ಬಾಗಲಕೋಟೆ, (ಜುಲೈ 24): ಬಾಗಲಕೋಟೆಯಲ್ಲಿ (Bagalkot) ಸರ್ಕಾರಿ ಕಚೇರಿಗಳಿಗೆ ಉಪ ಲೋಕಾಯುಕ್ತರಾದ ಬಿ.ವೀರಪ್ಪ (B Veerappa) ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಚೇರಿಗಳ ಕಾರ್ಯವೈಖರಿ ಬಗ್ಗೆ ಸಿಡಿಮಿಡಿಗೊಂಡರು. ಅಲ್ಲದೇ ನಗರಸಭೆ ಆಯುಕ್ತರ ಚೇಂಬರ್ ಮುಂದೆ ‘ಸಾರ್ವಜನಿಕರಿಗೆ ಪ್ರವೇಶವಿಲ್ಲ’ ಎಂದು ಹಾಕಲಾಗಿದ್ದ ಬೋರ್ಡ್ ನೋಡಿ ಶಾಕ್ ಆಗಿದ್ದಾರೆ. ಸರ್ಕಾರಿ ಕಚೇರಿಗೆ ಸಾರ್ವಜನಿಕರ ಬದಲು ಇನ್ಯಾರು ಹೋಗಬೇಕು? ಇದು ಶಾಕಿಂಗ್, 17 ಜಿಲ್ಲೆಗಳಲ್ಲಿ ಮೊದಲ ಬಾರಿ ನೋಡುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿ ಕಾರ್ಯವೈಖರಿ ಪರಿಶೀಲನೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಲೋಕಾಯುಕ್ತ ಬಿ.ವೀರಪ್ಪ, ನಗರಸಭೆ ಆಯುಕ್ತರ ಚೇಂಬರ್ಗೆ ‘ಸಾರ್ವಜನಿಕರಿಗೆ ಪ್ರವೇಶವಿಲ್ಲ’ ಎಂದು ಬೋರ್ಡ್ ಹಾಕಿದ್ದಾರೆ. ಸರ್ಕಾರಿ ಕಚೇರಿಗೆ ಸಾರ್ವಜನಿಕರ ಬದಲು ಇನ್ಯಾರು ಹೋಗಬೇಕು? ಇದು ಶಾಕಿಂಗ್, 17 ಜಿಲ್ಲೆಗಳಲ್ಲಿ ಮೊದಲ ಬಾರಿ ನೋಡುತ್ತಿದ್ದೇನೆ. ಬಾಗಲಕೋಟೆ ನಗರಸಭೆ ಅಧಿಕಾರಿಗಳ ಅಸಹಕಾರ ಇದೆ. 4 ಜನ ಇಂಜಿನಿಯರ್ಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ನೋಡಿ: ಸಿಲಿಂಡರ್ ಹೊರಗಿಡಿ, ತಾಜಾ ಎಣ್ಣೆ ಬಳಸಿ: ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
ಅತಿಕ್ರಮಣ ಬಗ್ಗೆ ನೋಟಿಸ್ ಕೊಟ್ಟಿದ್ದಾರೆ. 2-3 ವರ್ಷ ಆದರೂ ಯಾವುದೇ ಕ್ರಮ ಆಗಿಲ್ಲ. ಬರೀ ನೋಟಿಸ್ ಕೊಟ್ಟು ಕ್ರಮ ಕೈಗೊಳ್ಳದಿದ್ದರೆ ಏನು ಪ್ರಯೋಜನ? ಅತಿಕ್ರಮಣ, ಲೈಸೆನ್ಸ್ ಉಲ್ಲಂಘನೆ ಎಷ್ಟು ಆಗಿದೆ ಹಾಗೂ ಎಷ್ಟು ಅತಿಕ್ರಮಣ ಆಗಿದೆ ಎಂಬ ಬಗ್ಗೆ ಸಂಪೂರ್ಣ ವರದಿ ಕೇಳಿದ್ದೇನೆ. ಡ್ಯೂಟಿ ಸರಿಯಾಗಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ನಗರಸಭೆ ಕಮಿಷನರ್ ನಾವು ಬರೋದು ಗೊತ್ತಾಗಿ ರಜೆ ಹೋಗಿದ್ದಾರೆ. ನಗರಸಭೆ ಹಾಗೂ BTDA ಮಧ್ಯೆ ಯಾವುದೇ ಹೊಂದಾಣಿಕೆ ಇಲ್ಲ. 2 ಕಡೆ ಪರಿಶೀಲನೆ ನಡೆಸಿ ಕೇಸ್ ರಿಜಿಸ್ಟರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.