Headlines

ದೇಶದಲ್ಲೇ ಮೊದಲ ಬಾರಿಗೆ ‘ಧಾರ್ಮಿಕ ತ್ಯಾಜ್ಯ ವಿಲೇವಾರಿ’ ಅಭಿಯಾನಕ್ಕೆ ಸಾಕ್ಷಿಯಾದ ಮಂಗಳೂರು – Kannada News | Mangaluru Pioneers India’s First Religious Waste Management Drive: 12.5 Tons Respectfully Cleared

ಧಾರ್ಮಿಕ ತ್ಯಾಜ್ಯ ವಿಲೇವಾರಿImage Credit source: tv9 kannada

ಮಂಗಳೂರು, ಮೇ 01: ಕಡಲನಗರಿ ಮಂಗಳೂರಿನಲ್ಲಿ (Mangaluru) ದೇಶದಲ್ಲೇ ಮೊದಲ ಬಾರಿಗೆ ಧಾರ್ಮಿಕ ತ್ಯಾಜ್ಯ (Religious Waste) ವಿಲೇವಾರಿಯ ವಿಶಿಷ್ಟ ಅಭಿಯಾನವೊಂದು ಯಶಸ್ವಿಯಾಗಿ ನಡೆದಿದೆ. ಕೇವಲ ಹತ್ತು ದಿನಗಳ ಅವಧಿಯಲ್ಲಿ ನಗರದಲ್ಲಿ ಸುಮಾರು ಹನ್ನೆರಡೂವರೆ ಟನ್ ಧಾರ್ಮಿಕ ತ್ಯಾಜ್ಯಗಳನ್ನು ಸಂಗ್ರಹಿಸಲಾಗಿದೆ. ಈ ಅಭಿಯಾನದಡಿ ಕೇವಲ ತ್ಯಾಜ್ಯವನ್ನು ಸಂಗ್ರಹ ಮಾಡಿರುವುದು ಮಾತ್ರವಲ್ಲ ಅಲ್ಲದೆ, ದೇವರ ಫೋಟೋಗಳು, ವಿಗ್ರಹಗಳು, ಗಂಟೆಗಳು ಹಾಗೂ ದೀಪಗಳಂತಹ ಧಾರ್ಮಿಕ ವಸ್ತುಗಳಿಗೆ ಸಂಸ್ಕಾರಪೂರ್ವಕ ವಿದಾಯವನ್ನು ಸಹ ನೀಡಲಾಗಿದೆ.

ಮಂಗಳೂರಿನ ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್ ಮತ್ತು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ಈ ಅಭಿಯಾನ ಮಾಡಲಾಗಿದೆ. ನಿರುಪಯುಕ್ತ ದೇವರ ಫೋಟೋಗಳು, ಗಂಟೆಗಳು ಹಾಗೂ ಮೂರ್ತಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಕರೆ ನೀಡಲಾಗಿತ್ತು. ನಗರದ ಐದು ಪ್ರಮುಖ ಸ್ಥಳಗಳಲ್ಲಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದರಿಂದ ನಿರೀಕ್ಷೆಗೂ ಮೀರಿ ಹನ್ನೆರಡೂವರೆ ಟನ್ ಧಾರ್ಮಿಕ ತ್ಯಾಜ್ಯ ಸಂಗ್ರಹವಾಗಿದೆ.

ತ್ಯಾಜ್ಯ ವಿಲೇವಾರಿಯಲ್ಲಿ ಸಿಕ್ಕಿದ್ದೇನು?

ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಂಗ್ರಹವಾದ ತ್ಯಾಜ್ಯದಲ್ಲಿ 15,000 ದೇವರ ಫೋಟೋ ಫ್ರೇಮ್‌ಗಳು, 2,500 ಕೆ.ಜಿ ಮೂರ್ತಿ ಮತ್ತು ಸ್ಮರಣಿಕೆಗಳು, 1,500 ಕೆ.ಜಿ ಕಾಗದ-ಪುಸ್ತಕಗಳು, 1,200 ಕೆ.ಜಿ ಮರುಬಳಕೆ ಅಸಾಧ್ಯವಾದ ವಸ್ತುಗಳು, 800 ಕೆ.ಜಿ ಕುಂಕುಮ-ಪ್ರಸಾದ, 700 ಕೆ.ಜಿ ಪ್ಲಾಸ್ಟಿಕ್, 500 ಕೆ.ಜಿ ಲೋಹದ ವಸ್ತುಗಳು ಹಾಗೂ 500 ಕೆ.ಜಿ ಮರದ ವಸ್ತುಗಳು ಸೇರಿವೆ.

64

 

ಹತ್ತು ಸಂಘಟನೆಗಳ 150ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಯಕರ್ತರು ಈ ವಸ್ತುಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿದರು. ವಿಂಗಡಣೆಯ ನಂತರ ಕಬ್ಬಿಣ, ಮರ, ಪ್ಲಾಸ್ಟಿಕ್, ಕಾರ್ಡ್‌ಬೋರ್ಡ್ ಮತ್ತು ಕಾಗದಗಳನ್ನು ಮರುಬಳಕೆಗೆ ಕಳುಹಿಸಿಕೊಡಲಾಯಿತು.

ಇದನ್ನೂ ಓದಿ: ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ: ವಾಹನಗಳನ್ನ ತೊಳೆಯದಂತೆ ಸೂಚನೆ

ಸಂಗ್ರಹವಾದ ಸಾಮಗ್ರಿಗಳಲ್ಲಿ ಬೆಳ್ಳಿ, ತಾಮ್ರ ಮತ್ತು ಹಿತ್ತಾಳೆಯಂತಹ ಬೆಲೆಬಾಳುವ ಲೋಹಗಳು ಪತ್ತೆಯಾಗಿದ್ದವು. ಪರಿಣಿತರ ನೆರವಿನಿಂದ ಈ ಲೋಹಗಳನ್ನು ಬೇರ್ಪಡಿಸಿ ಕರಗಿಸಿದಾಗ, ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಲೋಹಗಳು ಲಭಿಸಿದೆ. ಈ ಮೊತ್ತವನ್ನು, ಅಭಿಯಾನದ ಸಂದರ್ಭದಲ್ಲಿ ಸ್ವಯಂಸೇವಕರಿಗೆ ಊಟ ಮತ್ತಿತರ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.

55

 

ಪ್ರಾಯೋಗಿಕವಾಗಿ ಹಮ್ಮಿಕೊಂಡಿದ್ದ ಈ ಧಾರ್ಮಿಕ ತ್ಯಾಜ್ಯ ಸಂಗ್ರಹ ಅಭಿಯಾನವು ಸಂಪೂರ್ಣ ಯಶಸ್ವಿಯಾಗಿದೆ. ನಗರದ ಅಶ್ವಥ ಕಟ್ಟೆಗಳ ಬುಡದಲ್ಲಿ ಅಥವಾ ಮನೆಯ ಮೂಲೆಗಳಲ್ಲಿ ಅನಾಥವಾಗಿ ಬಿಸಾಡಲಾಗಿದ್ದ ಧಾರ್ಮಿಕ ವಸ್ತುಗಳಿಗೆ ಗೌರವಯುತ ವಿದಾಯ ಸಿಕ್ಕಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಇನ್ನಷ್ಟು ವಿಸ್ತಾರವಾಗಿ ಮುಂದುವರಿಸಲು ಆಯೋಜಕರು ಯೋಜನೆ ಹಾಕಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *