ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಸಿದ್ಧಿ, ಕರಣ : ಗರಜ, ಸೂರ್ಯೋದಯ – 06 – 07 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:16, ಯಮಗಂಡ ಕಾಲ 10:51 – 12:25, ಗುಳಿಕ ಕಾಲ 13:59 – 15:33
ಮೇಷ ರಾಶಿ: ಅವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ಆದಾಯಕ್ಕೆ ಯೋಗ್ಯವಾದ ಕೃಷಿ ಚಟುವಟಿಕೆಯಲ್ಲಿ ನಿಮ್ಮದೇ ಆದ ಹೆಜ್ಜೆಗಳನ್ನು ಇಡುವಿರಿ. ನೀವು ಆಸ್ತಿಗೆ ಸಂಬಂಧಿಸಿದ ವಿವಾದವು ಇನ್ನೊಂದು ತಿರುವನ್ನು ಪಡೆಯಬಹುದು. ವಿದೇಶೀ ವಸ್ತುಗಳ ಮೇಲೆ ವ್ಯಾಮೋಹ ಬರಬಹುದು. ಹೊಸ ವ್ಯವಹಾರವನ್ನು ಮಾಡಲು ಉತ್ಸಾಹ ಕಡಿಮೆ ಆಗಲಿದೆ. ಮಾನಸಿಕ ಏಕಾಗ್ರತೆಯನ್ನು ಸಾಧಿಸುವುದು ಕಷ್ಟವಾಗಲಿದೆ. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು.
ವೃಷಭ ರಾಶಿ: ನಿಮ್ಮವರ ಬಗ್ಗೆ ನಿಮಗೆ ಬಹಳ ಕಾಳಜಿ ಇರಲಿದೆ. ನಿಮಗೆ ಉಂಟಾದ ತೊಂದರೆಯನ್ನು ಮರೆತು ನೀವು ಮೊದಲಿನಂತೆ ಆಗುವಿರಿ. ವಿದ್ಯಾಭ್ಯಾಸಕ್ಕೆ ಬೇಕಾದ ವಾತಾವರಣ ಸಿಗದೇ ಕಷ್ಟವಾದೀತು. ಮನೆಗೆ ಅವಶ್ಯಕವಿರುವ ವಸ್ತುಗಳನ್ನು ನೀವು ಖರೀದಿಸುವಿರಿ. ಧನನಷ್ಟವೆಂಬ ಭಾವವೂ ನಿಮ್ಮೊಳಗೆ ಅವ್ಯಕ್ತವಾಗಿ ಇರಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ತೊಡಗಿಸಲು ಪ್ರಯತ್ನಶೀಲರಾಗುವಿರಿ. ಯಾರನ್ನಾದರೂ ಮಾದರಿ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವಿರಿ. ನಿಮಗೆ ಯಾರಾದರೂ ಸುಳ್ಳುಹೇಳಬಹುದು.
ಮಿಥುನ ರಾಶಿ: ಯಾರಾದರೂ ಆಮಿಷವನ್ನು ತೋರಿಸಿ ಕೆಲಸವನ್ನು ಮಾಡಿಸಿಕೊಳ್ಳಬಹುದು. ಭವಿಷ್ಯದ ಬಗ್ಗೆ ನಿಮಗೆ ಸರಿಯಾದ ಕಲ್ಪನೆ ಸಿಗದೇಹೋಗಬಹುದು. ಸಂಗಾತಿಯ ಮನವೊಲಿಸಲು ಸತತ ಪ್ರಯತ್ನ ಮಾಡುವಿರಿ. ನಿಮ್ಮ ಇಚ್ಛಾಶಕ್ತಿಯಿಂದ ಬೇಕಾದುದನ್ನು ನೀವು ಪಡೆದುಕೊಳ್ಳುವಿರಿ. ಸಿಗಬೇಕಾದವರ ಭೇಟಿಯು ಬಹಳ ವಿಳಂಬವಾದೀತು. ಬರಬೇಕಾದ ಹಣದ ಬಗ್ಗೆ ತಿಳಿದಿರಲಿ. ಸಂಗಾತಿಯ ಸಹಕಾರ ನಿಮಗೆ ಸಿಗದೇ ಕಷ್ಟವಾಗುವುದು. ಇಂದು ನಿಮಗೆ ಆಹಾರದಿಂದ ತೊಂದರೆಯಾದೀತು.
ಕರ್ಕಾಟಕ ರಾಶಿ: ನಿಮ್ಮ ವರ್ತನೆಯಿಂದ ಅಧಿಕಾರವು ತಪ್ಪಬಹುದು. ಆಸ್ತಿಯ ಬಗ್ಗೆ ಸರಿಯಾದ ದಾಖಲೆಗಳು ಇರಲಿ. ವಿಶ್ರಾಂತಿ ಇಲ್ಲದೇ ಮಾಡುವ ಕೆಲಸವು ನಿಮಗೆ ಆಯಾಸವನ್ನು ತಂದುಕೊಟ್ಟೀತು. ಹಿತಶತ್ರುಗಳ ತೊಂದರೆಯು ಅಧಿಕವಾಗಿ ಇರಲಿದೆ. ಸಾಧಿಸಲು ಅವಕಾಶಗಳು ಹಲವಿದ್ದರೂ ಸಾಗಿಸುವ ಬಗ್ಗೆ ನಿಮಗೆ ಪೂರ್ಣ ಕಲ್ಪನೆ ಇರದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು.
ಸಿಂಹ ರಾಶಿ: ಸಂಬಂಧದಿಂದ ಭೂಮಿಯ ಲಾಭವು ಆಗುವುದಾದರೂ ಅದನ್ನು ಪರಿಶೀಲಿಸಿ ಒಪ್ಪಿಕೊಳ್ಳಿ. ನಿಮ್ಮ ಪ್ರತಿಷ್ಠೆಯನ್ನು ತೋರಿಸುಬಿರಿ. ನಿಮಗೆ ಆತ್ಮವಿಶ್ವಾಸವೇ ಇಡೀ ದಿನದ ಕೆಲಸವನ್ನು ಸುಲಲಿತವಾಗಿ ಮುಗಿಸಿಕೊಡುವುದು. ವಿದೇಶ ಪ್ರವಾಸವನ್ನು ಕಾರ್ಯ ನಿಮಿತ್ತ ಮಾಡುವಿರಿ. ಒಂಟಿತನ ಭಯವು ನಿಮ್ಮನ್ನು ಕಾಡಬಹುದು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ಯಾರನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ.
ಕನ್ಯಾ ರಾಶಿ: ಇಂದು ನಿಮಗೆ ಯಾರಿಂದಲಾದರೂ ಯೋಗ್ಯ ಸಂಗಾತಿಯ ಮಾಹಿತಿಗಳು ಸಿಗುವುದು. ಕುರುಡು ತನದಿಂದ ಎಲ್ಲಿಯೋ ಹೂಡಿಕೆ ಮಾಡುವುದನ್ನು ತಪ್ಪಿಸಿ. ಸ್ಫೂರ್ತಿದಾಯಕ ಸಂಗತಿಗಳು ನಿಮ್ಮನ್ನು ಇನ್ನಷ್ಟು ಬಲಗೊಳಿಸುವುವು. ಇಂದಿನ ಸಮಯವನ್ನು ಸುಮ್ಮನೇ ವ್ಯರ್ಥವಾಗಿ ಕಳೆಯುವಿರಿ. ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ನೀವಿಂದು ಹೆಚ್ಚು ಗಮನಕೊಡುವಿರಿ. ಪಿತ್ತ ಮತ್ತು ಕಫಗಳ ಸಂಬಂಧದಿಂದ ರೋಗಗಳು ಬರಬಹುದು.
ತುಲಾ ರಾಶಿ: ನಿಮ್ಮ ಎಂದಿನ ಬಿಮ್ಮನ್ನು ಬಿಡಬೇಕಾಗಬಹುದು. ನೀವು ಇಂದು ಇಚ್ಛಿಸಿದವರಿಗೆ ದಾನವನ್ನು ಕೊಡುವಿರಿ. ನಿಮ್ಮ ನಿಯಮಗಳನ್ನು ಬಿಟ್ಟು ನೀವು ಹೋಗಲಾರಿರಿ. ಸಹೋದ್ಯೋಗಿಗಳು ನಿಮ್ಮ ನಕಾರಾತ್ಮಕ ಆಲೋಚನೆ ಉಳ್ಳವರಾಗುವರು. ಕೃಷಿ ಕಾರ್ಯಕ್ಕೆ ಸೂಕ್ತ ಸಮಯವಾಗಿದ್ದು, ಬಿಡುವು ಮಾಡಿಕೊಳ್ಳುವಿರಿ. ನೀವು ಹಣ ಸಂಪಾದನೆಗೆ ಆರಿಸಿಕೊಂಡ ಮಾರ್ಗವು ಸರಿಯೆನಿಸದೇ ಇರಬಹುದು. ನಿಮ್ಮ ಅಮೂಲ್ಯ ವಸ್ತುಗಳು ನಷ್ಟವಾಗಬಹುದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ಹೂಡಿಕೆಯ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬರಬಹುದು. ಹೊಸತನವನ್ನು ನೀವು ರೂಡಿಸಿಕೊಳ್ಳುವ ಹಂಬಲವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ದೂರವಾಣಿ ಕರೆಗಳಿಂದ ಆಯಾಸವಾಗಲಿದೆ. ಕೇಳಿದವರಿಗೆ ಹಣವನ್ನು ನೀಡುವಿರಿ. ಸಂಪತ್ತಿನ ಹಿಂದೆ ನೀವು ಓಡಬೇಕಾಗಿಲ್ಲ. ನಿಮ್ಮ ಕೆಲಸವೇ ಸಂಪತ್ತು ಬರುವಂತೆ ಮಾಡುವುದು. ಎಲ್ಲರನ್ನೂ ಆತ್ಮೀಯವಾಗಿ ಕಾಣುವಿರಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ.
ಧನು ರಾಶಿ: ನೀವು ಪರರ ತಪ್ಪಿನಿಂದ ಕಲಿಯುವುದು ಉತ್ತಮ. ಮನೆಯ ಕಾರಣಕ್ಕೆ ಉದ್ಯೋಗದ ಕಿರಿಕಿರಿಯು ನಿಮ್ಮನ್ನು ಬಾಧಿಸದೇ ಇರದು. ಧಾರ್ಮಿಕ ಆಚರಣೆಯಿಂದ ಶ್ರೇಯಸ್ಸು ಪ್ರಾಪ್ತಿ. ನಿಮ್ಮನ್ನು ದ್ವೇಷಿಸಲು ಕಾರಣವಿಲ್ಲದಿದ್ದರೂ ದ್ವೇಷಿಸುವರು. ಕರ್ತವ್ಯದಲ್ಲಿ ಲೋಪವಾಗುವ ಸಾಧ್ಯತೆ ಇದೆ. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ.
ಮಕರ ರಾಶಿ: ಇಂದು ನಿಮ್ಮ ಹಳೆಯ ದಾಯಾದಿ ಕಲಹವು ಪುನಃ ಆರಂಭವಾಗಬಹುದು. ಆಕಸ್ಮಿಕ ಧನಲಾಭ ಹಾಗೂ ಖರ್ಚುಗಳು ಒಟ್ಟಿಗೇ ಆಗಲಿವೆ. ಸಹೋದರರಿಂದ ನಿಮಗೆ ಬೇಕಾದ ಸಂಪತ್ತು ಸಿಗಲಿದೆ. ಸಮಯಕ್ಕೆ ಬೆಲೆ ಕೊಡಬೇಕಾದೀತು. ಮನೆಯಲ್ಲಿ ಧಾರ್ಮಿಕ ಕಾರ್ಯವನ್ನು ನೀವು ಇಂದು ಮಾಡಿಸುವಿರಿ. ಇಂದು ನೀವು ಉದ್ಯೋಗದಿಂದ ಸ್ವಲ್ಪ ವಿಶ್ರಾಂತಿ ಪಡೆಯುವಿರಿ. ವೈವಾಹಿಕ ಸಂಬಂಧಗಳನ್ನು ಬಂಧುಗಳಲ್ಲಿ ಬೆಳೆಸುವಿರಿ. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ.
ಕುಂಭ ರಾಶಿ: ಇಂದಿನ ಹಣಕಾಸಿನ ಬಿಕ್ಕಟ್ಟು ಮನಸ್ಸಿನ ವೇಗವನ್ನು ಹೆಚ್ಚಿಸುವುದು. ಕಡಿಮೆ ಶ್ರಮದಿಂದ ಹೆಚ್ಚು ಗಳಿಸುವ ಬಗ್ಗೆ ಚಿಂತಿಸುವಿರಿ. ಯಾರನ್ನೂ ದ್ವೇಷಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬೇಡ. ಸ್ಥಾನಮಾನದ ಬಗ್ಗೆ ಹೆಮ್ಮೆ ಇರುವುದು. ನಿರ್ಮಾಣದವರಿಗೆ ಒತ್ತಡ ಹೆಚ್ಚಾಗುವುದು. ನಿಮ್ಮ ಕಾರ್ಯಗಳು ಇಂದು ಮುಕ್ತಾಯಗೊಳ್ಳಬಹುದು. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ.
ಮೀನ ರಾಶಿ: ಇಂದು ನೀವೊಬ್ಬರೇ ಯತ್ನಿಸಿದರೂ ಕಾರ್ಯದಲ್ಲಿ ಜಯವು ಸಿಗುವುದು. ಹಿತೈಷಿಗಳ ಬೆಂಬಲವೂ ನಿಮಗೆ ಅತ್ಯವಶ್ಯವಾಗಿ ಬೇಕು. ನಿಮ್ಮ ಜವಾಬ್ದಾರಿಯು ಮುಕ್ತಾಯ ಆಗಬಹುದು. ಹೊರಗಿನಿಂದ ಕಣ್ಣಿಗೆ ತೊಂದರೆ ಬರಲಿದೆ. ತಂದೆಯಿಂದ ಸಂಪತ್ತನ್ನು ಅಪೇಕ್ಷಿಸುವಿರಿ. ಸಂದರ್ಭೋಚಿತ ನಿಮ್ಮ ವರ್ತನೆಯು ಅಪಾರ್ಥವನ್ನು ಕೊಡಬಹುದು. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು.
ಲೋಹಿತ್ ಹೆಬ್ಬಾರ್-8762924271 (what’s app only)