Headlines

‘ನನಗೂ ಪರಚಿದ ಕಲೆ ಇದೆ, ಆದರೆ ಪಿಆರ್ ಟೀಮ್ ಇಲ್ಲ’; ಅಶ್ವಿನಿಗೆ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ – Kannada News | Bigg Boss Kannada: Ashwini Gowda and Chaitra Kundapura’s Post Show Brawl Over Scratches

ಬಿಗ್ ಬಾಸ್ (Bigg Boss) ಆಟ ಪೂರ್ಣಗೊಂಡ ಬಳಿಕವೂ ಅದರ ಬಗ್ಗೆ ಚರ್ಚೆಗಳು ಇದ್ದೇ ಇರುತ್ತವೆ. ದೊಡ್ಮನೆ ಒಳಗೆ ನಡೆದ ವಿಷಯ ಹೊರಗೂ ಚರ್ಚೆ ಆಗುತ್ತದೆ. ಈ ಬಾರಿ ಸೀಸನ್​ ಅಲ್ಲಿ ಅದು ಕೊಂಚ ಹೆಚ್ಚೇ ಇದೆ ಎನ್ನಬಹುದು. ಚೈತ್ರಾ ಕುಂದಾಪುರ ಹಾಗೂ ಅಶ್ವಿನಿ ಗೌಡ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಆಗಿತ್ತು. ಈ ಕಿರಿಕ್ ಹೊರ ಬಂದಮೇಲೂ ಮುಂದುವರಿದಿದೆ. ಪರಸ್ಪರ ಮಾತಿನ ಕಿತ್ತಾಟ ನಡೆದಿದೆ.

ಮಾಧ್ಯದಮವರ ಬಳಿ ಮಾತನಾಡುವಾಗ ಅಶ್ವಿನಿ ಗೌಡ ಅವರು ಚೈತ್ರಾ ಕುಂದಾಪುರ ಮೇಲೆ ನೇರವಾಗಿ ಆರೋಪ ಮಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಗಾಯಗಳಾಗಿವೆ. ಚೈತ್ರಾ ಕುಂದಾಪುರ ಅವರು ನನಗೆ ಪರಚಿದ್ದರು’ ಎಂದು ಅಶ್ವಿನಿ ಗೌಡ ಆರೋಪ ಮಾಡಿದ್ದರು. ಅಲ್ಲದೆ ಕೈಗೆ ಆದ ಗಾಯಗಳನ್ನು ಮಾಧ್ಯಮಗಳಿಗೆ ತೋರಿಸಿದ್ದರು. ಇದಕ್ಕೆ ಚೈತ್ರಾ ಅವರು ತಡವಾಗಿ ಉತ್ತರ ನೀಡಿದ್ದಾರೆ.

‘ನನಗೂ ಪರಚಿದ ಕಲೆಗಲಿವೆ. ಆದರೆ ಕ್ಷಮಿಸಿ ನನ್ನ ಬಳಿ ಪಿ.ಆರ್ ಟೀಮ್ ಇಲ್ಲ. ನನಗೂ ನೋವು, ಕಲೆಗಳಿದೆ. ಆದರೆ ನನಗೆ ಆಟವನ್ನು ಆಟವಾಗಿಯೇ ನೋಡುವ ಮನಸ್ಥಿತಿ ಇದೆ’ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಬಿಗ್ ಬಾಸ್ ಟಾಸ್ಕ್ ಮುಗಿದ ಬಳಿಕ ಪರಸ್ಪರ ಕ್ಷಮೆ ಕೇಳಿ ಪ್ರಕರಣವನ್ನು ಅಶ್ವಿನಿ-ಚೈತ್ರಾ ಅಲ್ಲಿಯೇ ಮುಗಿಸಿದ್ದರು. ಆದರೆ, ಹೊರ ಬಂದ ಬಳಿಕ ಅಶ್ವಿನಿ ಗೌಡ ಈ ವಿಷಯವನ್ನು ಮತ್ತೆ ತೆಗೆದಿದ್ದಾರೆ.

ಟಾಸ್ಕ್ ವೇಳೆ ಅನೇಕರಿಗೆ ಗಾಯಗಳಾಗುತ್ತವೆ. ಅದನ್ನು ಎಲ್ಲರೂ ಅಲ್ಲಿಗೇ ಬಿಡುತ್ತಾರೆ. ಆದರೆ, ಕೆಲವರು ಅದನ್ನು ಹೊರಕ್ಕೂ ತೆಗೆದುಕೊಂಡು ಹೋಗುತ್ತಾರೆ. ಈಗ ಆ ಕೆಲಸವನ್ನು ಅಶ್ವಿನಿ ಮಾಡಿದ್ದಾರೆ. ಈ ಕಾರಣಕ್ಕೆ ಚೈತ್ರಾ ಕುಂದಾಪುರ ಅವರು ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಗೌಡ ಸಿಕ್ಕಿದ್ರಾ? ಗಿಲ್ಲಿ ಉತ್ತರ ಏನು?

ಇನ್ನು ಗಿಲ್ಲಿ ಬಗ್ಗೆ ಅಶ್ವಿನಿ ಗೌಡ ಅವರು ಗಂಭೀರ ಆರೋಪ ಮಾಡಿದ್ದರು. ‘ಗಿಲ್ಲಿ ಬಡವ ಎಂದು ಬಿಂಬಿಸಿಕೊಂಡಿದ್ದಾನೆ. ಆತ ನಿಜವಾಗಲೂ ಬಡವನಾ’ ಎಂದು ಅವರು ಪ್ರಶ್ನೆ ಮಾಡಿದ್ದರು. ಈ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *