ಮೇಷ ರಾಶಿ:
ಅತಿಯಾದ ಸಂತೋಷದ ಅನಂತರ ದುಃಖ ಬರಬಹುದು. ಇದಕ್ಕೆ ಭಯಗೊಂಡು ಸಂತೋಷವಾಗಿ ದಿನವನ್ನು ಕಳೆಯಿರಿ. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನೀವು ನಿಲ್ಲಿಸುವಿರಿ. ಕೆಲಸಕ್ಕಾಗಿ ದೂರದ ಊರಿಗೆ ಹೋಗಬೇಕಾಗಬಹುದು. ಕೆಲಸಕ್ಕಾಗಿ ನೀವು ಕಾಯಬೇಕಾದೀತು. ಉದ್ಯೋಗದಲ್ಲಿ ಉಂಟಾದ ಪ್ರೇಮವು ದೂರಾದರೂ ಹಾಗೆಯೇ ಉಳಿಯುವುದು. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸೂಕ್ಷ್ಮ ವ್ಯವಹಾರವನ್ನು ನಿರ್ವಹಿಸಲು ಸುಲಭವಾಗಿ ಸಾಧ್ಯವಾಗದು. ಇಷ್ಟವಾದವರಿಗೆ ನಿಮ್ಮ ವಸ್ತುವನ್ನು ಸಂತೋಷದಿಂದ ಕೊಡುವಿರಿ.
ವೃಷಭ ರಾಶಿ:
ಪ್ರೇಮಿಯ ಜಾಣತನದ ಮಾತಿಗೆ ಮಾರು ಹೋಗಿ ಮಾತು ಕೊಡುವಿರಿ. ಹೊರಗೆ ಓಡಾಡುವಾಗ ಜಾಗರೂಕತೆ ಮುಖ್ಯ. ಮೈ ಮರೆವಿನಲ್ಲಿ ಅಪಾಯವನ್ನು ತಂದುಕೊಳ್ಳುವಿರಿ. ಹಿರಿಯರ ಎದುರು ತಗ್ಗುವುದನ್ನು ಮಾಡಿಕೊಳ್ಳಬೇಕು. ಕಛೇರಿಯ ವ್ಯವಹಾರಗಳು ಸಂಪೂರ್ಣವಾಗಿ ಅರ್ಥವಾಗದೇ ಏನನ್ನೂ ಮಾಡಲು ಹೋಗಬೇಡಿ. ನಿಮ್ಮ ಅಸ್ತಿತ್ವವನ್ನು ಗುರುತಿಸಿಲ್ಲ ಎಂಬ ಬೇಸರ ಇರುವುದು. ಮಾತಿನಲ್ಲಿ ಸಹಜತೆ ಇರಲಿ. ಏನನ್ನಾದರೂ ಹೇಳಿ ಅವಮಾನ ಮಾಡಿಕೊಳ್ಳುವ ಸಾಧ್ಯತೆ ಇದೆ. ಯಾರಿಗಾದರೂ ಇಂದು ಸಾಲವಾಗಿ ಹಣವನ್ನು ಕೊಡುವಿರಿ.
ಮಿಥುನ ರಾಶಿ:
ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಒತ್ತಡ ಇರುವುದು. ಅದನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗುವುದು. ಮತ್ತಾವುದೋ ಕಾರ್ಯಗಳಿಗೆ ಉಪಯೋಗಕ್ಕೆಂದು ಇಟ್ಟಿದ್ದ ಹಣವು ಖಾಲಿಯಾಗಲಿದೆ. ವಿರುದ್ಧ ಆಹಾರವನ್ನು ಸ್ವೀಕರಿಸಿ ಅನಾರೋಗ್ಯವನ್ನು ತಂದುಕೊಳ್ಳಬಹುದು. ಸಹಾಯಕ್ಕಾಗಿ ಬರುವವರ ಮೇಲೆ ಒಂದು ಕಣ್ಣಿರಲಿ. ಅಧ್ಯಾತ್ಮವನ್ನು ನಿಮ್ಮ ಮಾನಸಿಕ ಸಬಲತೆಗೆ ಬಳಸಿಕೊಳ್ಳಬಹುದು. ಆಪ್ತರಿಗೆ ನಿಮ್ಮ ಒಡಲಾಳವನ್ನು ಹೇಳಿಕೊಳ್ಳುವಿರಿ.
ಕರ್ಕಾಟಕ ರಾಶಿ:
ನಿಮ್ಮದಾದ ಉದ್ಯಮದ ಕಡೆ ಮನಸ್ಸು ಇರುವುದು. ಹಳೆಯ ಹೂಡಿಕೆಯಿಂದ ಉಪಯೋಗವಾಗಲಿದೆ. ವಾಹನದ ದುರಸ್ತಿಯನ್ನು ಮಾಡಬೇಕಾಗಿಬರಬಹುದು. ಕೊಟ್ಟಿದ್ದನ್ನು ಪುನಃ ಕೇಳಲು ಹೋಗಬೇಡಿ. ಕೆಲವನ್ನು ತೀರ್ಮಾನಿಸಲು ನಿಮ್ಮನ್ನು ಕರೆಯಬಹುದು. ನಿಮ್ಮದಲ್ಲ ಎಂಬ ನಿರ್ಧಾರವನ್ನು ಮಾಡಿಬಿಡಿ. ವಿದೇಶಕ್ಕೆ ಸುತ್ತಾಟ ಮಾಡಲು ಹೋಗಬಹುದು. ಕೆಲಸವು ನಿಧಾವಾಗಿ ಸಾಗುವುದು. ವಿವಾಹದ ಮಾತುಕತೆಯು ಸರಿಯಾಗಿ ಆಗದೇ ನೆಮ್ಮದಿ ಹಾಳಾಗುವುದು. ಯಾರನ್ನೂ ನೀವು ಕೇವಲವಾಗಿ ನೋಡುವುದು ಬೇಡ.
ಸಿಂಹ ರಾಶಿ:
ನೀವು ಇಂದು ಆಪ್ತರಿಂದ ಅಲ್ಪ ಹಣವನ್ನು ಸಾಲವಾಗಿ ಪಡೆಯುವಿರಿ. ನಿಮಗೆ ಉನ್ನತ ಸ್ಥಾನವನ್ನು ನೀಡುವ ಕುರಿತು ಚರ್ಚೆಗಳು ನಡೆಯುವುದು. ಸಂತೋಷದಿಂದ ಇರಲು ನಿಮಗೆ ಅನೇಕ ಕಾರಣಗಳು ಸಿಗುವುದು. ಬೀಳುತ್ತೇನೆ ಎಂಬ ಕಾರಣಕ್ಕೆ ನಡೆಯುವುದನ್ನೇ ನಿಲ್ಲಿಸಲಾಗದು. ಆತ್ಮೀಯರು ನಿಮ್ಮನ್ನು ಮನೆಗೆ ಆಹ್ವಾನಿಸಬಹುದು. ಪ್ರಾಣಿಗಳಿಂದ ತೊಂದರೆಯಾಗಲಿದೆ. ನಿಮ್ಮ ತಪ್ಪಿಗೆ ಕಾರಣವನ್ನು ಹುಡುಕುವ ಬದಲು ವ್ಯಕ್ತಿಗಳನ್ನು ಹುಡುಕುತ್ತ ಇರುವಿರಿ. ಅನ್ಯರಿಂದ ಸಂತೋಷವನ್ನು ಪಡೆಯುವಿರಿ.
ಕನ್ಯಾ ರಾಶಿ:
ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಸೋಲುವ ಸಂಭವವಿದೆ. ಉದ್ಯೋಗದಲ್ಲಿ ಇರುವವರಿಗೆ ಕೆಲವು ಆಯ್ಕೆಗಳನ್ನು ಯಾರಾದರೂ ಕೊಡಬಹುದು. ಅತಿಯಾಗಿ ಉದ್ಯಮದ ಆದಿಯಲ್ಲಿಯೇ ಆಸೆ ಪಡುವುದು ಅನುಕೂಲವಲ್ಲ. ಕಾಲಾಂತರದಲ್ಲಿ ಅದು ಸಾಧ್ಯವಾಗಲಿದೆ. ಗೃಹೋಪಕರಣದ ಖರೀದಿಯಿಂದ ಹಣಕಾಸು ಸ್ವಲ್ಪ ಕುಸಿಯಬಹುದು. ವಿವಾಹವು ನಿಶ್ಚಯವಾಗುವ ಸಾಧ್ಯತೆ ಇದೆ. ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಎಲ್ಲವನ್ನೂ ಬಲ್ಲವರಂತೆ ತೋರಿಸಿಕೊಳ್ಳುವಿರಿ.
ತುಲಾ ರಾಶಿ:
ಇಂದು ದ್ವಂದ್ವಗಳು ಬಹಳ ನಿಮ್ಮನ್ನು ಕಾಡಲಿದ್ದು ಆಯ್ಕೆಗೆ ಬಹಳ ಕಷ್ಟ ಪಡುವಿರಿ. ಆರ್ಥಿಕ ವ್ಯವಹಾರದ ನಂಟು ಬೇರೆ ಸ್ವರೂಪವನ್ನು ಪಡೆಯುವುದು. ಆಲಸ್ಯದಿಂದ ನಿಮ್ಮ ಆದಾಯವನ್ನು ಹಾಳುಮಾಡಿಕೊಳ್ಳುವಿರಿ. ತಾಳ್ಮೆಯಿಂದ ಆಗುವ ಲಾಭವನ್ನು ಸ್ವತಃ ಅನುಭವಿಸುವಿರಿ. ಮಕ್ಕಳು ನಿಮ್ಮ ಮಾತನ್ನು ಕೇಳದೇ ಸ್ವೇಚ್ಛೆಯಿಂದ ವರ್ತಿಸುವರು. ಅಲ್ಪರ ಸಹವಾಸದಿಂದ ಅಭಿಮಾನಕ್ಕೆ ತೊಂದರೆಯಾಗುವುದು. ಕಲಾವಿದರು ವಿದೇಶಗಳಿಗೆ ಹೋಗುವ ಅವಕಾಶ ಇರುವುದು.
ವೃಶ್ಚಿಕ ರಾಶಿ:
ವೃತ್ತಿಯಲ್ಲಿ ಕೆಲವು ಅನಿರೀಕ್ಷಿತ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕಾಗುವುದು. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ನಿಮಗೆ ಒಳ್ಳೆಯದನ್ನು ಮಾಡಬೇಕು ಎಂಬ ಆಸೆ ಶುರುವಾದರೆ ಸಾಕು ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ. ಕಟ್ಟಿದ್ದ ಕಣ್ಣು ಇಂದು ತೆರೆದಂತೆ ಅನ್ನಿಸುವುದು. ಇಷ್ಟವಿರುವ ವಸ್ತುವು ನಿಮ್ಮಿಂದ ನಷ್ಟವಾಗಬಹುದು. ನಿಮಗೆ ಅದು ಅನುಕೂಲವನ್ನು ಮಾಡಿಕೊಡಲಿದೆ. ಕಣ್ತಪ್ಪಿನ ದೋಷಗಳಿಂದ ಹೇಳಿಕೊಳ್ಳಬೇಕಾಗುವುದು.
ಧನು ರಾಶಿ:
ಸರ್ಕಾರಿ ಉದ್ಯೋಗವು ಕಿರಿಕಿರಿ ಎನಿಸಿದರೂ ನೀವು ಅದನ್ನು ಬಿಡಲಾರಿರಿ. ಇಷ್ಟು ದಿನ ದ್ವೇಷಿಸುತ್ತಿದ್ದ ವ್ಯಕ್ತಿಯು ಇಂದು ನಿಮ್ಮ ಮಿತ್ರನಾಗಲು ಬಂದಾನು. ನಿಮಗೆ ಅದು ಆಪತ್ತಿಗೆ ಸೂಚನೆಯಂತೆ ಕಂಡೀತು. ಹೂಡಕೆಗಾಗಿ ಖರೀದಿಸಿದ ಭೂಮಿಯನ್ನು ಮಾರಾಟ ಮಾಡಿ ಲಾಭ ಮಾಡಿಕೊಳಗಳುವಿರಿ. ದೇಹಪೀಡೆಯಿಂದ ನಿಮಗೆ ಬಹಳ ಕಷ್ಟವಾಗುವುದು. ಅಲ್ಪವಾದರೂ ದಾನ ಮಾಡುವ ಮನಸ್ಸು ಇರಲಿ. ಭೂಮಿಯ ಖರೀದಿಸಲು ಸಂಗಾತಿಯ ಜೊತೆ ಆರಂಭಿಕ ಚರ್ಚೆ ನಡೆಸುವಿರಿ.
ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ
ಮಕರ ರಾಶಿ:
ಆರ್ಥಿಕ ಕ್ಷೇತ್ರದ ಜನರಿಗೆ ತೊಂದರೆ ಬಾರದೇ ಕಾರ್ಯಗಳು ಮುಗಿಯುವುದು. ಯಾರಿಂದಲಾದರೂ ಸಿಗುವ ಪ್ರಶಂಸೆಯು ನಿಮಗೆ ಉತ್ತೇಜನ ಕೊಡಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಗಮನವು ಅಧಿಕವಾಗಲಿದೆ. ಸಂಗಾತಿಯ ಜೊತೆಗಿದ್ದ ನಿಮಗೆ ಆತಂಕ ದೂರವಾಗುವುದು. ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಕುಂದು ಕೊರತೆಯನ್ನು ನೋಡುತ್ತ ಹೆಚ್ಚಿನ ಕಾಲ ಕಳೆಯುವಿರಿ. ಉದ್ವೇಗವನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸುವಿರಿ.
ಕುಂಭ ರಾಶಿ :
ಉತ್ತಮವಾದ ಆಯ್ಕೆ ಮಾಡಿಕೊಳ್ಳಬೇಕೆಂದು ಹೋಗಿ ವಿಪರೀತವಾದ ಆಯ್ಕೆ ಮಾಡಿಕೊಂಡು ಬರುವಿರಿ. ನ್ಯಾಯಾಲಯದ ವ್ಯವಸ್ಥೆಯೊಳಗೆ ನೀವು ಸಿಕ್ಕಿ ಬೀಳುವಿರಿ. ಅದು ನಿಮ್ಮ ಮನಸ್ಸಿನ ಸಹಜತೆಯಲ್ಲ, ಗ್ರಹಗತಿಗಳು ಆ ಸಮಯದಲ್ಲಿ ಅಂತಹ ಯೋಚನೆಯನ್ನು ಮಾಡಲು ಪ್ರೇರಿಸಬಹುದು. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಭಡ್ತಿಯನ್ನು ನೀವು ಅಪೇಕ್ಷಿಸುವಿರಿ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು.
ಮೀನ ರಾಶಿ:
ಸ್ವಂತ ಉದ್ಯಮಿಗಳಾಗಿದ್ದರೆ ಹೆಚ್ಚಿನ ಲಾಭವೂ ಇದೆ. ಅವಿವಾಹಿತರಿಗೆ ವಿವಾಹ ಸಂಬಂಧವು ಬರಬಹುದು. ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಕೋನವಿರಲಿ. ಎಲ್ಲ ಮಾತು ಮುಗಿದ ಮೇಲೂ ಹೇಳುವುದು ಹಲವು ಇರಬಹುದು. ನಿಮಗೆ ತೃಪ್ತಿ ಎನಿಸದರೆ ಅದೇ ಉದ್ಯೋಗದಲ್ಲಿ ಮುಂದುವರಿಯಿರಿ. ಪಶ್ಚಾತ್ತಾಪದಿಂದ ತಪ್ಪುಗಳು ಸರಿಯಾಗುವುದು. ಕೆಲವು ಸಂದರ್ಭಗಳು ನಿಮ್ಮನ್ನು ಪರೀಕ್ಷಿಸಲು ಬರಬಹುದು. ಮನೆಯಲ್ಲಿ ಔಷಧೋಪಚಾರವನ್ನು ಮಾಡಿಕೊಳ್ಳಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ನಿಜ ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಭರಣೀ, ಯೋಗ : ಸುಕರ್ಮ, ಕರಣ : ಗರಜ, ಸೂರ್ಯೋದಯ – 06 – 00 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:01 – 17:37, ಯಮಗಂಡ ಕಾಲ 07:11 – 07:37, ಗುಳಿಕ ಕಾಲ 09:13 – 10:49
-ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 12:05 am, Thu, 9 July 26