
ನವದೆಹಲಿ, ಏಪ್ರಿಲ್ 16: ಲೋಕಸಭೆ ಅಧಿವೇಶನದಲ್ಲಿ ಇಂದು ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಮಹಿಳಾ ಮೀಸಲಾತಿ ಮಸೂದೆ ಕುರಿತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಮಾತನಾಡಿದ್ದಾರೆ. ಕಾಂಗ್ರೆಸ್ ಮಹಿಳಾ ಸಂಸದರಿಗೆ ಮೀಸಲಾತಿ ನೀಡುವುದನ್ನು ಬೆಂಬಲಿಸುತ್ತದೆಯಾದರೂ ಈಗಿರುವ ಚರ್ಚೆ ಅದರ ಬಗ್ಗೆ ಅಲ್ಲ. ಈ ಮಸೂದೆ ರಾಜಕೀಯದ ಉದ್ದೇಶವನ್ನು ಹೊಂದಿದೆ ಎಂಬ ಅಂಶದ ಬಗ್ಗೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಮಹಿಳಾ ಮೀಸಲಾತಿಯ ಪ್ರಸ್ತಾಪ ಚುನಾವಣಾ ಲಾಭವನ್ನು ಉಳಿಸಿಕೊಳ್ಳಲು ಎನ್‌ಡಿಎ ಸರ್ಕಾರದ ರಾಜಕೀಯ ಟ್ರಂಪ್ ಕಾರ್ಡ್ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದರು.
ಪ್ರಿಯಾಂಕಾ ಗಾಂಧಿಯ ಮಾತು ಕೇಳಿ ಗೃಹ ಸಚಿವ ಅಮಿತ್ ಶಾ ನಗುತ್ತಾ ಕುಳಿತಿದ್ದರು. ಅದನ್ನು ನೋಡಿದ ಪ್ರಿಯಾಂಕಾ ಗಾಂಧಿ ಅಮಿತ್ ಶಾ ಅವರನ್ನು ತತ್ವಜ್ಞಾನಿ ಮತ್ತು ರಾಜಕೀಯ ತಂತ್ರಜ್ಞ ಚಾಣಕ್ಯ ಅವರ ಜೊತೆ ಹೋಲಿಸಿ ತಮಾಷೆ ಮಾಡಿದ್ದಾರೆ. ಅಮಿತ್
ಶಾ ಮತ್ತು ಇತರ ಹಲವಾರು ಬಿಜೆಪಿ ಸಂಸದರು ತಮ್ಮ ಹೇಳಿಕೆಗೆ ನಗುತ್ತಿರುವುದನ್ನು ನೋಡಿದ ಪ್ರಿಯಾಂಕಾ ಗಾಂಧಿ, “ಗೃಹ ಸಚಿವರು ನಗುತ್ತಿದ್ದಾರೆ. ನೀವೆಲ್ಲರೂ ಸಂಪೂರ್ಣವಾಗಿ ಪ್ಲಾನ್ ಮಾಡಿಕೊಂಡೇ ಬಂದಿದ್ದೀರಿ. ಇಂದು ಚಾಣಕ್ಯ ಜೀವಂತವಾಗಿದ್ದರೆ ನಿಮ್ಮ ಕುತಂತ್ರವನ್ನು ನೋಡಿ ಅವರೂ ಆಘಾತಕ್ಕೊಳಗಾಗುತ್ತಿದ್ದರು” ಎಂದು ಹೇಳಿದ್ದಾರೆ. ಈ ವೇಳೆ ವಿರೋಧ ಪಕ್ಷದ ಸಂಸದರು ಮೇಜು ತಟ್ಟಿ ನಗುತ್ತಾ ಹೌದೆಂಬಂತೆ ಸಮ್ಮತಿ ವ್ಯಕ್ತಪಡಿಸಿದರು. ಅತ್ತ ಅಮಿತ್ ಶಾ ಕೂಡ ನಗುತ್ತಾ ಈ ತಮಾಷೆಯನ್ನು ಸ್ವೀಕರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ