Headlines

ನಿಂತು ಹೋಯ್ತೆ ‘ದೇವರ 2’, ಜೂ ಎನ್​​ಟಿಆರ್​​ಗೆ ಕೈ ಕೊಟ್ಟರೇ ಕೊರಟಾಲ ಶಿವ – Kannada News | Koratala Shiva announce movie with Nandamuri Balakrishna what about Devara 2

ಜೂ ಎನ್​ಟಿಆರ್ (Jr NTR) ಪ್ರಸ್ತುತ ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ಸಿನಿಮಾನಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾದ ಚಿತ್ರೀಕರಣ ಶುರುವಾಗಿ ಈಗಾಗಲೇ ಒಂದು ವರ್ಷ ಆಗಿದ್ದು, ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ ಎನ್ನಲಾಗುತ್ತಿದೆ. ಜೂ ಎನ್​​ಟಿಆರ್ ಅವರ ಈ ಹಿಂದಿನ ಸಿನಿಮಾ ‘ದೇವರ’. ಆ ಸಿನಿಮಾದ ಬಗ್ಗೆ ಆರಂಭದಲ್ಲಿ ನೆಗೆಟಿವ್ ವಿಮರ್ಶೆಗಳು ಬಂದರೂ ಸಹ ಜೂ ಎನ್​​ಟಿಆರ್ ಅಭಿಮಾನಿಗಳು ಸಿನಿಮಾವನ್ನು ಹಿಟ್ ಮಾಡಿಸುವಲ್ಲಿ ಸಫಲರಾಗಿದ್ದರು. ಸಿನಿಮಾದ ಎರಡನೇ ಭಾಗಕ್ಕಾಗಿ ಜೂ ಎನ್​​ಟಿಆರ್ ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ ಆ ಸಿನಿಮಾ ನಿರ್ದೇಶಿಸಿದ್ದ ಕೊರಟಾಲ ಶಿವ ಇದೀಗ ಹೊಸ ಪ್ರಾಜೆಕ್ಟ್​​ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‘ದೇವರ’ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದ ಕಾರಣ, ‘ದೇವರ 2’ ಬರುವುದಿಲ್ಲವೇನೋ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಈ ಹಿಂದೆ ಜೂ ಎನ್​ಟಿಆರ್ ಮತ್ತು ಅವರ ಸಹೋದರ ಹಾಗೂ ‘ದೇವರ’ ಸಿನಿಮಾದ ಸಹ ನಿರ್ಮಾಪಕರೂ ಆಗಿರುವ ಕಲ್ಯಾಣ್ ರಾಮ್, ‘ದೇವರ 2’ ಖಂಡಿತ ಬರುತ್ತದೆ ಎಂದಿದ್ದರು. ಆದರೆ ಈಗ ಕೊರಟಾಲ ಶಿವ ಬೇರೆ ಸಿನಿಮಾನಲ್ಲಿ ತೊಡಗಿಕೊಂಡಿರುವುದು ಗಮನಿಸಿದರೆ ‘ದೇವರ 2’ ಬರುವುದು ಅನುಮಾನ ಎಂಬಂತಾಗಿದೆ.

ಕೊರಟಾಲ ಶಿವ, ಜೂ ಎನ್​​ಟಿಆರ್ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾಕ್ಕೆ ಯಾವುದೇ ಹೆಸರಿಟ್ಟಿಲ್ಲವಾದರೂ, ಬಾಲಕೃಷ್ಣ ಮತ್ತು ಕೊರಟಾಲ ಶಿವ ಒಟ್ಟಿಗೆ ಇರುವ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಪೋಸ್ಟರ್​​ನಲ್ಲಿ ‘ಪವರ್ ಮೀಟ್ಸ್ ಪರ್ಪಸ್’ ಮತ್ತು ‘ಮಾಸ್ ಬಿಕೇಮ್ ಮೂಮೆಂಟ್’ ಎಂಬ ಪವರ್​​ಫುಲ್ ಸಾಲುಗಳನ್ನು ಬರೆಯಲಾಗಿದೆ. ಇದು ನಂದಮೂರಿ ಬಾಲಕೃಷ್ಣ ಅವರ 112 ನೇ ಸಿನಿಮಾ ಆಗಿರಲಿದೆ.

ಇದನ್ನೂ ಓದಿ:ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್

ಬಾಲಕೃಷ್ಣ ಪ್ರಸ್ತುತ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಪೂರ್ಣವಾಗುವ ಮುಂಚೆಯೇ ಹೊಸ ಸಿನಿಮಾವನ್ನು ಬಾಲಯ್ಯ ಘೋಷಣೆ ಮಾಡಿದ್ದಾರೆ. ಕೊರಟಾಲ ಶಿವ ಅವರು, ಬಾಲಯ್ಯನ ಮಾಸ್ ಅಪೀಲಿಗೆ ಹೊಂದಿಕೆ ಆಗುವ ಕತೆಯನ್ನು ರೆಡಿ ಮಾಡಿಕೊಂಡಿದ್ದು, ಈ ಸಿನಿಮಾವು ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಕತೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.

ಬಾಲಯ್ಯ ಬಹು ಬೇಗನೆ ಸಿನಿಮಾಗಳನ್ನು ಮುಗಿಸುತ್ತಾರೆ. ಜೂ ಎನ್​ಟಿಆರ್ ಮತ್ತು ಪ್ರಶಾಂತ್ ನೀಲ್ ಸಿನಿಮಾ ಬಿಡುಗಡೆ ಆಗಲು ಇನ್ನೂ ಆರೇಳು ತಿಂಗಳು ಹಿಡಿಲಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಅಷ್ಟರಲ್ಲಿ ಬಾಲಯ್ಯ ಹಾಗೂ ಕೊರಟಾಲ ಶಿವ ಸಿನಿಮಾ ಸಹ ಮುಗಿದರೆ ‘ದೇವರ 2’ ಸಿನಿಮಾವನ್ನು ಜೂ ಎನ್​ಟಿಆರ್ ಶುರು ಮಾಡುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *