ವಾಷಿಂಗ್ಟನ್, ಜೂನ್ 20: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ಮತ್ತೊಮ್ಮೆ ಲೇವಡಿ ಮಾಡಿದ್ದಾರೆ. ಇತ್ತೀಚೆಗೆ ನಡೆದ ಜಿ7 ಶೃಂಗಸಭೆಯಲ್ಲಿ ಮೆಲೋನಿ ಅವರು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತೆ ಮತ್ತೆ ನನ್ನ ಬೆನ್ನ ಹಿಂದೆ ಬಿದ್ದಿದ್ದರು ಎಂದು ಟ್ರಂಪ್ ಹಳೆಯ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, “ಮೆಲೋನಿ ನನ್ನೊಂದಿಗೆ ಮತ್ತೆ ಸ್ನೇಹ ಬೆಳೆಸಲು ಹಂಬಲಿಸುತ್ತಿದ್ದಾರೆ” ಎಂದೂ ಟ್ರಂಪ್ ಲೇವಡಿ ಮಾಡಿದ್ದಾರೆ.
ನಿನ್ನೆ ಕೂಡ ಟ್ರಂಪ್ ಇದೇ ಹೇಳಿಕೆ ನೀಡಿದ್ದರು. ಅದಕ್ಕೆ ಮೆಲೋನಿ ಕೂಡ ತಿರುಗೇಟು ನೀಡಿದ್ದರು. ಇಂದು ಮತ್ತೆ ಸಾರ್ವಜನಿಕ ರ‍್ಯಾಲಿಯೊಂದರಲ್ಲಿ ಮಾತನಾಡುತ್ತಾ ಅಂತಾರಾಷ್ಟ್ರೀಯ ನಾಯಕರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಹೇಳುವಾಗ ಟ್ರಂಪ್ ಇಟಲಿ ಪ್ರಧಾನಿಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
Italian Prime Minister Gigiorgia Meloni asked, over and over, for a picture with me during the G-7 meeting in France. She is doing poorly in Italy with her level of popularity, possibly because she turned down the United States of America, a Country that truly loves and protects… pic.twitter.com/58uCXdyMVc
— Commentary Donald J. Trump Truth Social Posts On X (@TrumpTruthOnX) June 20, 2026
“ಜಿ7 ಶೃಂಗಸಭೆಯ ಸಂದರ್ಭದಲ್ಲಿ ಜಾರ್ಜಿಯಾ ಮೆಲೋನಿ ಅವರು ನನ್ನ ಬಳಿ ಬಂದು ಫೋಟೋಗಾಗಿ ಪದೇ ಪದೇ ಕೇಳುತ್ತಿದ್ದರು. ರಾಜತಾಂತ್ರಿಕ ಶಿಷ್ಟಾಚಾರಗಳ ನಡುವೆಯೂ ಅವರು ನನ್ನೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ತೀವ್ರ ಆಸಕ್ತಿ ತೋರಿಸಿದ್ದರು. ಹಿಂದಿನ ಕೆಲವು ರಾಜಕೀಯ ಭಿನ್ನಾಭಿಪ್ರಾಯಗಳ ನಂತರ, ಈಗ ಮೆಲೋನಿ ನನ್ನೊಂದಿಗೆ ಮತ್ತೆ ಹಳೆಯ ಸ್ನೇಹವನ್ನು ಮುಂದುವರಿಸಲು ಬಯಸುತ್ತಿದ್ದಾರೆ ಎಂಬುದು ಅವರ ಈ ನಡವಳಿಕೆಯಿಂದ ಸ್ಪಷ್ಟವಾಗುತ್ತದೆ” ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿಕೊಂಡಿದ್ದರು; ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪ್ರಧಾನಿ
ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳಾ ನಾಯಕಿಯರಲ್ಲಿ ಒಬ್ಬರಾದ ಇಟಲಿ ಪ್ರಧಾನಿ ಮೆಲೋನಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿರುವುದು ರಾಜತಾಂತ್ರಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಟ್ರಂಪ್ ಅವರ ಈ ‘ಸೆಲ್ಫಿ’ ಆರೋಪ ಕೇವಲ ಅವರ ರಾಜಕೀಯ ಪ್ರಚಾರದ ಭಾಗವೋ ಅಥವಾ ನಿಜವಾಗಿಯೂ ಅಂತಹ ಘಟನೆ ನಡೆದಿದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ