Headlines

ನಟಿಯ ಕೈಯಲ್ಲಿ ವಿವಿಐಪಿ ಐಪಿಎಲ್ ಟಿಕೆಟ್, ಎಲ್ಲರ ಕಣ್ಣು ಸಿಎಂ ಮೇಲೆ – Kannada News | Kushita Kallapu Post IPL ticket photos raised questions Around Revanth Reddy

ಐಪಿಎಲ್ (IPL) ಸೀಸನ್ ಚಾಲ್ತಿಯಲ್ಲಿದೆ. ಕೋಟ್ಯಂತರ ಮಂದಿ ಟಿವಿಗಳಲ್ಲಿ ಪಂದ್ಯಗಳನ್ನು ನೋಡುತ್ತಿದ್ದಾರೆ. ಕ್ರೀಡಾಂಗಣಕ್ಕೆ ಹೋಗಿ ಪಂದ್ಯ ನೋಡಲಂತೂ ನೂಕು-ನುಗ್ಗಲಿದೆ. ಟಿಕೆಟ್​​ಗಳೇ ಸಿಗುತ್ತಿಲ್ಲ. ಸಿಕ್ಕರು ಬ್ಲಾಕ್​​ನಲ್ಲಿ ಒಂದಕ್ಕೆ ಹತ್ತರಷ್ಟು ಬೆಲೆ. ಆದರೆ ಇದೀಗ ನಟಿ, ಇನ್​​ಸ್ಟಾಗ್ರಾಂ ಇನ್​ಫ್ಲ್ಯುಯೆನ್ಸರ್ ಒಬ್ಬರು ತಮಗೆ ಸಿಕ್ಕಿದ್ದ ಐಪಿಎಲ್ ಟಿಕೆಟ್​​ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ದೊಡ್ಡ ಸುದ್ದಿಯಾಗಿದೆ. ಏಕೆಂದರೆ ನಟಿ ಹಂಚಿಕೊಂಡಿದ್ದಿದ್ದು ವಿವಿಐಪಿ ಟಿಕೆಟ್ ಅದೂ ಮಾರಾಟದ ಟಿಕೆಟ್ ಅಲ್ಲ ಬದಲಿಗೆ ಕಾಯ್ದಿರಿಸಿದ ಟಿಕೆಟ್. ಟಿಕೆಟ್​​ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಎಲ್ಲರ ಕಣ್ಣು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮೇಲೆ ಬಿದ್ದಿದೆ.

ತೆಲಂಗಾಣದಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕುಶಿತಾ ಕಲ್ಲಪು ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಟಿಕೆಟ್​​ನ ಚಿತ್ರಗಳನ್ನು ಹಂಚಿಕೊಂಡಿದ್ದರು. ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ಟಿಕೆಟ್​​ಗಳವು. ಆದರೆ ಅವು ಸಾಮಾನ್ಯ ಟಿಕೆಟ್ ಆಗಿರಲಿಲ್ಲ ವಿವಿಐಪಿ ಪಾಸ್‌ಗಳಾಗಿದ್ದವು. ಸೂಕ್ಷ್ಮವಾಗಿ ಗಮನಿಸಿದರೆ ಆ ಟಿಕೆಟ್​​ಗಳು ಸರ್ಕಾರದ ಉನ್ನತ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮೀಸಲಿಟ್ಟಿದ್ದ ಟಿಕೆಟ್​ಗಳಾಗಿದ್ದವು.

ಸೋಷಿಯಲ್ ಮೀಡಿಯಾ ಬಳಕೆದಾರರು ಆ ಪಾಸ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವು ಮುಖ್ಯಮಂತ್ರಿಗಳ ಕಚೇರಿ ಅಥವಾ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ‘ಕಾಂಪ್ಲಿಮೆಂಟರಿ’ ಕೋಟಾದ ಪಾಸ್‌ಗಳು ಎಂಬುದು ಬೆಳಕಿಗೆ ಬಂದಿದೆ. ಇದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಕಚೇರಿಯಿಂದಲೇ ಕುಶಿತಾಗೆ ತಲುಪಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳು ಟಿಕೆಟ್‌ಗಾಗಿ ಗಂಟೆಗಟ್ಟಲೆ ಕ್ಯೂ ನಿಂತು ಅಥವಾ ಆನ್‌ಲೈನ್‌ನಲ್ಲಿ ಪರದಾಡುತ್ತಿರುವಾಗ, ಇನ್‌ಫ್ಲುಯೆನ್ಸರ್‌ಗಳಿಗೆ ಇಂತಹ ಪ್ರೀಮಿಯಂ ಪಾಸ್‌ಗಳು ಸುಲಭವಾಗಿ ಸಿಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು. ಇದು ‘ವಿಐಪಿ ಸಂಸ್ಕೃತಿ’ಯ ದುರುಪಯೋಗ ಎಂದು ಟೀಕಿಸಲಾಗುತ್ತಿದೆ.

ಇದನ್ನೂ ಓದಿ:IPL Black Ticket: ಐಪಿಎಲ್ ಬ್ಲ್ಯಾಕ್ ಟಿಕೆಟ್ ಮಾರಾಟ ದಂಧೆ, ಡಿಎನ್‌ಎ ಸಂಸ್ಥೆಗೆ ಸಿಸಿಬಿ ಶಾಕ್!

ಕರ್ನಾಟಕ ರಾಜಕೀಯದಲ್ಲೂ ಸಹ ಐಪಿಎಲ್ ಟಿಕೆಟ್ ವಿಚಾರ ಸದ್ದು ಮಾಡಿತು. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರವು ಸ್ಟೇಡಿಯಂಗೆ ನೀರು, ವಿದ್ಯುತ್ ಮತ್ತು ಭದ್ರತೆ ನೀಡುತ್ತದೆ, ಆದರೆ ಕೆಎಸ್‌ಸಿಎ ಶಾಸಕರಿಗೆ ಗೌರವ ನೀಡುತ್ತಿಲ್ಲ ಮತ್ತು ಟಿಕೆಟ್‌ಗಳನ್ನು ಬ್ಲ್ಯಾಕ್‌ನಲ್ಲಿ ಮಾರಾಟ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು. ಈ ವಿಷಯ ಗಂಭೀರ ಸ್ವರೂಪ ಪಡೆದ ನಂತರ, ಸ್ಪೀಕರ್ ಯು.ಟಿ. ಖಾದರ್ ಅವರ ಸೂಚನೆಯಂತೆ ಕೆಎಸ್‌ಸಿಎ ಶಾಸಕರಿಗೆ ಟಿಕೆಟ್ ನೀಡಲು ಒಪ್ಪಿಕೊಂಡಿತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯಕ್ಕೆ ಪ್ರತಿಯೊಬ್ಬ ಶಾಸಕರಿಗೆ (MLA/MLC) ತಲಾ 3 ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಅಂತರಾಷ್ಟ್ರೀಯ ಪಂದ್ಯಗಳಿಗಾದರೆ 2 ಉಚಿತ ಟಿಕೆಟ್ ಮತ್ತು 2 ಟಿಕೆಟ್‌ಗಳನ್ನು ಖರೀದಿಸುವ ಅವಕಾಶ ನೀಡಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *