
ನಟಿ ಶ್ರುತಿ ಹರಿಹರನ್ (Sruthi Hariharan) ಅವರು ಸಿನಿಮಾಗಳ ಆಯ್ಕೆಯಲ್ಲಿ ಬಹಳ ಚ್ಯೂಸಿ. ವಯಸ್ಸು ಆಗುತ್ತಿದ್ದಂತೆಯೇ ಇನ್ನೂ ಉತ್ತಮವಾದ ಪಾತ್ರಗಳು ಸಿಗುತ್ತಿವೆ ಎಂಬ ಖುಷಿ ಅವರಿಗೆ ಇದೆ. ‘ಲೈಫ್ ಚೆನ್ನಾಗಿ ನಡೆಯುತ್ತಿದೆ. ಇನ್ನೊಂದು ಬಿಸ್ನೆಸ್ ಕೂಡ ಶುರು ಮಾಡಿದ್ದೇನೆ. ಮನೆ, ಮಗು, ಸಿನಿಮಾ ಜೊತೆ ಬ್ಯುಸಿ ಆಗಿದ್ದೇನೆ. ಎನ್ಹೆಚ್ 66 ಸಿನಿಮಾ ಕೂಡ ನನಗೆ ಚಾಲೆಂಜಿಂಗ್ ಆಗಿದೆ. 15 ವರ್ಷಗಳಲ್ಲಿ ಅಂದಾಜು 40 ಪಾತ್ರ ಮಾಡಿರುತ್ತೇನೆ. ಆದರೆ ಅವುಗಳಿಗಿಂತ ಡಿಫರೆಂಟ್ ಆಗಿರುವ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. ಪ್ರತಿ ಬಾರಿ ಈ ರೀತಿಯ ಚಾಲೆಂಜಿಂಗ್ ಪಾತ್ರ ಸಿಕ್ಕಾಗ ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡಬೇಕು ಎಂಬ ಪ್ಯಾಷನ್ನೊಂದಿಗೆ ನಾನು ಕೆಲಸ ಶುರು ಮಾಡುತ್ತೇನೆ. ನಾನು ಕಲಾವಿದೆ. ಸ್ಟಾರ್ ಅಲ್ಲ. ಕಲಾವಿದರಿಗೆ ಸಾವಿಲ್ಲ. ಪಾತ್ರಗಳು ಬರುತ್ತಾ ಇರುತ್ತವೆ’ ಎಂದು ಶ್ರುತಿ ಹರಿಹರನ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.