Headlines

‘ನಮ್ಮಿಬ್ರನ್ನ ಊರಿಗೆ ಕರ್ಕೊಂಡು ಹೋಗಿ’: ಪೊಲೀಸರಿಗೆ ಕರೆ ಮಾಡಿ ದಂಪತಿ ಕಿರಿಕ್! ವೀಡಿಯೋ ವೈರಲ್ – Kannada News | Couple Calls 112 Emergency Help Number and Argues with Police for Drop Home

ಧಾರವಾಡ, ಜುಲೈ 10: ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಚಿಕಿತ್ಸೆ ಪಡೆಯಲು ಬಂದ ದಂಪತಿ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರೊಂದಿಗೇ ಕಿರಿಕ್ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ದಂಪತಿ, ಪತ್ನಿಯ ಬೆನ್ನು ನೋವಿನ ಹಿನ್ನೆಲೆ ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆದರೆ, ಚಿಕಿತ್ಸೆ ಮುಗಿದ ಬಳಿಕ ಹೊಸ ವರಸೆ ಆರಂಭಿಸಿದ ಪತಿ, ನಮಗೆ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ ಎಂದು ಆರೋಪಿಸಿ 112ಕ್ಕೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ತುರ್ತು ವಾಹನದ ಪೊಲೀಸ್ ಸಿಬ್ಬಂದಿ ಬಳಿ, ನಮ್ಮಿಬ್ಬರನ್ನೂ ನಮ್ಮ ಊರಿಗೆ ಕರೆದುಕೊಂಡು ಹೋಗಿ ಬಿಡಬೇಕು ಎಂದು ಹಠ ಹಿಡಿದು ಕಿರಿಕ್ ಮಾಡಿದ್ದಾನೆ.

ಅದಕ್ಕೆ ನಿಯಮಾವಳಿಗಳ ಪ್ರಕಾರ ಅವಕಾಶವಿಲ್ಲ ಎಂದು ಪೊಲೀಸರು ನಿರಾಕರಿಸಿದಾಗ, ದಂಪತಿ ಪೊಲೀಸರೊಂದಿಗೇ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಸದ್ಯ ಪೊಲೀಸರೊಂದಿಗೆ ವಾದ ನಡೆಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *