ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಒಂದು ವರ್ಗದ ಜನರು ರಶ್ಮಿಕಾನ ಟೀಕಿಸಲು ಆರಂಭಿಸಿದರು. ರಶ್ಮಿಕಾ ಅವರು ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ರದ್ದು ಮಾಡಿಕೊಂಡಿದ್ದನ್ನು ನೆನಪಿಸಿಕೊಂಡು ತಕರಾರು ತೆಗೆದಿದ್ದರು. ದ್ವೇಷದ ಸಂದೇಶಗಳನ್ನು ಹಬ್ಬಿಸಿದ್ದರು. ಇದರ ಮಧ್ಯೆಯೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇನ್ಸ್ಟಾಗ್ರಾಮ್ ಪೋಸ್ಟ್ ಹೊಸ ದಾಖಲೆಯನ್ನೇ ಬರೆದಿದೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ಉದಯಪುರದಲ್ಲಿ ಅದ್ದೂರಿಯಾಗಿ ನಡೆಯಿತು. ರಾಜರ ಥೀಮ್ನಲ್ಲಿ ಈ ಮದುವೆ ನಡೆದಿದೆ. ಈ ವಿವಾಹಕ್ಕೆ ಕೋಟ್ಯಂತರ ರೂಪಾಯಿಯನ್ನು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸುರಿದಿದ್ದಾರೆ. ಇವರ ವಿವಾಹ ಫೋಟೋಗಳಿಗೆ ಅಭಿಮಾನಿಗಳು ಕಾದಿದ್ದರು. ವಿವಾಹವಾದ (ಫೆಬ್ರವರಿ 26) ದಿನವೇ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಪ್ರತ್ಯೇಕವಾಗಿ ಫೋಟೋ ಪೋಸ್ಟ್ ಮಾಡಿದರು. ಈ ಫೋಟೋ ದಾಖಲೆ ಬರೆದಿದೆ. 24 ಗಂಟೆ ಅವಧಿಯಲ್ಲಿ ಈ ಫೋಟೋಗೆ 40.7 ಮಿಲಿಯನ್ ವೀವ್ಸ್ ಸಿಕ್ಕಿದೆ.
ವಿಜಯ್ ಅವರ ಪೋಸ್ಟ್ಗೆ 18.1 ಮಿಲಿಯನ್ ಹಾಗೂ ರಶ್ಮಿಕಾಗೆ 22.6 ಮಿಲಿಯನ್ಸ್ ಲೈಕ್ಸ್ ಸಿಕ್ಕಿದೆ. ಇವುಗಳನ್ನು ಸೇರಿಸಿದ್ರೆ 4 ಕೋಟಿ ಆಗುತ್ತದೆ. ಇದು ಈ ದಂಪತಿ ಮೇಲೆ ಅಭಿಮಾನಿಗಳಿಗೆ ಇರೋ ಪ್ರೀತಿಯನ್ನು ತೋರಿಸುತ್ತದೆ. ಒಂದು ವರ್ಗ ಹಬ್ಬಿಸುತ್ತಿರುವ ದ್ವೇಷದ ಮಧ್ಯೆಯೂ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಪ್ರೀತಿ ಸಿಕ್ಕಿದೆ.
ಈ ಮೊದಲು ವಿವಾಹ ಆದ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ದಂಪತಿಯ ಫೋಟೋ ಬರೋಬ್ಬರಿ 27 ಮಿಲಿಯನ್ ಲೈಕ್ಸ್ (24 ಗಂಟೆಯಲ್ಲಿ) ಪಡೆದಿತ್ತು. ಈಗ ಈ ದಾಖಲೆಯನ್ನು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮುರಿದಿದ್ದಾರೆ.
ಇದನ್ನೂ ಓದಿ: ನಗು ಚೆಲ್ಲುತ್ತಾ ಗಂಡನ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ (14 ಮಿಲಿಯನ್), ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ (12.6 ಮಿಲಿಯನ್), ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ (7.8 ಮಿಲಿಯನ್) ಪಡೆದಿತ್ತು. ಈಗ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಈ ಎಲ್ಲಾ ದಾಖಲೆಯನ್ನು ಮುರಿದು ಹಾಕಿದ್ದಾರೆ. ಈ ಮೂಲಕ 24 ಗಂಟೆಯಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಸೆಲೆಬ್ರಿಟಿ ಜೋಡಿ ಇವರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.