ದಾವಣಗೆರೆ, ಮೇ 02: ಗ್ರಾಹಕರೊಬ್ಬರು ಅಂಗಡಿಯಲ್ಲಿ ಬಿಟ್ಟುಹೋಗಿದ್ದ 20 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಮಾಲೀಕ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವಂತಹ ಘಟನೆ ದಾವಣಗೆರೆ ನಗರ ಗಡಿಯಾರ ಕಂಬದ ವಿಜಯಲಕ್ಷ್ಮಿ ರಸ್ತೆಯಲ್ಲಿರುವ ಎ ಟು ಝಡ್ ಡ್ರೈ ಫುಡ್ಸ್ ಅಂಗಡಿಯಲ್ಲಿ ನಿನ್ನೆ ನಡೆದಿದೆ. ರುದೇಶ್ ನಾಯ್ಕ್ ಅವರ ಅಂಗಡಿಗೆ ಬಂದಿದ್ದ ಮಹಿಳಾ ಗ್ರಾಹಕಿಯೊಬ್ಬರು ಚಿನ್ನಾಭರಣದ ಬ್ಯಾಗ್ ಮರೆತು ಹೋಗಿದ್ದರು. ಇಂದು ಬಂದು ತೆಗೆದುಕೊಂಡು ಹೋಗಬಹುದು ಎಂದು ಬ್ಯಾಗ್ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಆದರೆ ಯಾರು ಬಾರದ ಹಿನ್ನಲೆ ಬಸವನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಇಷ್ಟರಲ್ಲಿ ಚಿನ್ನಾಭರಣ ಬಿಟ್ಟುಹೋಗಿದ್ದ ಮಾಲೀಕರು ಸಹ ಪತ್ತೆ ಆಗಿದ್ದು, ಪೊಲೀಸರ ಸಮ್ಮುಖದಲ್ಲೇ ಚಿನ್ನಾಭರಣ ಹಿಂದಿರುಗಿಸಲಾಗಿದೆ. ಸದ್ಯ ರುದ್ರೇಶ್ ನಾಯ್ಕ್ ಪ್ರಾಮಾಣಿಕತೆ ಬಗ್ಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.