Headlines

ದಿನ ಭವಿಷ್ಯ: ಇಂದು ಈ ರಾಶಿಯವರ ಭಾಗ್ಯದ ಬಾಗಿಲು ತೆರೆದು ಮುಚ್ಚುವುದು – Kannada News | Dina Rashi Bhavishya June 21, 2026: Daily Horoscope Predictions for Sunday

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಮೃಗಶಿರಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ವ್ಯಾಘಾತ, ಕರಣ : ವಣಿಜ, ಸೂರ್ಯೋದಯ – 05 – 55 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:11 – 08:47, ಯಮಗಂಡ ಕಾಲ 12:21 – 13:58, ಗುಳಿಕ ಕಾಲ 15:34 – 17:11

ಮೇಷ ರಾಶಿ: ಧಾರ್ಮಿಕ ಕಾರ್ಯದಿಂದ ಆದಾಯ. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವಿರಿ. ಸದಾ ಉದ್ವೇಗದಲ್ಲಿಯೇ ಇರುವ ನಿಮಗೆ ಇನ್ನೊಂದಿಷ್ಟು ಕೆಲಸಗಳು ಬಂದಾವು. ಪರರ ವಶದಿಂದ ಪಾರುಗುವುದು ಕಷ್ಟ. ಯಾವುದನ್ನೂ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುವುದು ಬೇಡ. ಸರಿಯಾಗುವ ತನಕ ತಾಳ್ಮೆ ಇರಲಿ. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.

ವೃಷಭ ರಾಶಿ: ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಆರ್ಥಿಕಸ್ಥಿತಿಯು ಅಭಿವೃದ್ಧಿ ಹೊಂದಿದರೂ ಯಾವುದೋ ಕಾರಣಕ್ಕೆ ಅದು ಖಾಲಿಯಾಗುವುದು. ಸಾಹಿತ್ಯದ ಮೂಲಕ ಯಶಸ್ಸು ಕಾಣುವ ಆಸೆ ಹೆಚ್ಚುವುದು. ಅಮೂಲ್ಯವಾದ ವಸ್ತುವನ್ನು ಜೋಪಾನವಾಗಿಸಿರಿಕೊಳ್ಳಿ. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳುವಿರಿ. ಪಕ್ಷಪಾತದಿಂದ ನಿಮ್ಮ ಸಂಬಂಧಗಳು ಹಾಳಾಗಬಹುದು.

ಮಿಥುನ ರಾಶಿ: ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದರೆ ನಿಮ್ಮ ಬೆಲೆಯೇ ಕಡಿಮೆಯಾಗುವುದು. ಒಮ್ಮೆ ಹೇಳಿ‌ ಸುಮ್ಮನಾಗಿ. ದೀರ್ಘಕಾಲದ ಹೂಡಿಕೆಗೆ ಮನಸ್ಸು ಮಾಡುವಿರಿ. ಕೆಲವು ದಿನ ಹೀಗೆ ಇರಲಿದೆ. ದೈವದಲ್ಲಿ ಭಕ್ತಿಯಿಡಿ. ಯಾರ ಮೇಲೇ ಕುತಂತ್ರ ಮಾಡುವ ಅವಶ್ಯಕತೆ ಇಲ್ಲ. ನಿಮಗೆ ಸಿಗಬೇಕಾದುದು ಸಿಕ್ಕೇ ಸಿಗುತ್ತದೆ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ.

ಕರ್ಕಾಟಕ ರಾಶಿ: ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರಲಿದೆ. ಬೇಸರಿಸಬೇಕಿಲ್ಲ‌. ಔಷಧ ವ್ಯಾಪಾರದಲ್ಲಿ ಆದಾಯ ಚುರುಕಾಗಲಿದೆ. ಮುಂಬರುವ ದಿನಗಳು ಅವನ್ನೆಲ್ಲ ಸರಿದೂಗಿಸುವುದು‌ ಅಧಿಕಾರಿಗಳು ನಿಮ್ಮ ಕಾರ್ಯವನ್ನು ಕಂಡು ಪ್ರಶಂಸಿಸುವರು. ಶತ್ರುವಿಗೆ ಮಾಡಬೇಕಾದುದನ್ನು ರಹಸ್ಯವಾಗಿ ಮಾಡುವಿರಿ. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು.

ಸಿಂಹ ರಾಶಿ: ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗುವುದು. ನಿಮ್ಮ ಕೆಲಸದ ಬಗ್ಗೆ ನಿಮ್ಮ ಗಮನವಿರಲಿ. ಗೌಪ್ಯ ಸಂಗತಿ ನಿಮ್ಮಿಂದ ಬಯಲಾಗುವುದು. ಇನ್ನೊಬ್ಬರ ಕುರಿತು ಟೀಕೆ ಮಾಡುವುದನ್ನು ನಿಲ್ಲಿಸಿ. ಅಶ್ಲೀಷಪದಗಳನ್ನು ಬಳಸಿ ಮನೆಯಲ್ಲಿ ಬೈಗುಳ ತಿನ್ನುವಿರಿ. ಹೊಸ ಆದಾಯದ ಮೂಲವನ್ನು ಕಂಡುಕೊಳ್ಳುವಿರಿ. ಕಾರ್ಯಕ್ಕಾಗಿ ಇಂದಿನ ಓಡಾಟವು ವ್ಯರ್ಥವೇ ಸರಿ. ನಿನ್ನೆಯ ಘಟನೆಯನ್ನು ನೆನಪಿಸಿಕೊಳ್ಳದೇ ಕಾರ್ಯಪ್ರವೃತ್ತರಾಗಿ.

ಕನ್ಯಾ ರಾಶಿ: ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ವ್ಯರ್ಥವಾದ ಸುತ್ತಾಟವು ನಿಮಗೆ ಬೇಸರ ತರಿಸಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಲಿದ್ದೀರಿ. ಇಷ್ಟು ವರ್ಷದ ಪರಿಶ್ರಮವು ಇಂದು ವ್ಯರ್ಥವಾಗುವುದು. ವಿಶೇಷವಾಗಿ ವಿದ್ಯಾರ್ಥಿಗಳು ಈ ವಿಚಾರದಲ್ಲಿ ಹತಾಶೆಗೊಳ್ಳುವರು. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳುವುದು ಉತ್ತಮ. ಪ್ರಾಣಿಯಿಂದ ಭಯವಾಗಲಿದೆ. ಬೇಡವಾದುದರ ಬಗ್ಗೆ ಆಸೆ ಬೇಡ.

ತುಲಾ ರಾಶಿ: ದುಃಖಿಸದೇ ಧೈರ್ಯದಿಂದ ಮುಂದಿನ ಕಾರ್ಯದ ಕಡೆ ಗಮನವಿರಲಿ. ಉನ್ನತ ಅಧಿಕಾರಕ್ಕೆ ಹೋಗುವ ಸಂಭವಿದ್ದರೂ ಹಿತಶತ್ರುಗಳ ಪಿತೂರಿಯಿಂದ ಅಥವಾ ಹಿಂದೆಂದೋ ಆಡಿದ ಮಾತಿನ್ನೇ ಇಟ್ಟುಕೊಂಡು ನಿಮಗೆ ಹುದ್ದೆಯನ್ನು ಕೊಡದೇಹೋಗಬಹುದು. ಹೇಳಬೇಕಾದುದನ್ನು ನೇರವಾಗಿ ಸಂಕ್ಷೇಪವಾಗಿ ಹೇಳಿ. ಸಿಟ್ಟು ಬರುತ್ತದೆ ಎಂದು ಗೊತ್ತಿದ್ದರೂ ಅದನ್ನು ನಿಗ್ರಹಿಸಲು ಶ್ರಮವಹಿಸದೇ ಇರುವುದು ವಿಷಾದಕರ ಸಂಗತಿಯಾಗುವುದು. ಸ್ನೇಹಿತರ ನಡುವೆ ಸೈದ್ಧಾಂತಿಕ ಭಿನ್ನತೆ ಬರುವುದು.

ವೃಶ್ಚಿಕ ರಾಶಿ: ಮನೆಯಲ್ಲಿ ನಡೆಯುವ ಕಲಹದಿಂದ ನೀವು ಬೇಸರಗೊಳ್ಳಬಹುದು. ನಿಮ್ಮ ಮಾತನ್ನೇ ಎಲ್ಲರೂ ಪಾಲಿಸಬೇಕು ಎನ್ನುವ ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳಿ. ಅವಾಚ್ಯ ಪದಗಳನ್ನು ಮೇಲಿನವರಿಂದ ಕೇಳುವಿರಿ. ಅನಿವಾರ್ಯದ ಪ್ರಯಾಣವು ನಿಮ್ಮನ್ನು ಹೈರಾಣ ಮಾಡುವುದು. ಆಯ್ಕೆಗಳ ವಿಚಾರದಲ್ಲಿ ನೀವು ಹಿಂದುಳಿಯಬಹುದು. ಲಾಭಾಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಮಕ್ಕಳ ಜೊತೆ ಚಿಂತೆಯನ್ನೆಲ್ಲ ಬಿಟ್ಟು ಸಂತೋಷದಿಂದ ಕಾಲವನ್ನು ಕಳೆಯುವಿರಿ.

ಧನು ರಾಶಿ: ಆರ್ಥಿಕವಾದ ದುರ್ಬಲತೆ ನಿಮ್ಮನ್ನು ಕಾಡಬಹುದು. ಮಾತಿನಿಂದಲೇ ಇಂದು ನೀವು ಕೆಲಸವನ್ನು ಮಾಡುವಿರಿ. ನಿಮ್ಮನ್ನು ಸುಳ್ಳಾಗಿ ಬಿಂಬಿಸಿಕೊಳ್ಳುವಿರಿ. ಸಾಲಕೊಟ್ಟ ಹಣವು ಬರುತ್ತದೆ ಎಂಬ ನಿರೀಕ್ಷೆಯು ಸುಳ್ಳಾಗಬಹುದು. ದುಂದುವೆಚ್ಚ ಮಾಡಿದ ಕಾರಣ ಮನೆಯಲ್ಲಿ ಕಲಹವಾಗಬಹುದು. ಕಛೇರಿಗೆ ವಿಳಂಬವಾಗಿ ಹೋಗಿ ಮೇಲಧಿಕಾರಿಗಳ‌ ಕೆಂಗಣ್ಣಿಗೆ ಗುರಿಯಾಗುವಿರಿ. ಅನಿರೀಕ್ಷಿತವಾಗಿ ಹಣವು ಖಾಲಿಯಾಗುವುದು. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು.

ಮಕರ ರಾಶಿ: ವೇಗವಾಗಿ ಹಣದಲ್ಲಿ ಅಭಿವೃದ್ಧಿಯ ಕಾಣುವ ಬಗ್ಗೆ ಬಯಕೆ ಬೇಡ. ಮಾತಿಗಾಗಿ ಮಾತು ಬೆಳೆಯಬಹುದು. ನಿಮ್ಮಿಂದ‌ ಸಹಾಯ ಪಡೆದವರ ಆಶೀರ್ವಾದ ಸದಾ ಇರಲಿದೆ. ಅದು ಮತ್ತೇನೋ ಆಗುವ ಸಾಧ್ಯತೆ ಇದೆ, ಜಾಗರೂಕರಾಗಿರಿ. ಏನನ್ನಾದರೂ ಕಳೆದುಕೊಳ್ಳುವ ಭೀತಿ ಇರುವುದು. ಸ್ತ್ರೀಯರಿಂದ ನಿಮ್ಮ‌ ಬಗ್ಗೆ ಸುಳ್ಳು ಅಪವಾದಬರಬಹುದು. ಸರ್ಕಾರ ಕಾರ್ಯವು ಇಂದು ಪೂರ್ಣವಾಗದು ಎಂದು ಅಂದುಕೊಂಡಿದ್ದರೂ ಕೊನೆಗೆ ಕೆಲಸವಾಗುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.

ಕುಂಭ ರಾಶಿ: ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತನಾಡಿಕೊಳ್ಳಬಹುದು. ಸೌಂದರ್ಯವೇ ಶತ್ರುವೂ ಆಗಬಹುದು. ಯಾರಿಗೂ ಸಲಹೆಯನ್ನು ಕೊಡಲು ಇಂದು ಹೋಗಬೇಡಿ. ಸಣ್ಣ ವ್ಯಾಪಾರಕ್ಕೆ ಪ್ರಕೃತಿಯಿಂದ ಪ್ರತಿರೋಧ. ಆರ್ಥಿಕಮೂಲಕ್ಕೆ ಪೆಟ್ಟುಬೀಳುವ ಸಾಧ್ಯತೆ ಇದೆ. ಉತ್ತಮ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ.‌ ಇಲ್ಲವಾದರೆ ಅನಂತರ ದುಃಖಿಸಿ ಪ್ರಯೋಜನವಾಗದು. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡಬೇಕಾಗುವುದು.

ಮೀನ ರಾಶಿ: ನಿಮಗಿಂದು ಪ್ರೀತಿಯನ್ನು ಕಳೆದುಕೊಳ್ಳತ್ತೇನೋ ಎಂಬ ಭಯವಿರಲಿದೆ. ದೊಡ್ಡವರನ್ನು ಹಾಗೆಯೇ ಗೌರವಿಸಿ. ಅನುಕೂಲವಿದ್ದರೆ ದೂರದಲ್ಲಿರುವ ತಂದೆ, ತಾಯಿಯರನ್ನು ಭೇಟಿ ಮಾಡುವಿರಿ. ನಿಮ್ಮ ಮನೆಯಯಿಂದ ನೀವು ಇಷ್ಟಪಡುವ ಪ್ರಾಣಿಯು ಕಾಣೆಯಾಗಬಹುದು. ನಿಮ್ಮ ಸಂಗಾತಿಯು ನೀವು ಪ್ರೀತಿ ತೋರಿಸಿಲ್ಲವೆಂದು ಸಿಟ್ಟಾಗಬಹುದು. ಎಲ್ಲದಕ್ಕೂ ಇನ್ನೊಬ್ಬರನ್ನು ಬೊಟ್ಟುಮಾಡಿ ತೋರಿಸುವುದು ಸರಿಯಾಗದು. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ.

ಲೋಹಿತ್ ಹೆಬ್ಬಾರ್ – 8762924271 (what’s app only)

Source link

Leave a Reply

Your email address will not be published. Required fields are marked *