Headlines

ನೂತನ ದಂಪತಿಗಳಿಂದ ಜಗಮೆಚ್ಚುವ ಕಾರ್ಯ: ಸರ್ಕಾರಿ ಶಾಲೆಗಳಿಗೆ ರಶ್ಮಿಕಾ-ವಿಜಯ್ ದೇಣಿಗೆ – Kannada News | Rashmika and Vijay giving scholarships to students of 44 government schools

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಮದುವೆ ಆಗಿದ್ದಾರೆ. ಇವರ ಮದುವೆ ಭಾರಿ ಅದ್ಧೂರಿಯಾಗಿ ನೆರವೇರಿದೆ. ಇವರ ಮದುವೆಗೆ ಸುಮಾರು ಕೋಟಿಗಳೇ ಖರ್ಚಾಗಿವೆ. ಇವರು ಮದುವೆಗೆ ಧರಿಸಿದ್ದ ಚಿನ್ನದ ಬೆಲೆಯೇ ಸುಮಾರು 6-7 ಕೋಟಿಗಳದ್ದಾಗಿತ್ತು ಎನ್ನಲಾಗುತ್ತಿದೆ. ಮದುವೆಗೆ ಭಾರಿ ಮೊತ್ತ ಖರ್ಚು ಮಾಡಿರುವ ಈ ದಂಪತಿ ಇದೀಗ ತಮ್ಮ ದುಡಿಮೆಯ ಕೆಲ ಭಾಗವನ್ನು ಸಮಾಜ ಸೇವೆಗೂ ಬಳಸುತ್ತಿದ್ದಾರೆ. ಈಗಾಗಲೇ ತಮ್ಮ ಅಭಿಮಾನಿಗಳಿಗೆ ಸಿಹಿ ಕಳಿಸುವ ಮೂಲಕ ಗಮನ ಸೆಳೆದಿರುವ ರಶ್ಮಿಕಾ ಮತ್ತು ವಿಜಯ್ ಇದೀಗ ಅದಕ್ಕೂ ಮಿಗಿಲಾದ ಸೇವೆಯೊಂದಕ್ಕೆ ಕೈ ಹಾಕಿದ್ದಾರೆ.

ವಿಜಯ್ ದೇವರಕೊಂಡ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಸುಮಾರು 44 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದ್ದಾರೆ. ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಅಚ್ಚಂಪೇಟೆ ವಿಭಾಗದ ಸುಮಾರು 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ‘ದೇವರಕೊಂಡ ಚಾರಿಟಬಲ್ ಟ್ರಸ್ಟ್’ ಮೂಲಕ ವಿದ್ಯಾರ್ಥಿವೇತನ ನೀಡಲು ವಿಜಯ್ ಮತ್ತು ರಶ್ಮಿಕಾ ನಿರ್ಧರಿಸಿದ್ದಾರೆ.

ಮದುವೆಯ ನಂತರ ವಿಜಯ್ ಅವರ ಪೂರ್ವಜರ ಗ್ರಾಮವಾದ ತುಮ್ಮನಪೇಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ. ಈ ವೇಳೆ ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ ಕೂಡ ಉಪಸ್ಥಿತರಿದ್ದರು. ಈಗಾಗಲೇ ಈ ಜೋಡಿ ದೇಶದ ವಿವಿಧೆಡೆ ದೇವಸ್ಥಾನಗಳಲ್ಲಿ ಅನ್ನದಾನ ಮಾಡಿದೆ ಮತ್ತು ಅಭಿಮಾನಿಗಳಿಗಾಗಿ ಸಿಹಿಯನ್ನು ವಿತರಿಸಿದೆ. ಇದೀಗ ಸರ್ಕಾರಿ ಶಾಲೆ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮದುವೆ ಬಳಿಕ ಊರಿಗೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾಗೆ ಭರ್ಜರಿ ಸ್ವಾಗತ

ವಿಜಯ್ ಮತ್ತು ರಶ್ಮಿಕಾ ಫೆಬ್ರವರಿ 26, 2024 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ರಶ್ಮಿಕಾ ಮತ್ತು ವಿಜಯ್ ಕಾಲಿಟ್ಟಿದ್ದಾರೆ. ಇಬ್ಬರೂ ಕಳೆದ ಕೆಲವಾರು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು, ಇದೀಗ ಕೊನೆಗೂ ತಮ್ಮ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಿದ್ದಾರೆ. ವಿವಾಹದ ನಂತರ ತೆಲಂಗಾಣದ ತಮ್ಮ ಹಳ್ಳಿಯ ಮನೆಯಲ್ಲಿ ಗೃಹಪ್ರವೇಶ ಮತ್ತು ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಈ ದಂಪತಿ ನೆರವೇರಿಸಿದ್ದಾರೆ.

ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ವಿವಾಹ ಆರತಕ್ಷತೆಯನ್ನು ಈ ಜೋಡಿ ಹಮ್ಮಿಕೊಂಡಿದೆ. ಈ ಸಮಾರಂಭಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು, ಬಾಲಿವುಡ್ ತಾರೆಯರು ಹಾಗೂ ರಾಜಕೀಯ ಮುಖಂಡರು ಆಗಮಿಸುವ ನಿರೀಕ್ಷೆಯಿದೆ. ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ಈ ಜೋಡಿ ಅದ್ಧೂರಿ ಆರತಕ್ಷತೆ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *