Headlines

ನಮ್ಮ ಸೋಲಿಗೆ ಇವರೇ ಕಾರಣ; ಹೀನಾಯ ಆಟದ ಬಳಿಕ ಹೇಳಿಕೆ ನೀಡಿದ ಪಾಂಡ್ಯ – Kannada News | Hardik Pandya on MI’s Record Loss to CSK: They Are the Reason for Our Defeat

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಸಿಎಸ್​​ಕೆ ವಿರುದ್ಧ 103 ರನ್​​ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಇದಾಗಿದೆ. ಸಿಎಸ್​ಕೆ ನೀಡಿದ 207 ರನ್​​ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಮುಂಬೈ ಅತ್ಯಂತ ಹೀನಾಯ ಪ್ರದರ್ಶನ ನೀಡಿತು. ಕೇವಲ 104 ರನ್​​ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಕ್ಯಾಪ್ಟನ್ ಪಾಂಡ್ಯ 1 ರನ್​​ಗೆ ಔಟ್ ಆದರು. ಪಂದ್ಯ ಮುಗಿದ ಬಳಿಕ ರವಿ ಶಾಸ್ತ್ರಿ ಜೊತೆ ಮಾತನಾಡಿದ ಪಾಂಡ್ಯ, ಮುಂಬೈ ತಂಡದ ಸೋಲಿಗೆ ಕಾರಣ ನೀಡಿದರು. ನಾಲ್ಕು ಪಂದ್ಯಗಳಲ್ಲಿ 2 ಶತಕ ಬಾರಿಸಿದ ಸಂಜು ಅವರನ್ನು ಹೊಗಳಿದರು.

‘ಪಿಚ್ ಬದಲಾಗಿದೆ ಎಂದು ನಾನು ಹೇಳುವುದಿಲ್ಲ. ನಾನು ಹಾಗೆ ಹೇಳಲು ಇಷ್ಟಪಡುವ ವ್ಯಕ್ತಿಯೂ ಅಲ್ಲ’ ಎಂದು ಪಾಂಡ್ಯ ಹೇಳಿದ್ದಾರೆ. ಕೆಲವರು ಸೋಲಿನ ಬಳಿಕ ‘ಪಿಚ್ ಸರಿ ಇರಲಿಲ್ಲ, ಪಿಚ್ ಬದಲಾಗಿತ್ತು’ ಎಂಬ ಕಾರಣವನ್ನು ನೀಡುತ್ತಾರೆ. ಈ ಕಾರಣದಿಂದ ಹಾರ್ದಿಕ್ ಈ ರೀತಿ ಹೇಳಿಕೆ ನೀಡಿದ್ದಾರೆ.

‘ಚೆನ್ನೈ ತಂಡದವರು ಚೆನ್ನಾಗಿ ಬ್ಯಾಟ್ ಮಾಡಿದರು. ಈ ಮೂಲಕ 207 ರನ್ ಗಳಿಸಿದರು. ಅವರು ರನ್ ಗಳಿಸಿದ್ದು ಇದೇ ಪಿಚ್​​ನಲ್ಲಿ, ಇದೇ ಮಣ್ಣಿನಲ್ಲಿ. ನಾವು ಆಡಿದ್ದು ಇದೇ ಮೈದಾನದಲ್ಲಿ. ನಾವು ಉತ್ತಮವಾಗಿ ಬ್ಯಾಟ್ ಮಾಡಬೇಕಿತ್ತು. ಸಂಜು ಅದ್ಭುತವಾಗಿ ಬ್ಯಾಟಿಂಗ್ ಆಡಿದರು. ಅವರು ಬ್ಯಾಟರ್​​ಗಳು ಬರೋದು ಹಾಗೂ ರನ್ ಪೇರಿಸುವ ಕೆಲಸ ಮಾಡಿದರು. ಈ ಮೂಲಕ ಒಳ್ಳೆಯ ಮೊತ್ತ ಕಲೆ ಹಾಕಿದರು’ ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.

‘ಈ ಪಿಚ್​​ನಲ್ಲಿ ಸಾಮಾನ್ಯವಾಗಿ ಬರುವ ರನ್​​ಗಿಂತ ಹೆಚ್ಚಿನ ರನ್ ಬಂದಿತ್ತು. ಇದನ್ನು ಚೇಸ್ ಮಾಡಲು ನಮಗೆ ಉತ್ತಮ ಪವರ್‌ಪ್ಲೇ ಅಗತ್ಯವಿತ್ತು. ಆವೇಗದಲ್ಲಿ ನಾವು ಆಡಬೇಕಿತ್ತು. ಆದರೆ ಹಾಗಾಗಲಿಲ್ಲ’ ಎಂದು ಪಾಂಡ್ಯ ಹೇಳಿದರು. ಸದ್ಯ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಬರೋಬ್ಬರಿ 103 ರನ್..! ಐಪಿಎಲ್ ಇತಿಹಾಸದಲ್ಲೇ ಅತಿ ಹೀನಾಯ ಸೋಲು ಕಂಡ ಮುಂಬೈ

ಸಂಜು ಸ್ಯಾಮ್ಸನ್ಸ್ ಕೇವಲ 54 ಬಾಲ್​​ಗಳಲ್ಲಿ 101 ರನ್ ಸಿಡಿಸಿದರು. ಇದರಲ್ಲಿ 6 ಸಿಕ್ಸ್, 10 ಫೋರ್ ಸೇರಿದೆ. ಈ ಮೊತ್ತ ತಂಡಕ್ಕೆ ಆಸರೆ ಆಯಿತು. ಉಳಿದ ಯಾವುದೇ ಸಿಎಸ್​​ಕೆ ಆಟಗಾರರು 25 ರನ್ ಗಡಿ ದಾಟಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *