Headlines

ನೂರು ಮೊಮೊ ಅಂಗಡಿಗಳನ್ನು ಕೊಳ್ಳಬಹುದಿತ್ತು, ಮೊಮೊ ತಿನ್ನುವ ಆಸೆಗೆ ಬಾಲಕ ಮಾಡಿದ್ದೇನು ನೋಡಿ – Kannada News | UP Teen Hands Over Family Jewellery to Momo Vendor, Case Raises Eyebrows

ಸಾಮಾನ್ಯವಾಗಿ ಮಕ್ಕಳಿಗೆ ಬೇಕರಿ ತಿನಿಸುಗಳು, ಪಾನಿಪುರಿ, ಮೊಮೊ, ಸಿಹಿ ತಿನಿಸುಗಳೆಂದರೆ ಇಷ್ಟ. ಒಂದೊಮ್ಮೆ ಮನೆಯಲ್ಲಿ ಹಣ ಕೊಟ್ಟಿಲ್ಲವೆಂದರೆ ಅಲ್ಲೇ ಅಪ್ಪನ ಜೇಬಿನಲ್ಲಿದ್ದ ಐದೋ ಹತ್ತೋ ರೂಪಾಯಿ ಕದ್ದು ತಮಗಿಷ್ಟದ ತಿನಿಸನ್ನು ತಿನ್ನುವುದು ಸರ್ವೇ ಸಾಮಾನ್ಯ. ಆದರೆ ಮೊಮೊ ತಿನ್ನಲು ಬಾಲಕನೊಬ್ಬ ಮನೆಯಲ್ಲಿರುವ 85 ಲಕ್ಷ ರೂ. ಬೆಲೆ ಬಾಳುವ ಆಭರಣ(Jewellery)ವನ್ನೇ ಕೊಟ್ಟಿರುವ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ, 7ನೇ ತರಗತಿ ಬಾಲಕ ಮೊಮೊ ತಿನ್ನುವ ಪ್ರೀತಿ ಅನಿರೀಕ್ಷಿತ ಮತ್ತು ಆಘಾತಕಾರಿ ತಿರುವು ಪಡೆದುಕೊಂಡಿತ್ತು. ಮನೆಯ ಹತ್ತಿರ ಮೊಮೊ ಅಂಗಡಿ ನಡೆಸುತ್ತಿದ್ದ ಮೂವರು ಬಾಲಕನಿಗೆ ಉಚಿತವಾಗಿ ಮೊಮೊ ಕೊಡುವ ಆಮಿಷವೊಡ್ಡಿ ಆತನಿಂದ ಮನೆಯಿಂದ ಒಂದೊಂದೇ ಆಭರಣವನ್ನು ತರಿಸಿಕೊಂಡಿದ್ದಾರೆ.

ಈ ಪ್ರಕರಣ ಉತ್ತರ ಪ್ರದೇಶದ ಡಿಯೋರಿಯಾ ನಗರದಲ್ಲಿ ನಡೆದಿದೆ. ದೂರಿನ ಪ್ರಕಾರ, ವಾರಾಣಸಿಯ ದೇವಾಲಯದ ಅರ್ಚಕ ವಿಮ್ಲೇಶ್ ಮಿಶ್ರಾ, ತಮ್ಮ ಮಗನಿಗೆ ಮೊಮೊ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಮೊಮೊ ಅಂಗಡಿ ನಡೆಸುವ ಮೂವರು ವ್ಯಕ್ತಿಗಳು ಇದನ್ನು ಬಳಸಿಕೊಂಡು ಹುಡುಗನನ್ನು ಮೋಸಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಂಗಡಿಯ ಮಾಲೀಕರು ತಮ್ಮ ಮಗನಿಗೆ ಮನೆಯಿಂದ ಆಭರಣ ತಂದರೆ ಉಚಿತವಾಗಿ ಮೊಮೊ ನೀಡುವುದಾಗಿ ಹೇಳಿದ್ದರು ಎಂದು ವಿಮ್ಲೇಶ್ ಆರೋಪಿಸಿದ್ದಾರೆ. ನಿಧಾನವಾಗಿ, ಹುಡುಗ ತನ್ನ ಮನೆಯಿಂದ ಆಭರಣಗಳನ್ನು ತೆಗೆದುಕೊಂಡು ಎಲ್ಲವನ್ನೂ ಮೂವರಿಗೆ ಒಪ್ಪಿಸಿದ್ದ. ವಿಮಲೇಶ್ ಅವರ ಸಹೋದರಿ ಅವರ ಮನೆಗೆ ಭೇಟಿ ನೀಡಿ ಅವರ ಆಭರಣಗಳನ್ನು ಕೇಳಿದಾಗ ಸತ್ಯ ಹೊರಬಂದಿತ್ತು.

ಮತ್ತಷ್ಟು ಓದಿ: ಬೆಂಗಳೂರಲ್ಲಿ ಮನೆಗೆಲಸದವರಿಂದಲೇ ಬಿಲ್ಡರ್​​ ಮನೆಗೆ ಕನ್ನ: ದೋಚಿದ್ದು 18 ಕೋಟಿ ಮೌಲ್ಯದ ಸಂಪತ್ತು!

ಕುಟುಂಬವು ಕಪಾಟು ತೆರೆದ ತಕ್ಷಣ, ಎಲ್ಲವೂ ಕಾಣೆಯಾಗಿರುವುದನ್ನು ಕಂಡು ಆಘಾತಕ್ಕೊಳಗಾಯಿತು. ಅವರು ಬಾಲಕನನ್ನು ವಿಚಾರಿಸಿದಾಗ, ಅವನು ಆಭರಣಗಳನ್ನು ಮೊಮೊ ಮಾರಾಟಗಾರರಿಗೆ ನೀಡಿದ್ದೇನೆ ಎಂದು ಹೇಳಿದ್ದಾನೆ, ಆದ್ದರಿಂದ ತಾನು ನಿತ್ಯವೂ ಉಚಿತವಾಗಿ ಮೋಮೋ ತಿನ್ನಬಹುದು ಎಂದಿದ್ದಾನೆ.
ನಂತರ ವಿಮಲೇಶ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿ, ಮೂವರು ಆರೋಪಿಗಳ ಹೆಸರನ್ನು ಕೊಟ್ಟಿದ್ದಾರೆ. ಆಭರಣದ ಪ್ರಸ್ತುತ ಮೌಲ್ಯ 85 ಲಕ್ಷ ರೂ. ಎಂದು ಅವರು ಹೇಳಿದ್ದಾರೆ. ದೂರಿನ ನಂತರ, ಪೊಲೀಸರು ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *