ದಶಕದ ಹಿಂದಿನ ದಾಖಲೆ ಉಡೀಸ್; ಒಮ್ಮೆಲೆ ನಾಲ್ಕು ಸಿನಿಮಾ ಹಿಂದಿಕ್ಕಿದ ‘ಧುರಂಧರ್’ – Kannada News | Dhurandhar Movie Shatters Baahubali 2’s North America Record: Box Office Triumph

ಸಿನಿಮಾಗಳು ರಿಲೀಸ್ ಆದ ಮೊದಲ ವಾರ ಅಬ್ಬರಿಸಿ ನಂತರದ ವಾರಗಳಲ್ಲಿ ಮುಗ್ಗರಿಸುತ್ತವೆ. ಮೂರನೇ ವಾರಕ್ಕೆ ಬರೋವರೆಗೆ ಸಿನಿಮಾ ಸುಸ್ತಾಗಿ ಬಿಡುತ್ತದೆ. ಆದರೆ, ‘ಧುರಂಧರ್’ ಹಾಗಲ್ಲ. ರಿಲೀಸ್ ಆಗಿ ಆರು ವಾರ ಕಳೆದರೂ ಸಿನಿಮಾ ಮುನ್ನುಗ್ಗುತ್ತಿದೆ. ಈಗ ಈ ಚಿತ್ರ 10 ವರ್ಷಗಳ ಹಿಂದೆ ಬರೆದಿದ್ದ ದಾಖಲೆಯನ್ನು ಉಡೀಸ್ ಮಾಡಿದೆ.

‘ಬಾಹುಬಲಿ 2’ ಸಿನಿಮಾ 2016ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರ ಬರೆದ ದಾಖಲೆ ಒಂದೆರಡಲ್ಲ. ಇದನ್ನು ಅಳಿಸಲು ಅನೇಕ ಸಿನಿಮಾಗಳ ಬಳಿ ಸಾಧ್ಯವೇ ಆಗಿಲ್ಲ. ಆದರೆ, ದಶಕಗಳ ಬಳಿಕ ಬಂದ ‘ಧುರಂದರ್’ ಸಿನಿಮಾ ಈ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ.

ಉತ್ತರ ಅಮೇರಿಕದಲ್ಲಿ ‘ಬಾಹುಬಲಿ 2’ ಚಿತ್ರವನ್ನು 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು. ಇದಾದ ಬಳಿಕ ಯಾವ ಭಾರತೀಯ ಸಿನಿಮಾಗೂ 20 ಲಕ್ಷಕ್ಕೂ ಹೆಚ್ಚು ಜನರು ಬಂದಿರಲಿಲ್ಲ. ಆದರೆ, ‘ಧರುಂಧರ್ 2’ ಚಿತ್ರಕ್ಕೆ ಉತ್ತರ ಅಮೆರಿಕದಲ್ಲಿ 2 ಲಕ್ಷಕ್ಕೂ ಹೆಚ್ಚಿನ ಪ್ರೇಕ್ಷಕರ ಆಗಮನ ಆಗಿದೆ. ಈ ಮೂಲಕ ದಶಕದ ಹಿಂದಿನ ದಾಖಲೆ ಮುರಿದು ಬಿದ್ದಿದೆ.

ಭಾರತಾದ್ಯಂತ ಈ ಸಿನಿಮಾ 800 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವ ಮಟ್ಟದಲ್ಲಿ ಸಿನಿಮಾ 1254 ಕೋಟಿ ರೂಪಾಯಿ ಗಳಿಸಿದೆ. ‘ಧುರಂಧರ್’ ಸಿನಿಮಾ 38ನೇ ದಿನ 6.15 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಚಿತ್ರದ ಹೆಚ್ಚುಗಾರಿಕೆ.

ಇದನ್ನೂ ಓದಿ: ‘ನನಗೆ ಧುರಂಧರ್ 2, ಟಾಕ್ಸಿಕ್ ಬಗ್ಗೆ ಭಯವಿಲ್ಲ’; ನೇರವಾಗಿ ಹೇಳಿದ ನಿರ್ಮಾಪಕ

ಈ ಸಿನಿಮಾ ನಾಲ್ಕು ಹಿಟ್ ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿದೆ. ‘ಕೆಜಿಎಫ್ ಚಾಪ್ಟರ್ 2’, ‘ಆರ್​​ಆರ್​​ಆರ್​’, ‘ಜವಾನ್’ ಹಾಗೂ ‘ಪಠಾಣ್’ ಚಿತ್ರಗಳ ಕಲೆಕ್ಷನ್​ ಮೀರಿ ‘ಧುರಂಧರ್’ ಚಿತ್ರದ ಕಲೆಕ್ಷನ್ ನಿಂತಿದೆ. ಇನ್ನಷ್ಟು ದಾಖಲೆಗಳು ಚಿತ್ರದಿಂದ ನಿರೀಕ್ಷಿಸಬಹುದಾಗಿದೆ.

‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈ ವೇಳೆ ‘ಟಾಕ್ಸಿಕ್’ ಸಿನಿಮಾ ಕೂಡ ತೆರೆಗೆ ಬರಲಿದೆ. ಎರಡೂ ಚಿತ್ರಗಳ ಮಧ್ಯೆ ದೊಡ್ಡ ಕ್ಲ್ಯಾಶ್ ಏರ್ಪಡುತ್ತಾ ಇದೆ. ಈ ಕ್ಲ್ಯಾಶ್ ತುಂಬಾನೇ ದೊಡ್ಡ ಮಟ್ಟದಲ್ಲಿರೋ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *