ಬೆಂಗಳೂರು, (ಜುಲೈ 24): ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ಪುತ್ರಿಯರಾದ ಅನುಸೂಯಾ ಹಾಗೂ ಶೈಲಾಜಾ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ತಾಯಿ ಚೆನ್ನಮ್ಮರ ಬಗ್ಗೆ ಕೆಲವೊಂದಿರಷ್ಟು ಸಂಗತಿಳಗನ್ನು ಬಿಚ್ಚಿಟ್ಟಿದ್ದಾರೆ. ಪುತ್ರ ಶೈಲಜಾ ಮಾತನಾಡಿ, ನಮ್ಮ ತಂದೆ ತಾಯಿ ಸಂಸಾರು ಶುರು ಮಾಡಿದ್ದೇ ಬಾಡಿಗೆ ಮನೆಯಿಂದ. ನಾನು ಹುಟ್ಟುವಾಗಲೇ ಅಪ್ಪ ಶಾಸಕರಾಗಿದ್ದರು. ಲೋಕೋಪಯೋಗಿ ಸಚಿವರಾಗಿದ್ದಾಗ ಸರ್ಕಾರಿ ನಿವಾಸ ಕೊಟ್ಟಿದ್ರು. ಬಾಡಿಗೆ ಮನೆಗೆ ಹೋಗ್ತೀವಿ ಅಂತ ಅಮ್ಮ ಅಪ್ಪ ಹೇಳಿದ್ರು. ಆಗ ಸಮೀಪದಲ್ಲೇ ಬಾಡಿಗೆ ಮನೆ ಹುಡುಕಲು ಹೋದ್ವಿ. ನಮ್ಮನ್ನ ನೋಡೋಕೆ ಹೋದಾಗ ಪ್ರಧಾನಮಂತ್ರಿ ಹೆಂಡ್ತಿ ಬಾಡಿಗೆಗೆ ಬರ್ತಾರಾ ಅಂತ ಪ್ರಶ್ನೆ ಮಾಡಿದ್ರು. ಮನೆ ಕೊಡೋಕೆ ಹಿಂದೆಮುಂದೆ ನೋಡಿದ್ರು. ರಾಜಕೀಯವಾಗಿ ಏನಾದ್ರೂ ಹೇಳ್ತಿದ್ದಾರಾ ಅಂತ ಅನುಮಾನದಿಂದ ನೋಡಿದ್ರು. ಅಗ್ರಿಮೆಂಟ್ ಹಾಕಿಸಿಕೊಳ್ತೀರಾ? ಅದು ಇದು ಅಂತ ಸಾಕಷ್ಟು ಪ್ರಶ್ನೆ ಮಾಡಿದ್ರು ಎಂದು ಹಿಂದಿನ ನೆನಪುಗಳನ್ನ ಮೆಲುಕು ಹಾಕಿದ್ದಾರೆ.
ಅಮ್ಮ ಬದುಕಿನಲ್ಲಿ ತಮಗಾಗಿ ಏನನ್ನೂ ಕೇಳಿಲ್ಲ. ಕೇಳಿದ್ದೇ ಒಂದು ಚಿಕ್ಕ ಮನೆ. ಹಕ್ಕಿ ಕೂಡ ತನಗಾಗಿ ಗೂಡು ಕಟ್ಟಿಕೊಳ್ಳುತ್ತೆ. ನನ್ನ ಆಸೆ ಸಣ್ಣದೊಂದು ಮನೆ, ಅದೊಂದನ್ನ ನೆರವೇರಿಸಿ ಕೊಡಿ ಅಂತ ತಾಯಿ ಕೇಳಿದ್ರು.ಆರು ಜನ ಮಕ್ಕಳು ಸೇರಿ ಬ್ಯಾಂಕ್ ನಲ್ಲಿಲೋನ್ ತೆಗೆದುಕೊಂಡು ಮನೆ ಕಟ್ಟಿದ್ವಿ. ಐದು ವರ್ಷ ಆ ಮನೆಯಲ್ಲಿ ಪುಟ್ಟ ಮಗು ರೀತಿ ಸಂಭ್ರಮದಿಂದ ವಾಸ ಮಾಡಿದ್ರು. ಆಮೇಲೆ ಇಲ್ಲಿಗೆ ವಾಪಸ್ ಕರೆದುಕೊಂಡು ಬಂದ್ರು. ನಮ್ಮ ಸಂಸ್ಕಾರ, ಸಂಸ್ಕೃತಿ ಅಂತ ಇದೆ. ಕುಟುಂಬಂದ ನೆಮ್ಮದಿ ಈಗ ಹಾಳು ಮಾಡಿಕೊಳ್ತಿದ್ದಾರೆ. ಆದ್ರೆ ತಾಯಿ ಕುಟುಂಬವನ್ನ ಹಿಡಿದಿಟ್ಟಿದ್ದರು. ತಾಯಿ ರಾಜಕೀಯದ ಬಗ್ಗೆ ಎಂದೂ ಮಾತಾಡಿಲ್ಲ. ಮಕ್ಕಳಿಗೆ ಶಿಕ್ಷಣ ಕೊಡಬೇಕು ಅಂತ ಆಸೆ ಇತ್ತು ಎಂದು ತಾಯಿ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ