ಬೆಂಗಳೂರು, ಆಗಸ್ಟ್ 04: ಮಾಣವಚನ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು ಹಾಜರಿ ಬಗ್ಗೆ ಹರಿದಾಡುತ್ತಿದ್ದ ಅಸಮಾಧಾನದ ವದಂತಿಗಳ ಸಂಬಂಧ ಸಚಿವ ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯನವರು ಸಂತೋಷವಾಗಿದ್ದು, ಅವರು ಶಿಫಾರಸ್ಸು ಮಾಡಿದ್ದ ಬಹುತೇಕ ಎಲ್ಲರಿಗೂ ಸಚಿವ ಸ್ಥಾನ ದೊರಕಿದೆ. ಯಾವುದೋ ಒಂದು ಸಣ್ಣ ಘಟನೆ ಅವರ ಮನಸ್ಸಿಗೆ ಬೇಸರ ತಂದಿರಬಹುದೇ ಹೊರತು, ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.