Headlines

ನವೆಂಬರ್​ನಲ್ಲಿ ಅನಿರುದ್ಧ್ ಮತ್ತು ಕಾವ್ಯ ಮಾರನ್ ಮದುವೆ? ವಿವಾಹ ನಡೆಯೋದು ಯಾವ ದೇಶದಲ್ಲಿ? – Kannada News | Anirudh Ravichander and Kavya Maran Destination Wedding in Greece to Take Place in November

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudhdh Ravichandar) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡೆಯೆ ಕಾವ್ಯ ಮಾರನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ತಮಿಳು ಮಾಧ್ಯಮಗಳ ಪ್ರಕಾರ ಇವರಿಬ್ಬರ ಅದ್ದೂರಿ ಮದುವೆ ನವೆಂಬರ್ 10 ರಂದು ಗ್ರೀಸ್ ದೇಶದಲ್ಲಿ ನಡೆಯಲಿದೆ. ಅಭಿಮಾನಿಗಳು ಈ ಜೋಡಿಯ ಅಧಿಕೃತ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ವದಂತಿಗೆ ರೆಕ್ಕೆಪುಕ್ಕ ನೀಡಿದ ಸಂಬಂಧಿಯ ಹೇಳಿಕೆ:

ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ಹಿರಿಯ ನಟ ವೈ. ಜಿ. ಮಹೇಂದ್ರನ್ ಅವರು ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇಬ್ಬರ ಪ್ರೇಮ ಸಂಬಂಧದ ಬಗ್ಗೆ ಇಂಗಿತ ವ್ಯಕ್ತಪಡಿಸಿರುವ ಅವರು ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು ಸುಳಿವು ನೀಡಿದ್ದಾರೆ. ಇದರಿಂದಾಗಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಈ ಮದುವೆ ವದಂತಿಗೆ ಮತ್ತೆ ಜೀವ ಬಂದಂತಾಗಿದೆ.

ವರ್ಷದಿಂದ ಹರಿದಾಡುತ್ತಿರುವ ಮದುವೆ ಗಾಸಿಪ್:

ಅನಿರುದ್ಧ್ ಮತ್ತು ಕಾವ್ಯ ಮಾರನ್ ಪ್ರೀತಿಯಲ್ಲಿದ್ದಾರೆ ಎಂಬ ವರದಿಗಳು ಕಳೆದ ಒಂದು ವರ್ಷದಿಂದ ಹರಿದಾಡುತ್ತಿವೆ. ಈ ಹಿಂದೆ ಅನಿರುದ್ಧ್ ಈ ರೀತಿಯ ಸುದ್ದಿಗಳನ್ನು ನಿರಾಕರಿಸಿದ್ದರು. ಆದರೆ ಈಗ ಗ್ರೀಸ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆಯಲಿದೆ ಎಂಬ ಸುದ್ದಿ ಮತ್ತೆ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇಬ್ಬರ ಕಡೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.

ಇದನ್ನೂ ಓದಿ: ಈ ವರ್ಷವೇ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್ ಮದುವೆ? ಜೋರಾಗಿದೆ ಗಾಸಿಪ್

ಸ್ಟಾರ್ ಸೆಲೆಬ್ರಿಟಿಗಳ ಈ ಜೋಡಿಗೆ ಅಭಿಮಾನಿಗಳ ಕಾಯುವಿಕೆ:

ಕಾವ್ಯ ಮಾರನ್ ಐಪಿಎಲ್ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಅವರು ಸನ್ ಟಿವಿ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿಯಾಗಿದ್ದಾರೆ. ಇತ್ತ ಅನಿರುದ್ಧ್ ಕೂಡ ಭಾರತೀಯ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಸಂಗೀತ ನೀಡುತ್ತಿದ್ದಾರೆ. ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸಿನ ತುದಿಯಲ್ಲಿದ್ದು ಈ ಹೈಪ್ರೊಫೈಲ್ ಮದುವೆ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *