Headlines

‘ಧುರಂಧರ್ 2’ ಕಲೆಕ್ಷನ್: ‘ಪುಷ್ಪ 2’, ‘ಬಾಹುಬಲಿ 2’ ದಾಖಲೆ ಮುರಿಯಲು ಇನ್ನೆಷ್ಟು ಕೋಟಿ ಬಾಕಿ – Kannada News | Dhurandhar 2 collection report: Movie about break Pushpa 2 and Bahubali 2 record

ಧುರಂಧರ್ 2’ (Dhurandhar 2) ಸಿನಿಮಾ ಬಿಡುಡಗೆ ಆಗಿ ಇಂದಿಗೆ 28 ದಿನಗಳಾಗಿವೆ. ಸಿನಿಮಾ ಭರ್ಜರಿ ಗಳಿಕೆಯನ್ನು ಮುಂದುವರೆಸಿದೆ. ಇತ್ತೀಚೆಗೆ ಗಳಿಕೆಯಲ್ಲಿ ಸಣ್ಣ ಇಳಿಕೆ ಕಂಡು ಬಂದಿದೆಯಾದರೂ ಸಿನಿಮಾದ ಒಟ್ಟಾರೆ ಗಳಿಕೆ ಸಂಖ್ಯೆ ದೊಡ್ಡದಾಗಿಯೇ ಇವೆ. ‘ಧುರಂಧರ್ 2’ ಸಿನಿಮಾದ ಸುಮಾರು 10 ಸಾವಿರಕ್ಕೂ ಹೆಚ್ಚು ಶೋಗಳು ಈಗಲೂ ದೇಶದಾದ್ಯಂತ ಪ್ರದರ್ಶನವಾಗುತ್ತಿದ್ದು, ದಿನವಹಿ ಕಲೆಕ್ಷನ್ 7 ರಿಂದ 10 ಕೋಟಿ ಇದೆ. ಸಿನಿಮಾ ಬಿಡುಗಡೆ ಆಗಿ ತಿಂಗಳಾಗುತ್ತಾ ಬಂದರೂ ಕೋಟಿಗಳಲ್ಲಿ ಗಳಿಕೆ ಮಾಡುತ್ತಿರುವುದು ಸಾಮಾನ್ಯವಲ್ಲ. ಇದೀಗ ಈ ಸಿನಿಮಾ ‘ಪುಷ್ಪ 2’ ಮತ್ತು ‘ಬಾಹುಬಲಿ 2’ ದಾಖಲೆಗಳನ್ನು ಮುರಿಯುವ ಹೊಸ್ತಿಲಲ್ಲಿದೆ.

‘ಧುರಂಧರ್ 2’ ಸಿನಿಮಾ 27 ದಿನಗಳ ಬಳಿಕ ಭಾರತದಾದ್ಯಂತ 1311 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1727 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಆಗಿದೆ. ಈ ಮೂಲಕ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ದಾಖಲೆಯನ್ನು ‘ಧುರಂಧರ್ 2’ ಸಿನಿಮಾ ಮುರಿಯಲು ಕೆಲವೇ ಕೋಟಿಗಳು ಬಾಕಿ ಇದೆ. ‘ಪುಷ್ಪ 2’ ಸಿನಿಮಾ ಭಾರತದಲ್ಲಿ 1471 ಕೋಟಿ (ಗ್ರಾಸ್ ಕಲೆಕ್ಷನ್) ಮಾಡಿದೆ ಎನ್ನಲಾಗಿದೆ. ಇನ್ನು ‘ಬಾಹುಬಲಿ 2’ ಸಿನಿಮಾ ಭಾರತದಲ್ಲಿ 1416 ಕೋಟಿ ಗಳಿಕೆ ಮಾಡಿತ್ತು. ಈ ಎರಡೂ ಸಿನಿಮಾಗಳ ದಾಖಲೆಗಳನ್ನು ಶೀಘ್ರವೇ ಮುರಿಯಲಿದೆ ‘ಧುರಂಧರ್ 2’.

‘ಧುರಂಧರ್ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1727 ಕೋಟಿ ಗಳಿಕೆ ಮಾಡಿದ್ದು, ‘ಪುಷ್ಪ 2’ ಸಿನಿಮಾದ ವರ್ಲ್ಡ್ ಬಾಕ್ಸ್ ಆಫೀಸ್ ಕಲೆಕ್ಷನ್ 1742 ಕೋಟಿ ರೂಪಾಯಿಗಳಾಗಿವೆ. ಈ ದಾಖಲೆಯನ್ನು ಅತ್ಯಂತ ಶೀಘ್ರದಲ್ಲೇ ‘ಧುರಂಧರ್ 2’ ಸಿನಿಮಾ ಮುರಿಯಲಿದೆ. ಆದರೆ ‘ಬಾಹುಬಲಿ 2’ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ಸುಮಾರು 1800 ಕೋಟಿ ಇದ್ದು, ಈ ದಾಖಲೆ ಮುರಿಯಲು ‘ಧುರಂಧರ್ 2’ಗೆ ಇನ್ನಷ್ಟು ಹೆಚ್ಚಿನ ಸಮಯ ಬೇಕಾಗಬಹುದು.

ಇದನ್ನೂ ಓದಿ:RCB ತಂಡದಲ್ಲಿ ಧುರಂಧರ ದಂಡೇ ಇದೆ: ಎದುರಾಳಿಗಳು ನಡುಗುತ್ತಿದ್ದಾರೆ!

‘ಐಪಿಎಲ್’, ನಾಲ್ಕು ರಾಜ್ಯಗಳ ಚುನಾವಣೆ, ಇತರೆ ಸಿನಿಮಾಗಳ ಬಿಡುಗಡೆ ಇನ್ನಿತರೆಗಳು ಇರುವ ಕಾರಣ ‘ಧುರಂಧರ್ 2’ ಸಿನಿಮಾದ ಗಳಿಕೆಯಲ್ಲಿ ತುಸು ಇಳಿಕೆ ಕಂಡು ಬಂದಿದೆ. ಮಂಗಳವಾರದಂದು ‘ಧುರಂಧರ್ 2’ ಸಿನಿಮಾ ಭಾರತದಲ್ಲಿ ಸುಮಾರು 7.5 ಕೋಟಿ ಗಳಿಕೆ ಮಾಡಿದೆ. ಕಳೆದ ಭಾನುವಾರ 14 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಇದೇ ವೇಗದಲ್ಲಿ ಮುಂದುವರೆದರೂ ಸಹ ಇನ್ನೊಂದು ವಾರದಲ್ಲಿ ವಿಶ್ವ ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ‘ಪುಷ್ಪ 2’ ಮತ್ತು ‘ಬಾಹುಬಲಿ 2’ ಸಿನಿಮಾದ ದಾಖಲೆ ಮುರಿಯುವುದು ಖಾತ್ರಿ.

‘ಧುರಂಧರ್ 2’ ಸಿನಿಮಾ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಭಾರತದ ಸೈನಿಕನೋರ್ವ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರನ್ನು ಮಟ್ಟ ಹಾಕುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *