Headlines

‘ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ’; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್ ಶೆಟ್ಟಿ – Kannada News | Rishab Shetty Shares Emotional Video of Traditional Puja and Yakshagana at His Home

‘ಕಾಂತಾರ’ ಚಿತ್ರದ ಮೂಲಕ ಕರಾವಳಿಯ ದೈವಾರಾಧನೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ನಡೆದ ಧಾರ್ಮಿಕ ಆಚರಣೆಗಳ ಸುಂದರ ಕ್ಷಣಗಳನ್ನು ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

‘ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ ನಮ್ಮ ಮನೆಯಲ್ಲಿ ನಡೆದಾಗ ಮನ ತುಂಬಿದ ಕ್ಷಣಗಳು’ ಎಂದು ರಿಷಬ್ ಶೆಟ್ಟಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರ ಇಡೀ ಕುಟುಂಬ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಜೊತೆಯಾಗಿ ಪೂಜೆ ಸಲ್ಲಿಸಿದ್ದಾರೆ.

ವಿಡಿಯೋದ ಮತ್ತೊಂದು ವಿಶೇಷವೆಂದರೆ ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ. ರಿಷಬ್ ಶೆಟ್ಟಿ ಅವರ ಮನೆಯ ಆವರಣದಲ್ಲಿ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಲಾವಿದರು ಬಣ್ಣ ಹಚ್ಚಿಕೊಳ್ಳುವ ದೃಶ್ಯದಿಂದ ಹಿಡಿದು, ಅದ್ಭುತ ರಂಗಪ್ರದರ್ಶನದವರೆಗಿನ ದೃಶ್ಯಗಳು ವಿಡಿಯೋದಲ್ಲಿವೆ. ರಿಷಬ್ ಶೆಟ್ಟಿ ಹಾಗೂ ಅವರ ಕುಟುಂಬಸ್ಥರು ಮುಂಭಾಗದಲ್ಲಿ ಕುಳಿತು ಈ ಕಲಾ ವೈಭವವನ್ನು ಕಣ್ಣುಂಬಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Leave a Reply

Your email address will not be published. Required fields are marked *