Headlines

ನೀವು ದಲಿತ ವಿರೋಧಿ, ಹಿಂದೂಗಳ ಪರ: ಜೆಡಿಎಸ್ ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ – Kannada News | Hassan MLA A. Manju’s Speech Interrupted by DSS Leader while Ambedkar Jayanti fuction

ಹಾಸನ, ಏಪ್ರಿಲ್​ 14: ಜಿಲ್ಲೆ ಅರಕಲಗೂಡು ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜೆಡಿಎಸ್​ ಶಾಸಕ ಎ.ಮಂಜು ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಶಾಸಕ ಎ.ಮಂಜು ಭಾಷಣ ವೇಳೆ ದಲಿತ ವಿರೋಧಿ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಶ್ರೀಧರಗೌಡ ಬೆಂಬಲಿಗ ಹಾಗೂ ಡಿಎಸ್ಎಸ್ ಮುಖಂಡ ನಟರಾಜ್​​ ಘೋಷಣೆ ಕೂಗಿದ್ದಾರೆ. ನೀವು ದಲಿತ ವಿರೋಧಿ, ಬರೀ ಹಿಂದೂಗಳ ಪರ ಎಂದಿದ್ದಾರೆ. ನಟರಾಜ್ ಘೋಷಣೆ ಕೂಗುತ್ತಿದ್ದರಿಂದ ಸಿಟ್ಟಾದ ಶಾಸಕ ಎ.ಮಂಜು, ಸುಮ್ನೇ ಕೂತ್ಕತಿಯಾ ಇಲ್ವಾ, ಜಾಸ್ತಿ ಮಾತಾಡಿದ್ರೆ ಅಷ್ಟೇ. ನನಗೆ ನಿನ್ನ ಸರ್ಟಿಫಿಕೆಟ್ ಬೇಕಾಗಿಲ್ಲ. ಇದೆಲ್ಲ ಚೆನ್ನಾಗಿರಲ್ಲ, ಹೊರಗೆ ಕಳುಹಿಸಬೇಕಾಗುತ್ತೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *