ್ಟಿನ ಆಹಾರ ಪದ್ಧತಿ ಹಾಗೂ ಜೀವನಶೈಲಿಯನ್ನು ರೂಢಿಸಿಕೊಂಡು ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟಿದ್ದಾರೆ.

ಅನುಷ್ಕಾ ಶೆಟ್ಟಿ

‘ಬಾಹುಬಲಿ’ ಖ್ಯಾತಿಯ ಅನುಷ್ಕಾ ಶೆಟ್ಟಿ ಅವರು ‘ನಗು ರೋಗ’ ಎಂದೇ ಕರೆಯಲಾಗುವ ‘ಸ್ಯೂಡೋಬಲ್ಬರ್ ಅಫೆಕ್ಟ್’ (PBA) ಎಂಬ ಅಪರೂಪದ ನರರೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸ್ಥಿತಿಯಲ್ಲಿ ಭಾವನೆಗಳ ಸಂಬಂಧವಿಲ್ಲದೆ ಹಠಾತ್ ಆಗಿ ನಿಯಂತ್ರಿಸಲಾಗದಂತೆ ನಗು ಅಥವಾ ಅಳು ಬರುತ್ತದೆ.

ವಿಶಾಲ್

ತಮಿಳು ನಟ ವಿಷ್ಣು ವಿಶಾಲ್ ಕಳೆದ ಮೂರ್ನಾಲ್ಕು ವರ್ಷಗಳಿಂದ ದೀರ್ಘಕಾಲದ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಅವರು, ಪ್ರಸ್ತುತ ತಾವು ತೆಗೆದುಕೊಳ್ಳುತ್ತಿರುವ ಕಠಿಣ ಔಷಧಿಗಳ ಅಡ್ಡಪರಿಣಾಮಗಳಿಂದಾಗಿ ತಮ್ಮ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತಿವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್

ಮಮತಾ ಮೋಹನ್ ದಾಸ್

ಖ್ಯಾತ ನಟಿ ಹಾಗೂ ಗಾಯಕಿ ಮಮತಾ ಮೋಹನ್ ದಾಸ್ ಅವರು ಈಗಾಗಲೇ ಎರಡು ಬಾರಿ ಭೀಕರ ‘ಹಾಡ್ಕಿನ್ಸ್ ಲಿಂಫೋಮಾ’ (ಕ್ಯಾನ್ಸರ್) ರೋಗವನ್ನು ಗೆದ್ದು ಬಂದಿದ್ದಾರೆ. ಪ್ರಸ್ತುತ ಅವರು ಚರ್ಮದ ಬಣ್ಣವನ್ನು ಕಳೆದುಕೊಳ್ಳುವ ‘ವಿಟಲಿಗೋ’ (ತೊನ್ನು) ಎಂಬ ಚರ್ಮದ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *