ಬೆಂಗಳೂರು, (ಜೂನ್ 04): ಡಿಕೆ ಶಿವಕುಮಾರ್ (DK Shivakuamr) ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಡಿಕೆ ಶಿವಕುಮಾರ್ ಜೊತೆ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವ ವಚನ ಸ್ವೀಕರಿಸಿದ್ದ 13 ನೂತನ ಸಚಿವರಿಗೆ ಇಲಾಖೆಗಳ (Portfolios) ಜವಾಬ್ದಾರಿ ನೀಡಲಾಗಿದೆ. ಈ ಪೈಕಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಣಕಾಸು ಇಲಾಖೆ, DPAR ಸೇರಿದಂತೆ ಇತರೆ ಕೆಲ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದು, ಇನ್ನುಳಿದ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಇದರೊಂದಿಗೆ ಆಯಕಟ್ಟಿನ ಹಣಕಾಸು, ಜಲಸಂಪನ್ಮೂಲ, ಗೃಹ, ಲೋಕೋಪಯೋಗಿ, ಬೆಂಗಳೂರು ಅಭಿವೃದ್ದಿ ಮುಂತಾದ ಖಾತೆಗಳು ಯಾರಿಗೆ ಹಂಚಿಕೆಯಾಗಲಿದೆ ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ.
ಕೆಲವರಿಗೆ ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಿಭಾಯಿಸಿದ್ದ ಇಲಾಖೆಗಳ ಜವಾಬ್ದಾರಿಯನ್ನೇ ನೀಡಲಾಗಿದೆ. ಸಚಿವ ಕೃಷ್ಣ ಭೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ (ಜಿಬಿಎ) ನೀಡಲಾಗಿದೆ. ಇನ್ನು ಬೆಂಗಳೂರು ನಗರಭಿವೃದ್ಧಿ ಮೇಲೆ ಕಣ್ಣಿಟ್ಟಿದ್ದ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ನೀಡಲಾಗಿದೆ.
ಯಾರಿಗೆ ಯಾವ ಖಾತೆ?
ಡಿಕೆ ಶಿವಕುಮಾರ್ (ಮುಖ್ಯಮಂತ್ರಿ):- ಹಣಕಾಸು ಇಲಾಖೆ, DPAR ಮತ್ತು ಇತರೆ ಎಲ್ಲಾ ಖಾತೆಗಳು.
ಡಾ.ಜಿ.ಪರಮೇಶ್ವರ್ (ಉಪಮುಖ್ಯಮಂತ್ರಿ) :ಕಂದಾಯ ಹಾಗೂ ಕ್ರೀಡಾ ಹಾಗೂ ಯುವಜನ ಸಬಲೀಕರಣ.
ಪ್ರಿಯಾಂಕ್ ಖರ್ಗೆ- ಗೃಹ ಹಾಗೂ ಐಟಿ-ಬಿಟಿ ಇಲಾಖೆ
ಕೆ.ಜೆ.ಜಾರ್ಜ್- ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ
ಎಂ.ಬಿ.ಪಾಟೀಲ್- ಬೃಹತ್ & ಮಧ್ಯಮ ಕೈಗಾರಿಕೆ ಇಲಾಖೆ
ಸತೀಶ್ ಜಾರಕಿಹೊಳಿ– ಲೋಕೋಪಯೋಗಿ ಇಲಾಖೆ
ಕೃಷ್ಣ ಭೈರೇಗೌಡ– ಬೆಂಗಳೂರು ನಗರಾಭಿವೃದ್ಧಿ(ಜಿಬಿಎ)
ರಾಮಲಿಂಗಾರೆಡ್ಡಿ– ಜಲಸಂಪನ್ಮೂಲ ಇಲಾಖೆ
ಕೆ.ಹೆಚ್.ಮುನಿಯಪ್ಪ– ಆಹಾರ & ನಾಗರಿಕ ಸರಬರಾಜು ಇಲಾಖೆ
ಭೈರತಿ ಸುರೇಶ್– ಸಾರಿಗೆ ಇಲಾಖೆ
ಯು.ಟಿ.ಖಾದರ್– ಆರೋಗ್ಯ ಇಲಾಖೆ
ಡಾ.ಯತೀಂದ್ರ ಸಿದ್ದರಾಮಯ್ಯ– ನಗರಾಭಿವೃದ್ಧಿ ಇಲಾಖೆ
ಶರಣಪ್ರಕಾಶ್ ಪಾಟೀಲ್– ವೈದ್ಯಕೀಯ ಶಿಕ್ಷಣ ಇಲಾಖೆ
ಈಶ್ವರ್ ಖಂಡ್ರೆ- ಗ್ರಾಮೀಣಾಭಿವೃದ್ಧಿ ಇಲಾಖೆ