Headlines

ನೆಪೋಟಿಸಂ ಇರೋದು ನಿಜ, ಅದರಿಂದಲೇ ನನಗೆ ಕೆಲಸ ಸಿಗುತ್ತಿದೆ: ಆಮಿರ್ ಖಾನ್ ಮಗನ ನೇರ ಮಾತು – Kannada News | Ek Din actor Junaid Khan open statement on Nepotism and Aamir Khan legacy

ಬಾಲಿವುಡ್‌ನಲ್ಲಿ ನೆಪೋಟಿಸಂ (Nepotism) ಎಂಬ ಪದದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಲೇ ಇರುತ್ತದೆ. ನೆಪೋಟಿಸಂ ಇದೆ ಎಂಬುದನ್ನು ಹಲವು ಸ್ಟಾರ್ ಕಿಡ್​ಗಳು ಒಪ್ಪುವುದಿಲ್ಲ. ಆದರೆ, ಸೂಪರ್ ಸ್ಟಾರ್ ಆಮಿರ್ ಖಾನ್ (Aamir Khan) ಅವರ ಪುತ್ರ ಜುನೈದ್ ಖಾನ್ ಈ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೆ ಮಾತನಾಡಿದ್ದಾರೆ. ತಮಗೆ ಚಿತ್ರರಂಗದಲ್ಲಿ ಸಿಗುತ್ತಿರುವ ಅವಕಾಶಗಳ ಹಿಂದೆ ತಮ್ಮ ತಂದೆಯ ಹೆಸರಿದೆ ಎಂಬ ವಾಸ್ತವವನ್ನು ಜುನೈದ್ ಖಾನ್ (Junaid Khan) ಅವರು ಒಪ್ಪಿಕೊಂಡಿದ್ದಾರೆ. ನೆಪೋಟಿಸಂ ಬಗ್ಗೆ ಅವರು ನೇರವಾಗಿ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಜುನೈದ್ ಖಾನ್, ‘ನೆಪೋಟಿಸಂ ಎಂಬ ಪದ ಕೇಳಿದರೆ ನನಗೆ ಕಿರಿಕಿರಿಯಾಗುವುದಿಲ್ಲ. ಏಕೆಂದರೆ ಅದು ನಿಜ. ನಾನು ಆಮಿರ್ ಖಾನ್ ಮಗ ಎನ್ನುವ ಕಾರಣಕ್ಕಾಗಿಯೇ ನನಗೆ ಸಾಕಷ್ಟು ಕೆಲಸಗಳು ಸಿಗುತ್ತಿವೆ’ ಎಂದು ಹೇಳಿದ್ದಾರೆ. ಸತತ ಸೋಲುಗಳ ನಂತರವೂ ಅವಕಾಶ ಸಿಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಅವರು, “ಸತತ ಎರಡು ಫ್ಲಾಪ್‌ಗಳ ನಂತರವೂ ನನಗೆ ಕೆಲಸ ಸಿಗುತ್ತಿದೆ. ಮೊದಲು ಕೆಲಸ ಮಾಡಲು ಬಿಡಿ’ ಎಂದಿದ್ದಾರೆ.

ನಿರ್ಮಾಪಕರು ನಟರನ್ನು ಆಯ್ಕೆ ಮಾಡುವಾಗ ಕೇವಲ ಪ್ರತಿಭೆಯನ್ನಷ್ಟೇ ನೋಡುವುದಿಲ್ಲ, ಬದಲಾಗಿ ಆ ನಟನಿಗೆ ಮಾರುಕಟ್ಟೆಯಲ್ಲಿ ಎಷ್ಟು ಬೇಡಿಕೆಯಿದೆ ಎಂಬುದನ್ನು ನೋಡುತ್ತಾರೆ ಎಂದು ಜುನೈದ್ ಅಭಿಪ್ರಾಯಪಟ್ಟಿದ್ದಾರೆ. ‘ನಿರ್ಮಾಪಕರು ಸಿನಿಮಾ ಮಾರಾಟ ಮಾಡಬೇಕಿರುತ್ತದೆ. ಹಾಗಾಗಿ ಅವರು ಮಾರಾಟವಾಗುವ ಮುಖಗಳನ್ನೇ ಹುಡುಕುತ್ತಾರೆ. ಇಲ್ಲಿ ಪಾತ್ರಕ್ಕೆ ಯಾರು ಸೂಕ್ತ ಎನ್ನುವುದಕ್ಕಿಂತ, ಯಾರಿಂದ ಸಿನಿಮಾ ಚೆನ್ನಾಗಿ ಬಿಸಿನೆಸ್ ಮಾಡುತ್ತದೆ ಎಂಬುದು ಮುಖ್ಯವಾಗುತ್ತದೆ. ಇದು ಕೇವಲ ಇನ್ಸೈಡರ್ ಮತ್ತು ಔಟ್‌ಸೈಡರ್ ನಡುವಿನ ಹೋರಾಟವಲ್ಲ. ಬದಲಾಗಿ ಸರಿಯಾದ ಪಾತ್ರಕ್ಕೆ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವುದು ಮುಖ್ಯ’ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಮಗನ ಸಿನಿಮಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಆಮಿರ್ ಖಾನ್; ವಿಡಿಯೋ ವೈರಲ್

ಜುನೈದ್ ಖಾನ್ 2024ರಲ್ಲಿ ನೆಟ್‌ಫ್ಲಿಕ್ಸ್‌ನ ‘ಮಹಾರಾಜ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಖುಷಿ ಕಪೂರ್ ಜೊತೆ ‘ಲವ್ಯಾಪ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರಾದರೂ ಅದು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಈ ವರ್ಷ ಮೇ 1ರಂದು ಬಿಡುಗಡೆಯಾದ ಅವರ ‘ಏಕ್ ದಿನ್’ ಚಿತ್ರ ಕೂಡ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು, ಕಲೆಕ್ಷನ್ ವಿಚಾರದಲ್ಲಿ ಹಿನ್ನಡೆ ಅನುಭವಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *