Headlines

‘ಧುರಂಧರ್ 2’ ವಿವಾದ ಸುಖಾಂತ್ಯ; ಆದಿತ್ಯ ಧರ್ ಬಳಿ ಕ್ಷಮೆ ಕೇಳಿದ ಸಂತೋಷ್ ಕುಮಾರ್  – Kannada News | Dhurandhar Copyright Row Settles: Aditya Dhar Wins as Santosh Kumar Apologizes

ಬಾಲಿವುಡ್‌ನ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರ ‘ಧುರಂಧರ್: ದಿ ರಿವೇಂಜ್’ ಸಿನಿಮಾ ಸಾಕಷ್ಟು ಮೆಚ್ಚುಗೆ ಪಡೆದಿದೆ. ಈ ಚಿತ್ರವನ್ನು ನೋಡಿ ಅನೇಕರು ಹೊಗಳಿದ್ದಾರೆ. ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಮಾಯಿ ಕೂಡ ಮಾಡಿದೆ. ಇದರ ಜೊತೆಗೆ ಸಿನಿಮಾ ಸುತ್ತ ಕಾನೂನು ಸಂಘರ್ಷ ಎದುರಾಗಿತ್ತು. ಸದ್ಯ ಇದಕ್ಕೆ ತೆರೆ ಬಿದ್ದಿದೆ. ಆದಿತ್ಯ ಧರ್ ವಿರುದ್ಧ ಕೃತಿ ಚೌರ್ಯದ ಆರೋಪ ಮಾಡಿದ್ದ ಸಂತೋಷ್ ಕುಮಾರ್ ಅವರು ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಆ ಬಳಿಕ ಬಾಂಬೆ ಹೈಕೋರ್ಟ್ ಈ ಪ್ರಕರಣವನ್ನು ಕೈಬಿಟ್ಟಿದೆ.

1.‘ಧುರಂಧರ್ 2’ ರಿವೇಂಜ್ ವಿವಾದಕ್ಕೆ ತೆರೆ

2. ಆದಿತ್ಯ ಧರ್ ಬಳಿ ಕ್ಷಮೆ ಕೇಳಿದ ಸಂತೋಷ್ ಕುಮಾರ್

3. ಸಂತೋಷ್ ಬಳಿ ಇದೆ ಇನ್ನೊಂದು ಆಯ್ಕೆ 

2026ರ ಮಾರ್ಚ್ ತಿಂಗಳಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಕುಮಾರ್ ಅವರು ಆದಿತ್ಯ ಧರ್ ಮೇಲೆ ಗಂಭೀರ ಆರೋಪ ಮಾಡಿದ್ದರು. ತಾವು 2023ರಲ್ಲಿ ಚಿತ್ರಕಥೆ ಬರಹಗಾರರ ಸಂಘದಲ್ಲಿ (SWA) ನೋಂದಾಯಿಸಿದ್ದ ‘ಡಿ-ಸಾಹೇಬ್’ ಚಿತ್ರಕಥೆಯನ್ನು ಕದ್ದು ಆದಿತ್ಯ ಧರ್ ‘ಧುರಂಧರ್’ ಸಿನಿಮಾ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆಯಿಂದ ತಮ್ಮ ವೃತ್ತಿಜೀವನಕ್ಕೆ ಮತ್ತು ಗೌರವಕ್ಕೆ ಧಕ್ಕೆ ಬಂದಿದೆ ಎಂದು ಆದಿತ್ಯ ಧರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರಿದ್ದ ಏಕಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸಂತೋಷ್ ಕುಮಾರ್ ಅವರು ಮಾರ್ಚ್ 30ರಂದು ತಾವು ನೀಡಿದ್ದ ಹೇಳಿಕೆಗಳ ಬಗ್ಗೆ ನ್ಯಾಯಾಲಯದಲ್ಲಿ ಲಿಖಿತವಾಗಿ ಕ್ಷಮೆ ಕೇಳಿದರು. ಈ ಕ್ಷಮೆಯನ್ನು ಸ್ವೀಕರಿಸಿದ ಆದಿತ್ಯ ಧರ್ ಅವರ ಪರ ವಕೀಲರು, ನಮಗೆ ಪರಿಹಾರದ ನಿರೀಕ್ಷೆಯಾಗಲಿ ಅಥವಾ ಪ್ರಕರಣ ಮುಂದುವರಿಸುವ ಆಸಕ್ತಿಯಾಗಲಿ ಇಲ್ಲ ಎಂದು ತಿಳಿಸಿದರು. ಎರಡೂ ಕಡೆಯವರು ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಮಾನನಷ್ಟ ಮೊಕದ್ದಮೆ ಮುಕ್ತಾಯಗೊಂಡಿದ್ದರೂ, ಕಥೆಯ ಹಕ್ಕುಸ್ವಾಮ್ಯದ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲು ಸಂತೋಷ್ ಕುಮಾರ್ ಅವರಿಗೆ ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂದರೆ, ಕಥೆ ಯಾರಿಗೆ ಸೇರಿದ್ದು ಎಂಬ ಬಗ್ಗೆ ಅವರು ಸ್ವತಂತ್ರವಾಗಿ ದೂರು ದಾಖಲಿಸಬಹುದಾಗಿದೆ. ಆರಂಭದಲ್ಲಿ ಕ್ಷಮೆ ಕೇಳಲು ಹಿಂದೇಟು ಹಾಕಿದ್ದ ಸಂತೋಷ್ ಕುಮಾರ್, ಕೊನೆಗೆ ಕ್ಷಮೆ ಕೇಳಿ ವಿವಾದಕ್ಕೆ ಅಂತ್ಯ ಹಾಡಿದರು. ಕಥೆಯ ಹಕ್ಕು ಸ್ವಾಮ್ಯದಲ್ಲಿ ಅವರು ಕೇಸ್ ಹಾಕುತ್ತಾರಾ ನೋಡಬೇಕಿದೆ.

Source link

Leave a Reply

Your email address will not be published. Required fields are marked *