‘ಧುರಂಧರ್ 2’ ಬಳಿಕ ಬರ್ತಿದೆ ಏಳೂವರೆ ಗಂಟೆ ಸಿನಿಮಾ; ಎರಡು ಇಂಟರ್​​ವಲ್

‘ಧುರಂಧರ್ 2’ ಬಳಿಕ ಬರ್ತಿದೆ ಏಳೂವರೆ ಗಂಟೆ ಸಿನಿಮಾ; ಎರಡು ಇಂಟರ್​​ವಲ್

‘ಧುರಂಧರ್’ (Dhurandhar) ಸಿನಿಮಾದ ಅವಧಿ 3 ಗಂಟೆ 34 ನಿಮಿಷ ಇತ್ತು. ಅದೇ ರೀತಿ, ‘ಧುರಂಧರ್ 2’ ಸಿನಿಮಾ 3 ಗಂಟೆ 49 ನಿಮಿಷ ಇತ್ತು. ಇಷ್ಟು ದೀರ್ಘ ಅವಧಿ ಇದ್ದರೂ ಸಿನಿಮಾ ಯಶಸ್ಸು ಕಂಡಿತ್ತು. ಇದಾದ ಬೆನ್ನಲ್ಲೇ ಏಳು ಗಂಟೆ 30 ನಿಮಿಷಗಳ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ! ಇದು ಅಚ್ಚರಿ ಎನಿಸಿದರೂ ನಿಜ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರ ವೈರಲ್ ಆಗಿದೆ.

ಈ ಮೊದಲು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರವನ್ನು ಕಂಬೈನ್ ಮಾಡಿ ಸಿನಿಮಾ ರಿಲೀಸ್ ಮಾಡಲಾಗಿತ್ತು. ಈ ಸಿನಿಮಾ ಗಮನ ಸೆಳೆದಿತ್ತು. ‘ಬಾಹುಬಲಿ’ ರಿಲೀಸ್ ಆಗಿ 10 ವರ್ಷಗಳ ಸಂಭ್ರಮದಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ಈ ಸಿನಿಮಾ ಹೊಸ ಅನುಭವ ನೀಡಿತ್ತು. ಈಗ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾ ಸೇರಿಸಿ ‘ಧುರಂಧರ್: ಡೈರೆಕ್ಟರ್ ಕಟ್’ ಎಂಬ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

ಪಾರ್ಥ ಚತುರ್ವೇದಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರ ಹಂಚಿಕೊಂಡಿದ್ದಾರೆ. ‘ಧುರಂಧರ್: ಡೈರೆಕ್ಟರ್ಸ್ ಕಟ್’ ಎಂದು ಬರೆಯಲಾಗಿದೆ. ಸಿನಿಮಾಗೆ ಎ ಪ್ರಮಾಣ ಪತ್ರ ನೀಡಿರುವುದನ್ನು ಉಲ್ಲೇಖಿಸಲಾಗಿದೆ. ಈ ಸಿನಿಮಾದ ಅವಧಿ 450 ನಿಮಿಷ ಎಂದು ಬರೆಯಲಾಗಿದೆ. ಅಂದರೆ, ಏಳು ಗಂಟೆ 30 ನಿಮಿಷ ಸಿನಿಮಾ ಇರಲಿದೆ.

ಈ ಸಿನಿಮಾ ಪ್ರೀಮಿಯಂ ಸ್ಕ್ರೀನ್​​ಗಳಾದ ಡಿಸಿ, ಐಮ್ಯಾಕ್ಸ್, ಎಚ್​​ಡಿಆರ್​ ಅಲ್ಲಿ ಮಾತ್ರ ಪ್ರದರ್ಶನ ಕಾಣಲಿದ್ದು, ಎರಡು ಇಂಟರ್​​ವಲ್​​ಗಳು ಇರಲಿವೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ

ಇಂದು (ಏಪ್ರಿಲ್ 1) ಮೂರ್ಖರ ದಿನ. ಹೀಗಾಗಿ, ಫೂಲ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಆ ರೀತಿ ಮೂರ್ಖರನ್ನಾಗಿ ಮಾಡುವ ಪ್ರಯತ್ನ ಕೂಡ ಇರಬಹುದು ಎಂದು ಹೇಳಲಾಗುತ್ತಿದೆ.ಈ ಬಗ್ಗೆ ಸಿನಿಮಾ ತಂಡದಿಂದ ಸ್ಪಷ್ಟನೆ ಸಿಗಬೇಕಿದೆ.

‘ಧುರಂಧರ್ 2’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಗಿದೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *