Headlines

ನಿಮ್ಮ ಆಡಳಿತ ಸುವರ್ಣಾಕ್ಷರಗಳಲ್ಲಿ ಉಳಿಯಲಿದೆ: ಸಿದ್ದರಾಮಯ್ಯ ಗುಣಗಾನ ಮಾಡಿದ ವೇಣುಗೋಪಾಲ್​​

ಸಿದ್ದರಾಮಯ್ಯ ಗುಣಗಾನ ಮಾಡಿದ ವೇಣುಗೋಪಾಲ್​​Image Credit source: Tv9 Kannada

ಬೆಂಗಳೂರು, ಮೇ 28: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿದ್ದು, ಆ ಬೆನ್ನಲ್ಲೇ ಹೈಕಮಾಂಡ್​​ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ವಿಶೇಷ ಅಂದ್ರೆ ನಾಯಕತ್ವ ಬದಲಾವಣೆ ಸಂದರ್ಭದಲ್ಲಿಯೂ ರಾಜ್ಯ ನಾಯಕರು ಒಗ್ಗಟ್ಟಿನ ಸಂದೇಶ ಸಾರಿರೋದು ವಿಪಕ್ಷಗಳ ಹುಬ್ಬೇರಿಸಿದೆ. ಉಪಹಾರ ಕೂಟದಿಂದ ಹಿಡಿದು ರಾಜಭವನದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಪತ್ರ ನೀಡುವವರೆಗೂ ಡಿಸಿಎಂ ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಒಟ್ಟಾಗಿಯೇ ಕಾಣಿಸಿಕೊಂಡಿದ್ದಾರೆ. ಈ ಕುರಿತು ಎಕ್ಸ್​​ ಪೋಸ್ಟ್​​ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​​ ಸ್ವಾರ್ಥಕ್ಕಿಂತ ಪಕ್ಷ, ಅಧಿಕಾರಕ್ಕಿಂತ ಜನ, ಕಾಂಗ್ರೆಸ್‌ಗೆ ಪಕ್ಷವೇ ಕುಟುಂಬ, ಜನರೇ ಧ್ಯೇಯ ಎಂದು ಬರೆದುಕೊಂಡಿದ್ದಾರೆ.

ವೇಣುಗೋಪಾಲ್​​ ಪೋಸ್ಟ್​​ನಲ್ಲಿ ಏನಿದೆ?

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ನೀಡಿದ ಅದ್ಭುತ ಆಡಳಿತ ಅವಧಿಯ ಬಗ್ಗೆ ನಾವು ಎಲ್ಲರೂ ಅಪಾರ ಹೆಮ್ಮೆ ಹೊಂದಿದ್ದೇವೆ. ಅವರ ನಾಯಕತ್ವದಲ್ಲಿ ಕರ್ನಾಟಕವು ಕಾಗದದ ಮಟ್ಟದಲ್ಲೇ ಉಳಿಯದ ಪರಿವರ್ತನಾ ಅಭಿವೃದ್ಧಿಯನ್ನು ಕಂಡಿದ್ದು, ಸಮಾಜದ ಅಂಚಿನಲ್ಲಿರುವ ಪ್ರತಿಯೊಬ್ಬ ಕನ್ನಡಿಗನ ಬದುಕಿಗೂ ಸ್ಪರ್ಶಿಸಿದೆ. ಸರಳ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಹೊರಹೊಮ್ಮಿ, ತಮ್ಮ ತತ್ವನಿಷ್ಠೆ, ಜನಪರ ಬದ್ಧತೆ ಮತ್ತು ಆಡಳಿತ ಜಾಣ್ಮೆಯ ಬಲದಿಂದ ರಾಜ್ಯದ ಅತ್ಯುನ್ನತ ಹುದ್ದೆ ತಲುಪಿದ ನಾಯಕ ಸಿದ್ದರಾಮಯ್ಯ. ಬಡವರು, ಹಿಂದುಳಿದವರು ಹಾಗೂ ಸಮಾಜದ ಅಂಚಿನ ವರ್ಗಗಳ ಸಬಲೀಕರಣಕ್ಕಾಗಿ ಮಾಡಿದ ಕಾರ್ಯಗಳಿಂದ ಅವರ ಆಡಳಿತ ಇತಿಹಾಸದಲ್ಲಿ ಚಿನ್ನದ ಅಕ್ಷರಗಳಲ್ಲಿ ಉಳಿಯಲಿದೆ.

ಇದನ್ನೂ ಓದಿ: ಪ್ರಮಾಣವಚಕ್ಕೆ ಸಿದ್ಧತೆ; ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್

ಇಂದು ಪಕ್ಷದ ಹಿತದೃಷ್ಟಿಯಿಂದ ಅವರು ತೆಗೆದುಕೊಂಡ ನಿಸ್ವಾರ್ಥ ನಿರ್ಧಾರವನ್ನು ಕಾಂಗ್ರೆಸ್ ಅತ್ಯಂತ ಗೌರವದಿಂದ ಸ್ವಾಗತಿಸುತ್ತದೆ. ಅವರು ತೋರಿದ ಗೌರವಯುತ ಹಾಗೂ ಪ್ರೌಢ ನಡೆ, ಸಾರ್ವಜನಿಕ ಜೀವನದಲ್ಲಿರುವ ನಾಯಕರು ಹೇಗೆ ವರ್ತಿಸಬೇಕು ಎಂಬುದಕ್ಕೆ ಮಾದರಿಯಾಗಿದೆ. ಅವರ ಮುಂದಿನ ರಾಜಕೀಯ ಹಾಗೂ ಸಾರ್ವಜನಿಕ ಜೀವನಕ್ಕೆ ನಮ್ಮ ಹಾರೈಕೆಗಳು. ಕಾಂಗ್ರೆಸ್ ಪಕ್ಷದ ಅಮೂಲ್ಯ ನಾಯಕರಾಗಿ, ಅವರ ಜ್ಞಾನ ಮತ್ತು ಅನುಭವ ನಮ್ಮ ರಾಜಕೀಯ ಪಯಣದಲ್ಲಿ ಸದಾ ಅಪ್ರತಿಮವಾಗಿಯೇ ಉಳಿಯಲಿದೆ ಎಂದು ವೇಣುಗೋಪಾಲ್​ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *