ಮೇಷ ರಾಶಿ:
ನಿಮ್ಮ ವಿಶ್ಲೇಷಣಾ ಶಕ್ತಿ ಇಂದಿನ ಪ್ರಮುಖ ಆಸ್ತಿಯಾಗಲಿದೆ. ಹಣದ ವ್ಯವಹಾರಗಳಲ್ಲಿ ನಿಖರತೆ ಅಗತ್ಯ. ವಿಶೇಷವಾಗಿ ಬಾಕಿ ಇರುವ ವಿಚಾರದ ಕಡೆ ಗಮನ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸದ ಗುಣಮಟ್ಟವು ಮೇಲಧಿಕಾರಿಗಳ ಗಮನ ಸೆಳೆಯಲಿದೆ. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಿರುವುದಿಲ್ಲ. ಮಕ್ಕಳ ಜೊತೆ ಸಂತೋಷದಿಂದ ಕಳೆಯುವುದು ಅವರಿಗೂ ಖುಷಿಯಾಗುವುದು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು.
ವೃಷಭ ರಾಶಿ:
ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಒಳ್ಳೆಯದು. ಮಕ್ಕಳ ಜೊತೆಗೆ ಸಮಯ ಕಳೆಯುವುದು ನಿಜವಾದ ಸಂತೋಷ ನೀಡುತ್ತದೆ. ಉದ್ಯೋಗದಲ್ಲಿ ನಿಮ್ಮ ಶ್ರಮವನ್ನು ಗುರುತಿಸಲಾಗುವುದು. ಅನಾರೋಗ್ಯದಿಂದ ಅವಕಾಶ ವಂಚಿತರಾಗುವಿರಿ. ಸದುಪಯೋಗ ಆಗುವಂತಹ ಕೆಲಸದ ಕಡೆ ಗಮನವಿರಲಿ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸುವಿರಿ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ.
ಮಿಥುನ ರಾಶಿ:
ನೀವು ಕೆಲವು ನಷ್ಟಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಆಧ್ಯಾತ್ಮಿಕ ಚಟುವಟಿಕೆಗಳು ಉತ್ತಮ. ಭೂಮಿಯ ವಿಸ್ತರಣೆಯ ಬಗ್ಗೆ ಯೋಚಿಸುವಿರಿ. ಹಣಕಾಸಿನ ತೊಂದರೆಗಳು ತುರ್ತು ಖರ್ಚುಗಳಿಂದ ಉಂಟಾಗಬಹುದು. ಮನೆಯ ಕೆಲಸಗಳು ಕೆಲವೊಂದು ತಲೆನೋವಿಗೆ ಕಾರಣವಾಗಲಿದೆ. ನಾಯಕರು ತಮ್ಮ ಬಗ್ಗೆ ಒಳ್ಳಯ ಸುದ್ದಿಯನ್ನು ಕೇಳುವರು. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ.
ಕರ್ಕಾಟಕ ರಾಶಿ:
ಬಹಳ ದಿನಗಳ ಅನಂತರ ಪುಣ್ಯ ಸ್ಥಳಗಳಿಗೆ ಹೋಗುವ ಅವಕಾಶ. ಪ್ರತಿಫಲದ ಅಪೇಕ್ಷೆ ಇಲ್ಲದೇ ಮಾಡಿದ ಸಹಾಯದಿಂದ ತೃಪ್ತಿ. ಅನವಶ್ಯಕ ವ್ಯವಹಾರಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಕೆಲಸದಲ್ಲಿ ಹೊಸ ಯೋಜನೆಗಳನ್ನು ರೂಪಿಸಲು ಇಂದು ಒಳ್ಳೆಯ ಸಮಯ. ನಿಮ್ಮ ವ್ಯವಹಾರದಲ್ಲಿ ಲೆಕ್ಕವು ತಪ್ಪಾಗಿ ನೀವು ಹಣವನ್ನು ಕಳೆದುಕೊಳ್ಳಬಹುದು. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ವಿದ್ಯಾರ್ಥಿಗಳು ಕೆಲವುದರಲ್ಲಿ ಸೋಲಬಹುದು.
ಸಿಂಹ ರಾಶಿ:
ಹಂತಹಂತವಾದ ಬೆಳವಣಿಗೆಯಿಂದ ಮಾತ್ರ ನಿರಂತರ ಸಂತಸ. ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇತರರ ಮಾತಿಗೆ ಒಳಗಾಗಬೇಡಿ, ಹಣಕಾಸಿನಲ್ಲಿ ನಷ್ಟವಾಗುವ ಸಂಭವವಿದೆ. ದೂರದ ಸಂಬಂಧಿಗಳು ಸಂಪರ್ಕಿಸಿ ಸಂಭ್ರಮ ತರಬಹುದು. ವ್ಯಾಪಾರದ ಗುತ್ತಿಗೆಗಳಲ್ಲಿ ನಿಖತೆ ಅಗತ್ಯ. ಆಪ್ತರ ಬಗ್ಗೆ ನಿಮಗೆ ಹಲವು ಅನುಮಾನಗಳು ಇರಬಹುದು. ಕಛೇರಿಯ ಕಿರಿಕಿರಿಯಿಂದ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು.
ಕನ್ಯಾ ರಾಶಿ:
ವ್ಯವಹಾರವನ್ನು ಗೌಪ್ಯವಾಗಿ ನಿಮಗೆ ಮಾತ್ರ ಗೊತ್ತಾಗುವ ಹಾಗೆ ಮಾಡುವುದು ಬೇಡ. ಅನಂತರ ಪಶ್ಚಾತ್ತಾಪ ಪಡಬೇಕಾಗುವುದು. ಇಂದು ನಿಮ್ಮ ಆಂತರಿಕ ಶಕ್ತಿ ಹೆಚ್ಚು ಸ್ಪಷ್ಟವಾಗಿ ತೋರಬಹುದು. ಆರ್ಥಿಕ ವಿಷಯಗಳಲ್ಲಿ ಬುದ್ಧಿವಂತಿಕೆ ಬಳಸಿ ನಿರ್ಧಾರ ತೆಗೆದುಕೊಳ್ಳಿ. ಸ್ತ್ರೀಯರಿಗೆ ತಾಳ್ಮೆಯ ಪರೀಕ್ಷೆ ಆಗಬಹುದು. ಮನೆಯ ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಸಹೋದರಿಯರ ನಡುವೆ ಕಲಹವಾಗಬಹುದು.
ತುಲಾ ರಾಶಿ:
ಇತ್ತೀಚಿನ ನಿರಾಶೆಯಿಂದ ಹೊರಬರಲು ನೀವು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಬೇಕು. ಇಂದು ಸಂಗಾತಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ಚರ್ಚೆ ಆಗಬಹುದಾದರೂ, ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಬಹುದು. ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಕೋಪವನ್ನು ದೀರ್ಘಕಾಲ ಮುಂದುವರಿಸುವುದು ಬೇಡ. ಸ್ವಾಭಿಮಾನ ಬಂಧುಗಳ ಎದುರು ಕಾಣಿಸಿಕೊಳ್ಳಬಹುದು.
ವೃಶ್ಚಿಕ ರಾಶಿ:
ಇಂದು ಹಣದ ನಷ್ಟವನ್ನು ತಪ್ಪಿಸಲು ಖರ್ಚನ್ನು ಮಿತಿಗೊಳಿಸಿ. ಜೀವನದಲ್ಲಿ ಹೊಸತನ್ನು ಸ್ವೀಕರಿಸುವ ಮನಸ್ಥಿತಿಯಿರಲಿ. ಹಳೆಯ ಮನೆಯನ್ನು ದುರಸ್ತಿ ಮಾಡುವ ಚಿಂತನೆಯಿರುವುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ಸಹೋದರ ಸಹೋದರಿಯರ ಜೊತೆ ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಜಗಳಗಳು ಆಗಬಹುದು.
ಧನು ರಾಶಿ:
ಹೊಸ ಆರ್ಥಿಕ ಒಪ್ಪಂದಗಳಿಂದ ಲಾಭ ಸಾಧ್ಯ. ಸಣ್ಣ ವಿಚಾರಗಳಿಂದ ಸಂಗಾತಿಯೊಂದಿಗೆ ಮನಸ್ತಾಪ ಸಂಭವಿಸಬಹುದು. ಎಂದೂ ನಂಬದವರ ಮಾತನ್ನು ನೀವು ಇಂದು ನಂಬುವಿರಿ. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಅಪರಿಚಿತರ ಮಾತುಗಳಿಂದ ದೂರವಿರಬೇಕು. ಕೆಲವು ಕೆಲಸಗಳಿಗಾಗಿ ನೀವು ಸ್ವಲ್ಪ ದೂರ ಪ್ರಯಾಣಿಸಬೇಕಾಗಬಹುದು. ಏನೂ ಮಾಡಿದರೂ ಆಗುತ್ತದೆ ಎಂದು ಏನನ್ನಾದರೂ ಮಾಡಲು ಹೋಗುವುದು ಬೇಡ.
ಮಕರ ರಾಶಿ:
ಹಣಕಾಸಿನ ಚಟುವಟಿಕೆಗಳಲ್ಲಿ ಸುಧಾರಣೆಯಿಂದ ಬಾಕಿ ಬಿಲ್ಗಳನ್ನು ತೀರಿಸಲು ಅನುಕೂಲ. ಸಂಬಂಧಿಕರ ಆಗಮನದಿಂದ ಸಂಜೆಯು ವಿಶೇಷವಾಗಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ಇಂದು ಹಳೆಯ ತಪ್ಪುಗಳನ್ನು ಮರೆತು ಸಂತೋಷವಾಗಿರಿ. ತಾಯಿಗೆ ಯಾವುದಾದರೂ ಹಳೆಯ ಕಾಯಿಲೆ ಮರುಕಳಿಸಬಹುದು. ಬಹಳ ದಿನಗಳ ಅನಂತರ ಹಳೆಯ ಗೆಳೆಯರನ್ನು ಭೇಟಿಯಾಗುವ ಸಂತಸ ಇರಲಿದೆ.
ಕುಂಭ ರಾಶಿ:
ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ. ತಪ್ಪಾದ ನಿರ್ಧಾರಗಳು ನಷ್ಟಕ್ಕೆ ಕಾರಣವಾಗುತ್ತದೆ. ಕುಟುಂಬದಲ್ಲಿ ಹಿರಿಯರ ಸಲಹೆಗಳನ್ನು ಗೌರವದಿಂದ ಸ್ವೀಕರಿಸಿ. ಸ್ನೇಹಿತರೊಂದಿಗೆ ಚರ್ಚೆಗಳಲ್ಲಿ ಧೈರ್ಯವಂತಿಕೆಯಿಂದ ನಿರ್ವಹಿಸಿ. ಇಂದು ಹೆಚ್ಚಿನ ಸಮಯವನ್ನು ತಂದೆ, ತಾಯಿಯರ ಸೇವೆಯಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಬಹಳ ದಿನಗಳಿಂದ ಒಂದೇ ತರದ ಕೆಲಸಗಳಿಂದ ಬೇಸರವಾಗುವುದು.
ಮೀನ ರಾಶಿ:
ಪ್ರೀತಿಯ ಸಂಗಾತಿಯ ಜೊತೆ ವಿಶೇಷ ಸಮಯ ಕಳೆಯಬಹುದು. ನಿಮ್ಮ ಕೆಲಸದಲ್ಲಿ ಉತ್ತಮ ಸಾಧನೆ ಮಾಡಲು ಸಮಯ ಸೂಕ್ತ. ನಿರೀಕ್ಷಿಸದ ಅತಿಥಿಗಳ ಆಗಮನದಿಂದ ಕೆಲವೊಂದು ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗಬಹುದು. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತೂ ಕೈಯಲ್ಲಿ ನಿಲ್ಲದು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವೈಧೃತಿ, ಕರಣ : ಕಿಂಸ್ತುಘ್ನ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:17 – 10:50, ಯಮಗಂಡ ಕಾಲ 13:57 – 15:31, ಗುಳಿಕ ಕಾಲ 06:10 – 07:44
-ಲೋಹಿತ ಹೆಬ್ಬಾರ್ – 8762924271 (what’s app only)