Headlines

ನಿರ್ದೇಶಕ ರೋಹಿತ್ ಶೆಟ್ಟಿ ತಲೆಗೆ ಬಾಟಲಿಯಿಂದ ಹೊಡೆದರಾ ದೀಪಿಕಾ ಪಡುಕೋಣೆ? – Kannada News | Deepika Padukone Viral Bottle Video: Chennai Express Prank with Rohit Shetty Explains Fake Blood

ಬಾಲಿವುಡ್ ಅಷ್ಟೇ ಅಲ್ಲದೆ, ಈಗ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಮಿಂಚುತ್ತಿರುವ ನಟಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿರುತ್ತಾರೆ. ಪ್ರಭಾಸ್ ನಟನೆಯ ‘ಕಲ್ಕಿ’ ಚಿತ್ರದ ಯಶಸ್ಸಿನ ಬೆನ್ನಲ್ಲೇ, ಈಗ ಅಟ್ಲೀ ನಿರ್ದೇಶನದ ಹಾಗೂ ಅಲ್ಲು ಅರ್ಜುನ್ ನಟನೆಯ ‘ರಾಕಾ’ ಚಿತ್ರಕ್ಕೂ ಇವರೇ ನಾಯಕಿ . ಸಿನಿಮಾ ಬದುಕು, ವೈಯಕ್ತಿಕ ಜೀವನದ ನಡುವೆ ದೀಪಿಕಾ ಅವರ ಹಳೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಏನಿದು ಬಾಟಲಿ ಪ್ರಹಸನ?

ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ‘ಚೆನ್ನೈ ಎಕ್ಸ್‌ಪ್ರೆಸ್’ ಸೆಟ್‌ನಲ್ಲಿ ನಡೆದ ಕುತೂಹಲಕಾರಿ ಘಟನೆ ಇದಾಗಿದೆ. 2013ರಲ್ಲಿ ಬಿಡುಗಡೆಯಾಗಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಈ ಚಿತ್ರದ ಚಿತ್ರೀಕರಣದ ವೇಳೆ ಒಂದು ವಿಚಿತ್ರ ಸನ್ನಿವೇಶ ಎದುರಾಗಿತ್ತು.

ಸೆಟ್‌ನಲ್ಲಿ ದೀಪಿಕಾ ಅವರು ವಿಶ್ರಾಂತಿ ಪಡೆಯುತ್ತಾ ಕೂಲ್ ಡ್ರಿಂಕ್ ಕುಡಿಯುತ್ತಿದ್ದಾಗ, ನಿರ್ದೇಶಕ ರೋಹಿತ್ ಶೆಟ್ಟಿ ಅವರು ಏನೋ ವಿಷಯಕ್ಕೆ ಅವರನ್ನು ಅಡ್ಡಗಟ್ಟಿದ್ದಾರೆ. ಇದರಿಂದ ತಮಾಷೆಯಾಗಿ ಸಿಟ್ಟಾದ ದೀಪಿಕಾ, ತಕ್ಷಣವೇ ತಮ್ಮ ಕೈಯಲ್ಲಿದ್ದ ಬಾಟಲಿಯನ್ನು ತೆಗೆದುಕೊಂಡು ರೋಹಿತ್ ಶೆಟ್ಟಿ ಅವರ ತಲೆಗೆ ಹೊಡೆದಿದ್ದಾರೆ! ಬಾಟಲಿ ಚೂರು ಚೂರಾಗಿ ಒಡೆದು, ರೋಹಿತ್ ಅವರ ತಲೆಯಿಂದ ರಕ್ತ ಸುರಿಯಲಾರಂಭಿಸಿದೆ. ಇದನ್ನು ನೋಡಿದ ಸೆಟ್‌ನಲ್ಲಿದ್ದವರೆಲ್ಲ ಒಂದು ಕ್ಷಣ ದಿಗ್ರಮಗೊಂಡಿದ್ದಾರೆ.

ವಿಡಿಯೋದ ಹಿಂದಿರುವ ಅಸಲಿ ಸತ್ಯ!

ಆದರೆ ಗಾಬರಿಪಡುವ ಅಗತ್ಯವಿಲ್ಲ, ಇದೆಲ್ಲವೂ ಕೇವಲ ತಮಾಷೆಗಾಗಿ ನಡೆದ ಘಟನೆ. ದೀಪಿಕಾ ಹೊಡೆದಿದ್ದು ನಿಜವಾದ ಗಾಜಿನ ಬಾಟಲಿಯಿಂದಲ್ಲ, ಬದಲಾಗಿ ಸಿನಿಮಾಗಳಲ್ಲಿ ಬಳಸುವ ‘ಸಕ್ಕರೆ ಬಾಟಲಿ’ ಇಂದ. ಸಾಮಾನ್ಯವಾಗಿ ‘ಬಿಗ್ ಬಾಸ್’ ಅಂತಹ ರಿಯಾಲಿಟಿ ಶೋಗಳಲ್ಲಿ ಅಥವಾ ಸಿನಿಮಾದ ಸಾಹಸ ದೃಶ್ಯಗಳಲ್ಲಿ ಗಾಯವಾಗದಂತೆ ಇಂತಹ ಬಾಟಲಿಗಳನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ಗರ್ಭಿಣಿ ಆದ ನಂತರವೂ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಿದ ದೀಪಿಕಾ ಪಡುಕೋಣೆ

ರೋಹಿತ್ ಶೆಟ್ಟಿ ಅವರ ತಲೆಗೆ ರಕ್ತ ಬಂದಂತೆ ಕಂಡಿದ್ದು ಕೂಡ ಮೇಕಪ್ ಟ್ರಿಕ್ ಅಷ್ಟೇ. ಚಿತ್ರೀಕರಣದ ನಡುವೆ ಸುಮ್ಮನೆ ತಮಾಷೆಗಾಗಿ ಈ ‘ಬ್ಲೂಪರ್’ ವಿಡಿಯೋ ಮಾಡಲಾಗಿತ್ತು. ಈಗ ಈ ಹಳೆಯ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದ್ದು, “ದೀಪಿಕಾ ಅವರಿಗೆ ಇಷ್ಟೊಂದು ಕೋಪವೇ?” ಎಂದು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *