ನಮ್ಮ ಮೆಟ್ರೋದ ಹಳದಿ ಮಾರ್ಗದ ರೈಲುಗಳ ಸಂಖ್ಯೆ ಹೆಚ್ಚಾಗಿದ್ದು, ಮತ್ತೊಂದು ಹೊಸ ಟ್ರೇನ್ ಬೆಂಗಳೂರು ತಲುಪಿದೆ. 14ನೇ ಡ್ರೈವರ್ ಲೆಸ್ ಟ್ರೈನ್ ಈಗಾಗಲೇ ಹೆಬ್ಬಗೋಡಿ ಡಿಪೋಗೆ ಬಂದಿದ್ದು, ಆರ್ ವಿ ರಸ್ತೆಯಿಂದ- ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗಕ್ಕೆ ಒಟ್ಟು 15 ಡ್ರೈವರ್ ಲೆಸ್ ರೈಲುಗಳನ್ನು ಆರ್ಡರ್ ನೀಡಲಾಗಿದೆ.